ಪಿಯುಸ್ ನಗರ ಸ್ತ್ರೀ ಸಂಘಟನೆಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ

JANANUDI.COM NETWORK

ಕುಂದಾಪುರ,ಮಾರ್ಚ್ 7 ರಂದು ಪಿಯುಸ್ ನಗರ ಚರ್ಚಿನ ಮಹಿಳೆಯರು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಸೈಂಟ್ ಪಿಯುಸ್ ಇಗರ್ಜಿಯ ಧರ್ಮ ಗುರುಗಳಾದ ವಂ. ಜೋನ್ ಆಲ್ಫ್ರೆಡ್ ಬಾರ್ಬೊಜಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ವಾಲ್ಟರ್ ಫೆರ್ನಾಂಡಿಸ್, ಸೈಂಟ್ ಪಿಯುಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿ. ಐರಿನ್ ಕ್ರಾಸ್ತಾ, ಉಡುಪಿ ಜಿಲ್ಲಾ ಸುಗಮ್ಯ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಡೇಸಾ, ಸ್ತ್ರೀ ಸಂಘಟನೆ ಕುಂದಾಪುರ ವಲಯದ ಅಧ್ಯಕ್ಷೆ ಶ್ರೀಮತಿ ನೋರಾ ಡಿಸೋಜಾ, ಚರ್ಚ್ ಪಾಲನಾ ಮಂಡಳಿಯ 18 ಆಯೋಗಗಳ ಸಂಯೋಜಕಿ ಶ್ರೀಮತಿ ಲೀನಾ ಟಾವ್ರೊ, ಪುರುಷರ ಸ್ವ ಸಹಾಯ ಸಂಘದ ಅಧ್ಯಕ್ಷ ಶ್ರೀ ವಿಲ್ಫ್ರೆಡ್ ಡಿಲೀಮಾ ಉಪಸ್ಥಿತರಿದ್ದರು

ಸಂಘಟನೆಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಹಾ ಸಂಘದ ಅಧ್ಯಕ್ಷೆ ಜೆನ್ನಿ ಡೇಸಾರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು. ನಂತರ ಒಕ್ಕೂಟದ ಆಧ್ಯಕ್ಷೆ ಶ್ರೀಮತಿ ಪ್ರಮಿಳ ಡೇಸಾ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಶ್ರೀಮತಿ ಜೆಸಿಂತಾ ಡಿಮೆಲ್ಲೊ, ಶ್ರೀಮತಿ ಜಾನೆಟ್ ಮೆಂಡೊನ್ಸಾ, ಹಾಗೂ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಜ್ಯೋತಿ ಪೂಜಾರಿ ಮತ್ತು ಶ್ರೀಮತಿ ಸಾಧು ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಮಹಾ ಸಂಘದ ಕಾರ್ಯದರ್ಶಿ ಶ್ರೀಮತಿ ಲವೀನ ಡಿಸೋಜಾ ವಂದಿಸಿದರು. ಶ್ರೀಮತಿ ಎವ್ಲಿನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು