ಶ್ರೀನಿವಾಸಪುರ 2 : ಆಟ-ಪಾಠಗಳು ಒಂದೇ ನಾಣ್ಯದ ಎರಡು ಮುಖಗಳಂತೆ . ಕ್ರೀಡೆಗಳಿಂದ ಸದೃಡವಾದ ಮನಸ್ಸುನೊಂದಿಗೆ ಸದೃಡವಾದ ದೇಹವಾಗಲು ಸಾಧ್ಯ ಎಂದು ಗ್ರಾ.ಪಂ. ಅಧ್ಯಕ್ಷೆ ಅರುಣವೆಂಕಟ್ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಡಶಾಲೆಯ ಆವರಣದಲ್ಲಿ ಶುಕ್ರವಾರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿನ ದೇಶೀಯ ಆಟಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸ್ನೇಹ, ಸೌಹಾರ್ದವನ್ನು ಬೆಸೆಯುವ ಸೇತುವೆ ಕ್ರೀಡೆ ಇದನ್ನು ಅರಿತು ಎಲ್ಲರೂ ಸಂಘಟಿತರಾಗಿ ಕ್ರೀಡೆಯಲ್ಲಿ ಪಾಲ್ಗುಂಡು , ಸೋಲು-ಗೆಲವನ್ನು ಸಮವಾಗಿ ಸ್ವೀಕರಿಸಿ ಎಲ್ಲರು ಒಗ್ಗಟಿನಿಂದ ಆಟವಾಡಬೇಕೆಂದರು.
ಮುಖಂಡರಾದ ಸಿ.ಎಸ್.ವೆಂಕಟರಮಣಪ್ಪ ಮಾತನಾಡಿ ಯಾಂತ್ರೀಕೃತ ಜೀವನದಿಂದ ಪ್ರಸ್ತುತದ ದಿನಗಳಲ್ಲಿ ದೇಹ ದಂಡನೆ ಇಲ್ಲದೆ ಕೇವಲ ಬುದ್ದಿ ಶಕ್ತಿಗೆ ಮಾತ್ರ ಹೆಚ್ಚು ಶ್ರಮ ನೀಡುತ್ತಿರುವುದರಿಂದ ಮಾನಿಸಿಕ ಖಿನ್ನತೆ ಒಳಗಾಗುತ್ತಿದ್ದಾರೆ. ಆದ್ದರಿಂದ ದಿನನಿತ್ಯದ ಚಟುವಟಿಕೆಗಳಲ್ಲಿ ಕ್ರೀಡೆಯನ್ನು ಒಂದು ಭಾಗವನ್ನಾಗಿಸಿಕೊಳ್ಳುವಂತೆ ಕರೆನೀಡಿದರು.
ಗ್ರಾ.ಪಂ.ಮಾಜಿ ಸದಸ್ಯ ಸಿಮೆಂಟ್‍ನಾರಾಯಣಸ್ವಾಮಿ, ಹೋಬಳಿ ಕ್ರೀಡಾಕೂಟಗಳ ಸಮನ್ವಯ ಸಮಿತಿ ಗೌರವಾಧ್ಯಕ್ಷ ಕೆ.ಎನ್.ರಾಮಚಂದ್ರ, ಅಧ್ಯಕ್ಷ ಪಿ.ಮಾರಣ್ಣ, ಸಿಆರ್‍ಪಿಗಳಾದ ವರದರೆಡ್ಡಿ, ಜಯರಾಮರೆಡ್ಡಿ, ಸೈಯದ್, ದೈಹಿಕ ಶಿಕ್ಷಕ ಕೃಷ್ಣಯ್ಯ, ಶಿಕ್ಷಕರಾದ ಮಂಜೇಶ್, ತಪಸ್ವಿ ಶಾಲೆ ಬಾಬು, ಕಾವೇರಿ ಶಾಲೆ ಕಾರ್ಯದರ್ಶಿ ಮಹೇಶ್ ಇತರರು ಇದ್ದರು.