ರೈತರು ಬಡವರು ಸ್ವಾಭಿಮಾನ ಜೀವನ ಕಟ್ಟುಕೊಳ್ಳಲು ಡಿಸಿಸಿ ಬ್ಯಾಂಕಿನಿಂದ ಕೊಡುವ ಸಾಲ ಬಳಸಿಕೊಂಡು ಆರ್ಥಿಕ ಸಬಲರಾಗಬೇಕು ಶಾಸಕ ಕೆ.ಆರ್. ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ, ರೈತರು ಬಡವರು ಸ್ವಾಭಿಮಾನ ಜೀವನ ಕಟ್ಟುಕೊಳ್ಳಲು ತಾಲೂಕಿನಲ್ಲಿ ಡಿಸಿಸಿ ಬ್ಯಾಂಕಿನಿಂದ ಕೊಡುವ ಸಾಲ ರೈತರು ಅಗತ್ಯ ಸೌಲಭ್ಯಗಳಿಗೆ ಬಳಸಿಕೊಂಡು ಆರ್ಥಿಕ ಸಬಲರಾಗಬೇಕೆಂದು ಶಾಸಕ ಕೆ.ಆರ್. ರಮೇಶ್‍ಕುಮಾರ್ ತಿಳಿಸಿದ್ದಾರೆ.
ಸೋಮಯಾಜಲಹಳ್ಳಿ ಎಸ್.ಎಫ್.ಸಿ.ಎಸ್ ಸೋಸೈಟಿ ಆವರಣದಲ್ಲಿ ಶ್ರೀನಿವಾಸಪುರ ಡಿಸಿಸಿ ಬ್ಯಾಂಕ್‍ನಿಂದ ರೈತರಿಗೆ ಆಯೋಜಿಸಿದ 1 ಕೋಟಿ ರೂ. ಶುನ್ಯ ಬಡ್ಡಿ ಸಾಲ ವಿತರಿಸಿ ಮಾತನಾಡಿದ ಅವರು ಬ್ಯಾಂಕ್ ಜನರ ಬ್ಯಾಂಕ್ ಆಗಿದೆ. ನಾವು ನೀಡುತ್ತಿರುವ ಈ ಸಾಲ ಸ್ತ್ರೀಶಕ್ತಿ ಸಂಘಗಳಿಗೆ ರೈತರಿಗೆ ಸೀಮಿತವಾಗದೆ ಗ್ರಾಮೀಣ ಭಾಗದ ತರಕಾರಿ ಪಾನಿಪೂರಿ ವೀಳ್ಯದೆಳೆ ಇತರೆ ಸಣ್ಣ ಪುಟ್ಟ ವ್ಯಾಪಾರ ಮಾಡುವ ಅವರಿಗೂ ಸಹ ಮುಂದಿನ ದಿನಗಳಲ್ಲಿ ಪಟ್ಟಿ ತಯಾರು ಮಾಡಿ ಅವರ ಶಕ್ತಾನುಸಾರ ಸಾಲ ವಿತರಣೆ ಮಾಡಲಾಗುತ್ತದೆ.
ಇದಕ್ಕೆ ಬ್ಯಾಂಕ್ ವ್ಯವಸ್ಥಾಪಕರು ಸಜ್ಜಾಗಬೇಕು. ರಾಜಕಾರಣಿಗಳಿಂದ ಶೀಪಾರಸುಗಳನ್ನು ಮಾಡಿಕೊಂಡು ಬ್ಯಾಂಕ್‍ನಲ್ಲಿ ಹಣ ಪಡೆದು ಈ ಕಡೆ ತಿರುಗಿ ನೋಡದ ಮಹಾನುಭಾವರಿದ್ದಾರೆ. ಆದರೆ ಬಡವರು ಎಂದಿಗೂ ಮೋಸ ಮಾಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಹಾಗಗಿ ಮಾರ್ಚ್ ಮುಗಿದ ನಂತರ ವ್ಯಾಪಾರ ವಹಿವಾಟು ನಡೆಸುವ ಮಂದಿಗೆ ಸೋಮಯಾಜಲಹಳ್ಳಿ ಪಂಚಾಯಿತಿಯ ಪ್ರತಿಯೊಂದು ಹಳ್ಳಿಗೂ ಸಹ ತಲಾ ಒಂದೊಂದು ಕೋಟಿ ರೂ. ಸಾಲ ವಿತರಿಸಲು ಗುರಿ ಇರಿಸಿಕೊಂಡಿದ್ದೇನೆ.
