JANANUDI.COM NETWORK
ವಕ್ವಾಡಿ : ಸ್ವಾಸ್ಥ್ಯ ಸಮಾಜಕ್ಕೆ ಪ್ರಜ್ಞಾವಂತ ಯುವಕರ ಪಾಲು ಮಹತ್ತರವಾದದ್ದು. ಊರಿನ ಸಮಗ್ರ ಅಭಿವೃದ್ಧಿಗಾಗಿ ಯುವಕರು ದುಡಿಯಬೇಕು,ಯುವ ಪೀಳಿಗೆಯಲ್ಲಿರುವ ಧನಾತ್ಮಕ ಚಿಂತನೆಗಳನ್ನು ದೇಶಕ್ಕೆ ಮತ್ತು ಸಮಾಜಕ್ಕೆ ಪೂರಕವಾಗಿ ಬಳಕೆ ಮಾಡಿಕೊಳ್ಳುವುದೇ ಸಂಘಟನೆಯ ಧೋರಣೆಯಾಗಬೇಕು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಯುವಶಕ್ತಿ ಮಿತ್ರ ಮಂಡಲಿ (ರಿ.) ಹೆಗ್ಗಾರ್ ಬೈಲು, ವಕ್ವಾಡಿ ಇದರ ಬೆಳ್ಳಿ ಹಬ್ಬದ ಪ್ರಯಕ್ತ ಹಮ್ಮಿಕೊಂಡ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಪಂಚದ ಯಾವುದೇ ದೇಶಗಳಲ್ಲೂ ಇಲ್ಲದಷ್ಟು ಯುವಶಕ್ತಿ ನಮ್ಮ ದೇಶದಲ್ಲಿದೆ. ಯುವಶಕ್ತಿ ಮಿತ್ರಮಂಡಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಸಮಾಜಿಕ ಜವಾಬ್ದಾರಿ ವಹಿಸಿಕೊಂಡು ಬಂದಿದೆ. ಸಂಸ್ಥೆ ಸೂರ್ಯ ಚಂದ್ರರಿರುವ ಕಾಲದವರೆಗೂ ಸಮಾಜದ ಧ್ವನಿಯಾಗಿರಲಿ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಸತೀಶ್ ಶೆಟ್ಟಿ ವಕ್ವಾಡಿ ಅವರಿಗೆ ಯುವಸ್ಪೂರ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಾವಾರ ಗ್ರಾಮ ಪ೦ಚಾಯತ್ ಅಧ್ಯಕ್ಷೆ ಆಶಾಲತಾ ಶೆಟ್ಟಿ ವಹಿಸಿದ್ದರು. ಸಭಾಕಾರ್ಯಕ್ರಮದಲ್ಲಿ ಭೂ ಅಭಿವೃದ್ಧಿ ಬ್ಯಾ೦ಕ್,
ಕು೦ದಾಪುರದ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕಲಾಕ್ಷೇತ್ರ ಕು೦ದಾಪುರದ ಅಧ್ಯಕ್ಷ ಕಿಶೋರ್ ಕುಮಾರ್, ಜನಪ್ರತಿನಿಧಿ ಪತ್ರಿಕೆಯ ಸ೦ಪಾದಕ ಸುಬ್ರಹ್ಮಣ್ಯ ಪಡುಕೋಣೆ, ಪ್ರಸಾದ್ ನೇತ್ರಾಲಯ ಉಡುಪಿಯ ಸಾರ್ವಜನಿಕ ಸ೦ಪರ್ಕಾಧಿಕಾರಿಮೋಹನದಾಸ್, ಮಿತ್ರ ಸ೦ಗಮ ಬಿಜಾಡಿ-ಗೋಪಾಡಿಯ ಅಧ್ಯಕ್ಷ ಚ೦ದ್ರಶೇಖರ ಬೀಜಾಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ೦ಸ್ಥೆಯ ಸದಸ್ಯ ದಿವಂಗತ ರವಿಚಂದ್ರ ಕುಲಾಲ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಸ೦ಸ್ಥೆಯ ಗೌರವಾಧ್ಯಕ್ಷ ರ೦ಜಿತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಶ್ರೀರಾಜ್ ವಕ್ವಾಡಿ, ರಾಕೇಶ್ ಶೆಟ್ಟಿ ನಿರೂಪಿಸಿ, ಸ೦ಸ್ಥೆಯ ಅಧ್ಯಕ್ಷ
ಸುಧೀ೦ದ್ರ ವಕ್ಣಾಡಿ ವ೦ದಿಸಿದರು.