

ಬಹ್ರೇನ್: ಪೋಪ್ ಫ್ರಾನ್ಸಿಸ್ ಅವರು ಗಲ್ಫ್ ರಾಷ್ಟ್ರಕ್ಕೆ ತಮ್ಮ ಎರಡನೇ ಪ್ರವಾಸದಲ್ಲಿ ಬಹ್ರೇನ್ಗೆ ಆಗಮಿಸಿದ್ದು, ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮರಣದಂಡನೆಯ ಶಿಕ್ಷೆಯನ್ನು ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ.
ಪೋಪ್ ಅವರು ಗಲ್ಫ್ ಅರಬ್ ರಾಜ್ಯಕ್ಕೆ ಆಗಮಿಸಿದ ನಂತರ ಸಖಿರ್ ರಾಜಮನೆತನದಲ್ಲಿ ನಡೇದ ಸಭೆಯಲ್ಲಿ ಗುರುವಾರ ಕರೆ ನೀಡಿದರು. ಅಲ್ಲಿ ಶಿಯಾ ಮುಸ್ಲಿಂ ವಿರೋಧ ಮತ್ತು ಹಕ್ಕುಗಳ ಗುಂಪುಗಳು ಸುನ್ನಿ ರಾಜಪ್ರಭುತ್ವವನ್ನು ಮಾನವ ಹಕ್ಕುಗಳ ಮೇಲೆ ಅಧಿಕಾರ ಸ್ಥಾಪಿಸುತ್ತದೆ’ ಎಂದು ಆರೋಪಿಸಿದರು.
ಧಾರ್ಮಿಕ ಸ್ವಾತಂತ್ರ್ಯವು “ಸಂಪೂರ್ಣವಾಗಿರಬೇಕು, ಆರಾಧನಾ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಾಗಿರಬಾರದು” ಎಂದು ಅವರು ಹೇಳಿದರು.
ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರು ಪೋಪ್ ಅವರನ್ನು ಸ್ವಾಗತಿಸಿದರು.
ಪೋಪ್ ಫ್ರಾನ್ಸಿಸ್ ಅವರು ಅಬುಧಾಬಿಗೆ 2019 ರ ಪ್ರಥಮ ಭೇಟಿ ಒಂದು ಹೆಗ್ಗುರುತು. ಇದೀಗ ಗಲ್ಫ್ ಅರಬ್ ದೇಶಕ್ಕೆ ಭೇಟಿ ನೀಡಿದ ಎರಡನೇ ಭೇಟಿಯಾಗಿದೆ, ಅಲ್ಲಿ ಅವರು ಕ್ಯಾಥೋಲಿಕ್-ಮುಸ್ಲಿಂ ಭ್ರಾತೃತ್ವವನ್ನು ಉತ್ತೇಜಿಸುವ ದಾಖಲೆಗೆ ಸಹಿ ಹಾಕಿದರು.
ಪ್ರಮುಖ ಸುನ್ನಿ ಧರ್ಮಗುರು ಶೇಖ್ ಅಹ್ಮದ್ ಅಲ್-ತಾಯೆಬ್ ಅವರೊಂದಿಗೆ. ಅಲ್-ತಾಯೆಬ್ ಕೈರೋದ ಅಲ್-ಅಜರ್ನ ಗ್ರಾಂಡ್ ಇಮಾಮ್.ಬಹ್ರೇನಿನ ಅಲ್-ತಾಯೆಬ್ ಮತ್ತು ಇತರ ಪ್ರಮುಖ ಸರ್ವಧರ್ಮೀಯ ವ್ಯಕ್ತಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಈ ಪ್ರವಾಸದ ಸಂದರ್ಭದಲ್ಲಿ ಭೇಟಿಯಾಗಲಿದ್ದಾರೆ.