ಆಹಾರ ಸಚಿವ: ಸಚಿವ ಉಮೇಶ್ ಕತ್ತಿಯವರು ನಿನ್ನೆ ಹೇಳಿಕೆ ನೀಡುರುವಂತೆ ಒಂದು ಮನೆಯಲ್ಲಿ ದ್ವಿಚಕ್ರ ವಾಹನ ಕಾರು ಟಿವಿ ಇರುವವರಿಗೆ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಿ ಎಂದು ಬಾಲೀಶತನ ಹೇಳಿಕೆ ನೀಡಿ ಮತ್ತೆ ವಾಪಸ್ ಪಡೆದಿದ್ದಾರೆ. ಅವರ ಪ್ರಕಾರ ಬಡವರು ಪಡಿತರ ಚೀಟಿಯನ್ನೆ ಅವಲಂಬಿಸಿ ಅನ್ನಕ್ಕಾಗಿ ಪರದಾಡಬೇಕೆಂಬುವುದೆ ಅವರ ಆಶೆಯಾಗಿದೆ. ಸಮಾಜದಲ್ಲಿ ಸುಸಜ್ಜಿತ ಮನೆ ಮತ್ತು ಅಗತ್ಯ ಸಂಚಾರಕ್ಕೆ ವಾಹನ ಇರುವುದು ತಪ್ಪೇ ಎಂದು ಪ್ರಶ್ನಿಸಿದರು. ಆದರೆ ಸಿದ್ದರಾಮಯ್ಯನವರು ರಾಜ್ಯ ಬಡವರಿಗೆ ಹೊಟ್ಟೆ ತುಂಬ್ಬಾ ಅನ್ನ ನೀಡಿದ್ದಾರೆ. ಇಂದಿರಾಗಾಂಧಿ ಬಡವರಿಗಾಗಿ ಭ್ಯಾಂಕುಗಳನ್ನು ರಾಷ್ಟ್ರೀಕೃತ ಮಾಡಿದರೆ, ನರೇಂದ್ರ ಮೋದಿ ಅವರು ಖಾಸಗಿಕರಣ ಮಾಡಲು ಹೋರಟಿರುವುದು ದೇಶದ ಅಭಿವೃದ್ಧಿಯೇ ?
ನಮ್ಮ ವಿರೋದಿಗಳು ನನ್ನ ಜನಪರ ಕಾರ್ಯಕ್ರಮಗಳು ಸಹಿಸದೆ ಇಲ್ಲಸಲ್ಲದ ಆರೋಪ ಸುಳ್ಳು ವದಂತಿಗಳು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾನು ಕಿವಿಕೊಡುವುದಿಲ್ಲ. ಇಂತಹವರಿಂದ ನಾನು ಮತ್ತಷ್ಟು ಜಾಗೃತನಾಗಿ ಬಡವರ ಕೆಲಸ ಮಾಡಲು ನನ್ನ ಕೊನೆ ಉಸಿರಿರುವ ತನಕ ನಾನು ಮಾಡುತ್ತಲೆ ಇರುತ್ತೇನೆ. ನಾನು ನೀತಿಯನ್ನು ನಂಬಿದ್ದೇನೆ. ನಿಯತ್ತಿನಿಂದ ನಾನು ಮಾಡುವ ಕೆಲಸಗಳೆ ಶ್ರೀರಕ್ಷೆಯಾಗಿವೆ. ಎಂದಿಗೂ ಚುನಾವಣೆಗಾಗಿ ಕೆಲಸ ಮಾಡುವವನಲ್ಲ. ವಿರೋದಿಗಳು ಚುನಾವಣೆ ದಿನಾಂಕ ಯಾವಾಗ ಬರುತ್ತದೊ ಅದಕ್ಕಾಗಿ ಕಾದು ಕುಳಿತಿದ್ದಾರೆ. ಪ್ರವಾಹ ಯಾವ ದಿಕ್ಕು ಚಲಿಸುತ್ತದೆಯೊ ಆ ದಿಕ್ಕಿಗೆ ನಾನು ಹೋಗಲು ಸದಾ ಸಿದ್ದ್ದ ನಿದ್ದೇನೆಂದರು.
