ಸೋಂಕಿತರ ಮನೆಗೆ ಪೋಸ್ಟರ್ ಅಂಟಿಸಲಾಗುವುದು- ಗೌಸ್‌ಸಾಬ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಶ್ರೀನಿವಾಸಪುರ: ಕರೋನಾ ವೈರಸ್ನ ಎರಡನೇ ಅಲೆ ಎಲ್ಲೆಡೆ ಹರಡುತ್ತಿದೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ. ಗ್ರಾಮೀಣ ಬಾಗದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ ಸೋಂಕಿತ ಮನೆಗಳಿಗೆ ಪೋಸ್ಟರ್ ಕಡ್ಡಾಯವಾಗಿ ಅಂಟಿಸಲಾಗುವುದು . ಕೋವಿಡ್ ಸೋಂಕಿತ ವ್ಯಕ್ತಿ ವಿನಾಕಾರಣ ಹೊರಗೆ ಓಡಾಡಿದರೆ ಸ್ಥಳದಲ್ಲಿಯೇ ಎಫ್.ಐ.ಆರ್ ದಾಖಲಿಸುವ ವಿಶೇಷ ಜವಾಬ್ದಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಗಿದೆ , ಸೋಂಕಿತ ವ್ಯಕ್ತಿಯ ಭೇಟಿ ಸ್ಥಳದಲ್ಲಿ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಲಾಗುವುದು . ಆದ್ದರಿಂದ ಸೋಂಕಿತ ವ್ಯಕ್ತಿಗಳು ಬೇಜವಾಬ್ದಾರಿಯಿಂದ ವರ್ತನೆ ಮಾಡಿದರೆ ಸಾರ್ವಜನಿಕರು ಪಿ.ಡಿ.ಓ ಗೆ ದೂರು ಸಲ್ಲಿಸಬಹುದು , ಕೂಡಲೇ ಪೋಲೀಸ್ , ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೆಲವಂಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿಅಧಿಕಾರಿ ಎಂ . ಗೌಸ್‌ಸಾಬ್ ತಿಳಿಸಿದ್ದಾರೆ .