ಶ್ರೀನಿವಾಸಪುರವನ್ನು ನಾಲ್ಕು ದಶಕಗಳಿಂದ ಪ್ರತಿನಿಧಿಸುತ್ತಿರುವ ರಾಜಕಾರಣಿಗಳು ಅಭಿವೃದ್ದಿಗೆ ಯಾವುದೇ ಕೊಡುಗೆ ನೀಡಿಲ್ಲ : ಮುನಿಸ್ವಾಮಿ

ಶ್ರೀನಿವಾಸಪುರ:- ಶ್ರೀನಿವಾಸಪುರವನ್ನು ನಾಲ್ಕುದಶಕಗಳಿಂದ ಪ್ರತಿನಿಧಿಸುತ್ತಿರುವ ಇಲ್ಲಿನ ಸಂಪ್ರದಾಯಿಕ ಎದುರಾಳಿ ರಾಜಕಾರಣಿಗಳು ತಾಲೂಕಿನ ಅಭಿವೃದ್ದಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಕೋಲಾರದ ಸಂಸದ ಮುನಿಸ್ವಾಮಿ ಶ್ರೀನಿವಾಸಪುರದ ಹಾಲಿ ಮತ್ತು ಮಾಜಿ ಶಾಸಕರ ವಿರುದ್ದ ಪರೋಕ್ಷವಾಗಿ ಆರೋಪ ಮಾಡಿದರು.
ಪಟ್ಟಣದ ಮಾರುತಿ ಸಭಾಭವನದಲ್ಲಿ ಭಾನುವಾರ ಬಿಜೆಪಿ ಪಕ್ಷದವತಿಯಿಂದ ಜನೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಇಷ್ಟು ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವರು ಇಲ್ಲಿಗೆ ಯಾವುದೇ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳಾಗಲಿ ಕಾರ್ಖಾನೆಗಳಾಗಲಿ, ಗುಣಮಟ್ಟದ ಆಸ್ಪತ್ರೆ ಇಲ್ಲ ಯಾವುದೆ ಕಾರ್ಯಕ್ರಮ ತಾರದೆ ಜನಸಾಮಾನ್ಯರಿಗೆ ಅನಕೂಲ ಅಗುವಂತ ಶಾಶ್ವತ ಅಭಿವೃದ್ದಿಗಳನ್ನು ಮಾಡದೆ ಇರುವುದು ವಿಷಾದನೀಯ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ವ್ಯಸ್ಥಿತವಾಗಿ ದಲಿತರನ್ನು ತುಳಿಯಲಾಗುತ್ತಿದೆ ಎಂದು ಆರೋಪಿಸಿದರು
ಯಾರು ಎನೇ ಹೇಳಿದರು ಕೆ.ಸಿ.ವ್ಯಾಲಿ ಯೋಜನೆಯ ಎರಡನೆ ಹಂತದಲ್ಲಿ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು
ಬಿಜೆಪಿ ಸರ್ಕಾರ ಈ ಬಗ್ಗೆ ಯಾರು ಏನೇ ಮಾತನಾಡಲಿ ಸಾಧನೆ ಬಿಜೆಪಿಯದೆ ಎಂದು ಒತ್ತಿ ಹೇಳಿದರು.
ಡಿಸಿಸಿ ಬ್ಯಾಂಕಿನಿಂದ ನೀಡುತ್ತಿರುವ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಯಾರು ಯಾರ ಮನೆಯಿಂದಲೂ ದುಡ್ಡು ತಂದುಕೊಡುತ್ತಿಲ್ಲ ಕೇಂದ್ರ ಸರ್ಕಾರದ ನಬಾರ್ಡ ಯೋಜನೆಯ ಹಣವನ್ನು ತಂದು ಸ್ತ್ರೀ ಶಕ್ತಿ ಸಂಘಗಳಿಗೆ ನೀಡಲಾಗುತ್ತಿದೆ ಜೊತೆಗೆ ಸಾಲ ನೀಡುತ್ತೇವೆ ಎಂದು ಮಹಿಳೆಯರನ್ನು ಕರೆತಂದು ಮತಯಾಚಿಸುತ್ತಾರೆ ಎಂದು ಆಪಾದಿಸಿದರು.

ಡಿಸಿಸಿ ಬ್ಯಾಂಕ್ ಸಾಲ ವಿತರಿಸಲು ರಾಹುಲ್ ಗಾಂಧಿ ಯಾರು?

ರಾಹುಲ್ ಗಾಂಧಿಯನ್ನು ಕರೆತಂದು ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಸಾಲ ಯೋಜನೆಯನ್ನು ವಿತರಿಸುವುದಾಗಿ ಹೇಳುತ್ತಾರೆ ಸಾಲ ವಿತರಿಸಲು ರಾಹುಲ್ ಗಾಂಧಿ ಯಾರು ಅವರಿಗೆ ಗೌರವ ಇದ್ದರೆ ಇಲ್ಲಿಗೆ ಸಾಲ ವಿತರಣೆಗೆ ಬರಬಾರದು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಹೇಳಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಖೆಡ್ಡಾ ತೋಡಿದ್ದಾಯಿತು ಈಗ ರಾಹುಲ್ ಗಾಂದಿಗೆ ಖೆಡ್ಡಾ ತೋಡಲು ಹೋರಟಿದ್ದಾರೆ ಎಂದು ಶಾಸಕ ರಮೇಶ್ ಕುಮಾರ್ ವಿರುದ್ದ ಪರೋಕ್ಷವಾಗಿ ವ್ಯಂಗ್ಯವಾಡಿದರು. ರಾಜ್ಯ ಕಾಂಗ್ರೆಸ ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರೈಲ್ವೆ ಹಳಿಗಳಿದ್ದಂತೆ ಎರಡು ರೈಲ್ವೆ ಹಳಿಗಳು ಒಂದಾದರೆ ರೈಲು ಒಡಲು ಸಾಧ್ಯವಿಲ್ಲವೋ ಸಿದ್ದರಾಮಯ್ಯ-ಶಿವಕುಮಾರ್ ಯಾವತ್ತು ಒಂದಾಗಲ್ಲ ಎಂದರು.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ ಬಿಜೆಪಿ ಸರ್ಕಾರದ ಸಾಧನೆ ಕುರಿತಾಗಿ ಸೆಪ್ಟಂಬರ್ 8 ರಂದು ಆಯೋಜಿಸಿರುವ ಜನೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನತೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
ಸಭೆಯಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ಕೋಲಾರದ ಮಾಜಿ ಶಾಸಕ ವರ್ತರೂಪ್ರಕಾಶ್,ಮುಖಂಡರಾದ ಕೇಶವಪ್ರಸಾದ್, ತಾಲೂಕು ಅಧ್ಯಕ್ಷ ಆಶೋಕ್ ರೆಡ್ಡಿ,ಪುರಸಭೆ ಸದಸ್ಯ ನಲ್ಲಪಲ್ಲಿರೆಡ್ಡೆಪ್ಪ,ರಾಮಾಂಜಿ,ಲಕ್ಷ್ಮಣಗೌಡ,ವೆಂಕಟಮುನಿಯಪ್ಪ,ಎಸ್.ಬಿ.ಮುನಿವೆಂಕಟಪ್ಪ ಮುಂತಾದವರು ಇದ್ದರು.