

ಬೆಂಗಳೂರು; ಬ್ರಹ್ಮಗಂಟು ಮತ್ತು ಇನ್ನಿತರ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ ಜನಪ್ರಿಯ ಕಿರುತೆರೆ ನಟಿ ಶೋಭಿತಾ ಶಿವಣ್ಣ ಅವರ ಪ್ರಕರಣಕ್ಕೆ ಒಂದು ದಿನದ ಬಳಿಕ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹತ್ವದ ಸುಳಿವು ಪತ್ತೆ ಮಾಡಿದ್ದಾರೆ.
ಸುಧೀರ್ ಹಾಗೂ ಶೋಭಿತಾ ದಂಪತಿ ಹೈದರಾಬಾದ್ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಶೋಭಿತಾ ಪತಿ ಸುಧೀರ್ ಅವರು ಕೆಲಸದ ನಿಮಿತ್ತ ಲ್ಯಾಪ್ ಟಾಪ್ನಲ್ಲಿ ಕೆಲಸ ಮಾಡುತ್ತಾ ಹಾಲ್ನಲ್ಲಿ ನಿದ್ರೆಗೆ ಜಾರಿದ್ದರು. ಶೋಭಿತಾ ಅವರು ಬೆಡ್ ರೂಂನಲ್ಲಿ ಇದ್ದರು. ನವೆಂಬರ್ 29ರ ತಡರಾತ್ರಿ ಪತಿ ಸುಧೀರ್ ಮನೆಯಲ್ಲಿದ್ದಾಗಲೇ ಶೋಭಿತಾ ಅವರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಶೋಭಿತಾ ಶಿವಣ್ಣ ಮಲಗಿದ್ದ ಬೆಡ್ರೂಂ ಪರಿಶೀಲನೆ ನಡೆಸಿದ ಪೊಲೀಸರಿಗೆ ಡೆತ್ ನೋಟ್ ಕೂಡ ಸಿಕ್ಕಿದೆ. ಎಲ್ಲವೂ ಪರಿಪೂರ್ಣವಾಗಿದೆ. ಆತ್ಮಹತ್ಯೆಯನ್ನು ನೀವು ಮಾಡಿಕೊಳ್ಳಬಹುದು ಎಂದು ಬರೆದಿರೋ ಶೋಭಿತಾ ಅವರು ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ. ಡೆತ್ ನೋಟ್ ವಶಕ್ಕೆ ಪಡೆದಿರೋ ಪೊಲೀಸರು ಇದನ್ನು ಬರೆದಿದ್ದು ಶೋಭಿತಾ ಅವರೇನಾ ಅಲ್ವಾ ಅನ್ನೋ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.