ಸೋಮಯಾಜಲಹಳ್ಳಿ ದಿವಂಗತ ಚನ್ನಪ್ಪ ಸ್ಮರಣೆ
ರಾಜಕೀಯ ಗುರು: ದಿವಂಗತ ಚೆನ್ನಪನವರು ನನ್ನನ್ನು ತಾಲೂಕಿನ ರಾಜಕಾರಣಕ್ಕೆ ಕರೆತಂದು ಪರಿಚೆಯಿಸಿ ಹೆಮ್ಮರವಾಗಿ ಬೆಳೆಯಲು ಚೆನ್ನಪ್ಪ ನವರ ಸಮಕಾಲಿನ ಅನೇಕರು ನನ್ನನ್ನು ಪೋಶಿಸಿ ಬೆಳೆಸಿದ್ದಾರೆ. ಆ ಕಾಲದಲ್ಲಿ ಆಂದ್ರ ಈ ಗಡಿ ಭಾಗಕ್ಕೆ ಟೆಲಿ ಪೋನ್, ಮುರಾರ್ಜಿ ದೇಸಾಯಿ ವಸತಿ ಶಾಲೆ, ಫ್ರೌಡ ಶಾಲೆ, ಕಾಲೇಜು, ಬ್ಯಾಂಕ್, ಕಸ್ತೂರಿ ಭಾ ವಸತಿ ಶಾಲೆ ಈ ಎಲ್ಲವು ಈ ಬಾಗದಲ್ಲಿ ಪ್ರಾರಂಭಿಸಲು ಚೆನ್ನಪ್ಪನವರು ಸ್ಥಳಾವಕಾಶ ಕೊಟ್ಟು ಜಮೀನನ್ನು ಕಲ್ಪಿಸಿಕೊಟ್ಟ ಮಹಾನುಭಾವ. ಅವರ ಮಾರ್ಗದರ್ಶನದಲ್ಲಿ ಬೆಳೆದ ವ್ಯಕ್ತಿ ನಾನಾಗಿದ್ದು. ಅವರ ಋಣ ತೀರಿಸುವ ಕೆಲಸ ನಾನು ಮಾಡುತ್ತೇನೆ. ಮಾರ್ಚ್ ಮುಗಿದ ನಂತರ ಪ್ರತಿಯೊಂದು ಗ್ರಾಮಕ್ಕೂ ಎಲ್ಲಾ ರೀತಿಯ ಗ್ರಾಮಕ್ಕೆ 1 ಕೋಟಿ ರೂ. ಸಾಲ ನೀಡುತ್ತೇವೆ. ರೈತರು ಆತಂಕ ಪಡುವಂತಿಲ್ಲ. ತಮ್ಮ ಜಮೀನುಗಳ ಸಾಗುವಳಿ ಚೀಟಿ, ಖಾತೆ ಇಲ್ಲದವರಿಗೆ ಖಾತೆ, ಜಂಟಿ ಖಾತೆಯುಳ್ಳವರಿಗೆ ಪ್ರೆತ್ಯೇಕ ಖಾತೆಗಳು ಮಾಡಿಸಿ ಸಂಬಂದಪಟ್ಟ ಕಂದಾಯ ಅಧಿಕಾರಿಗಳನ್ನು ಗ್ರಾಮದಲ್ಲೆ ನಾನು ಸಹ ನೆಲೆಯೂರಿ ಅಧಿಕಾರಿಗಳ ಮೂಲಕ ಕೆಲಸ ಮಾಡಿಸಿ ಪ್ರಾಯೋಗಿಕವಾಗಿ ಈ ಭಾಗದಲ್ಲಿ ಈ ಯೋಜನೆ ಯಶಸ್ವಿಯಾದ ನಂತರ ತಾಲೂಕಿನ ಉಳಿದ ಬಾಗಗಳಲ್ಲೂ ಸಹ ಈ ಕೆಲಸ ಮಾಡುತ್ತೇನೆ.
