ಎಸ್.ಎಸ್.ಎಲ್.ಸಿ.ಯಲ್ಲಿ 625 ಅಂಕ ಪಡೆದ ಪೂರ್ವಿಗೆ ಪ್ರಥಮ ಪಿ.ಯು.ಸಿಯ ವ್ಯಾಸಂಗದ ಒಂದು ವರ್ಷದ ವಸತಿ ವೆಚ್ಚ ಭರಿಸುತ್ತೇವೆ:ಶಿವಾರೆಡ್ಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ :- ಶ್ರೀನಿವಾಸಪುರದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಸಿರುವ ಪೂರ್ವಿ ಕೆ ಯ ಪ್ರಥಮ ಪಿ.ಯು.ಸಿಯ ವ್ಯಾಸಂಗದ ಒಂದು ವರ್ಷದ ವಸತಿ ನಿಲಯದ ಒಂದು ಲಕ್ಷ ರೂ.ಗಳನ್ನು ಭರಿಸುವುದಾಗಿ ರಾಜ್ಯ ಜೆ.ಡಿ.ಎಸ್ ಪ್ರದಾನ ಕಾರ್ಯದರ್ಶಿ ಬೀಮಗುಂಟ್ಲಪಲ್ಲಿ ಶಿವಾರೆಡ್ಡಿ ಘೋಷಿಸಿದ್ದಾರೆ . ಗುರುವಾರ ಸಂಜೆ ಪೂರ್ವಿಕೆ ನಿವಾಸಕ್ಕೆ ತೆರಳಿ 10 ಸಾವಿರ ರೂ.ಗಳ ಧನ ಸಹಾಯ ನೀಡಿ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದಾಗ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಉಚಿತ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದ್ದಾರೆ , ಆದರೆ ವಸತಿ ಸೌಲಭ್ಯಕ್ಕಾಗಿ ಹಣ ಕಟ್ಟಬೇಕೆಂದು ತಿಳಿಸಿದ್ದಾರೆ ಎಂದಾಗ ಒಂದು ವರ್ಷಕ್ಕಾಗಿ ತಗಲುವ ಒಂದು ಲಕ್ಷ ರೂ.ಗಳನ್ನು ನಾನೇ ನೀಡುತ್ತೇನೆ , ಮುಂದಿನ ತರಗತಿಗಳಲ್ಲಿಯೂ ಅತಿ ಹೆಚ್ಚು ಅಂಕಗಳನ್ನು  ಪಡೆಯುತ್ತಾ ಹೋದರೆ ಪ್ರತಿ ವರ್ಷವೂ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚ ನಾನೇ ಭರಿಸುವುದಾಗಿ ಭರವಸೆ ನೀಡಿದರಲ್ಲದೆ ತಾಲೂಕಿನಲ್ಲಿ ಯಾರೆ ಇನ್ನು ಮುಂದೆ ಅತಿ ಹೆಚ್ಚು ಅಂಕಗಳನ್ನು  ಪಡೆದರೆ ಅವರ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚ ನಾನೇ ಭರಿಸುವುದಾಗಿ ಭರವಸೆ ನೀಡಿದರು . 
ಕಲ್ಲೂರು ಸುರೇಶ್‌ಬಾಬು , ನಿವೃತ್ತ ಶಿಕ್ಷಕ ಗೌನಿಪಲ್ಲಿ ರವಿಕುಮಾರ್ , ಕಾರ್‌ ಬಾಬು , ಗ್ಯಾಸ್ ಜಗನ್ , ಬೈರಪಲ್ಲಿ ನವೀನ್ , ಕುಮ್ಮಗುಂಟೆ ಮನು ಉಪಸ್ಥಿತರಿದ್ದರು