ವಿರೋದಿಗಳು ಅಲ್ಲಿ ಇಲ್ಲಿ ಈ ತಾಲೂಕಿಗೆ ವಸತಿಗಳು ನೀಡಿದರ, ಕೆರೆಗಳು ತುಂಬಿತಾ, ಕೆಸಿ ವ್ಯಾಲಿ ನೀರು ಎಂದು ಹೇಳಿಕೊಳ್ಳುವವರಿಗೆ ನಾನು ಉತ್ತರ ನೀಡುತ್ತಾ ಬಂದಿದ್ದೇನೆ. ಫೈಲೆಟ್ ಯೋಜನೆ ಅಡಿ 18 ಸಾವಿರ ಮನೆಗಳು ತಂದಿಲ್ಲವೆ. ಕೆಸಿ ವ್ಯಾಲಿ ನೀರು ಈಗಾಗಲೆ ದೊಡ್ಡ ಕಲ್ಲೂರು ಕೆರೆ ತುಂಬುತ್ತಿದೆ. ತಾಲೂಕಿನ ಎಲ್ಲಾ ಕೆರೆಗಳು ತುಂಬಿದ ನಂತರ ಭೋರ್‍ವೆಲ್‍ಗಳು ಕೊರೆಸಿದರೆ ನೀರು ತಾನೇ ತಾನಾಗಿ ಬರುತ್ತವೆ. ಎಸ್‍ಸಿ, ಎಸ್‍ಟಿ ಪಲಾನುಭವಿಗಳು ಈ ಸೌಲಭ್ಯಕ್ಕೆ ಕಾಯುತ್ತಿದ್ದಾರೆ. ಕೆರೆಗಳಿಗೆ ನೀರು ಬರುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಆಗ ಎಲ್ಲಾ ಬಡಬಗ್ಗರೂ ಕೋಳವೆ ಬಾವಿಗಳನ್ನು ಕೊರೆಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ, ನಿರ್ದೇಶಕ ವೆಂಕಟರೆಡ್ಡಿ, ಸೋಮಯಾಜಲಹಳ್ಳಿ ಎಸ್.ಎಫ್.ಸಿ.ಎಸ್ ಅಧ್ಯಕ್ಷಣಿ ಎ.ಸಿ.ನಾಗರತ್ನಮ್ಮ, ಪಂ ಅಧ್ಯಕ್ಷ ಎಸ್.ಎನ್.ವನಿತಾ, ಉಪಾಧ್ಯಕ್ಷ ವೆಂಕಟರಾಮಪ್ಪ, ಮಾಜಿ ಅಧ್ಯಕ್ಷ ಎಸ್.ಎನ್. ಮಂಜುನಾಥರೆಡ್ಡಿ, ಪ್ರಥಮ ದರ್ಜೆ ಗುತ್ತಿಗೆದಾರ ಪ್ರಸಾದ್, ನಿರ್ದೇಶಕ ಎಸ್.ವಿ.ಸುಧಾಕರ್, ಕಾಂಗ್ರೆಸ್ ಮುಖಂಡ ವಿಜಯ್‍ಕುಮಾರ್, ಗ್ರಾಪಂ ಸದಸ್ಯ ಪಿ.ಜಿ.ರಘುನಾಥರೆಡ್ಡಿ, ಶಿಲ್ಪಾ, ಗಂಗಿರೆಡ್ಡಿ. ಎಚ್.ವಿ.ರಮೇಶ್, ತಿರುಮಲಪ್ಪ, ವೆಂಕಟೇಶ್, ಶೋಭಾ, ವಾಣಿ ನಾರಾಯಣಸ್ವಾಮಿ, ಪುರ್ನಪಲ್ಲಿ ರಘು, ಕಂಪ್ಯೂಟರ್ ಆಪರೇಟರ್ ಶಂಕರಪ್ಪ, ಗ್ರಾಪಂ ಸಿಬ್ಬಂದಿ ಹಾಜರಿದ್ದರು
.