

ಕುಂದಾಪುರ, ಆ.8; ಪಿಯುಸ್ ನಗರ್ ಚರ್ಚಿನಲ್ಲಿ ದಿನಾಂಕ 5 ರಂದು ದಿವಂಗತ ತೋಮಸ್ ಡಿಮೆಲ್ಲೊ ಇವರ ಏಜ್ಯುಕೇರ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಪಿಯುಸ್ ನಗರ ಚರ್ಚಿನ ಕೆಥೊಲಿಕ್ ಸಭಾ ಹಾಗೂ ಸಂತ ವಿಶೆಂತ್ ಪಾವ್ಲ್ ಸಭಾ ಸಂಘಟನೆ ಜೊತೆಗೂಡಿ , ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಅಂಕ ಪಡೆದ 19 ಮಕ್ಕಳಿಗೆ ಸ್ಕಾಲರ್ಶಿಪ್ ವಿತರಿಸಲಾಯಿತು.
ಪಿಯುಸ್ ನಗರ ಚರ್ಚಿನ ಸಭಾಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಪಿಯುಸ್ ನಗರ್ ಚರ್ಚಿನ ಧರ್ಮಗುರುಗಳಾದ ವಂ| ಆಲ್ಬರ್ಟ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿ ’ಈ ರೀತಿಯ ಒಂದು ಕಾರ್ಯಕ್ರಮ ಅರ್ಥಪೂರ್ಣವಾದಂತದು, ಇದರಲ್ಲಿ ಸೇವೆಯ ಮನೋಭಾವನೆ ಇದೆ’ ಎಂದು ಸಂದೇಶ ನೀಡಿದರು ಏಜ್ಯುಕೇರ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ| ಕುಲ್ದೀಪ್ ಡಿಮೆಲ್ಲೊ ಮಾತನಾಡಿ ’ಈ ಒಂದು ಸ್ಕಾಲರ್ಶಿಪ್ ನೀಡುವ ಯೋಜನೆ ನಮ್ಮ ತಂದೆಯವರ ಕನಸಾಗಿತ್ತು. ಸಮುದಾಯದ ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರಬೇಕು ಎಂಬದು ಅವರ ಆಸೆಯಾಗಿತ್ತು. ಆ ಆಸೆಗಳನ್ನು ನಾವು ಅವರ ಮಕ್ಕಳು ಈಡೇರಿಸುತ್ತಾ ಇದ್ದೇವೆ’ ಎಂದು ತಿಳಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷರಾದ ಜೇಮ್ಸ್ ಡಿಮೆಲ್ಲೊ ಹಿತನುಡಿಗಳನ್ನಾಡಿದರು. ವೇದಿಕೆಯಲ್ಲಿ ಅತಿಥಿಗಳಾದ ಡಾ| ಜಾನ್ಸನ್ ಡಿಲೀಮಾ, ಡಾ| ಮಧು ಡಿಲೀಮಾ, ಪಾಲನ ಮಂಡಳಿ ಕಾರ್ಯದರ್ಶಿ ರೇಶ್ಮಾ ಡಿಸೋಜ, ಚರ್ಚ್ ಆಯೋಗಗಳ ಸಂಯೋಜಕಿ ಲೀನಾ ತಾವ್ರೊ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಿದರು. ಕಥೊಲಿಕ್ ಸಭಾ ಕಾರ್ಯದರ್ಶಿ ಪ್ರಮೀಳಾ ಡೆಸಾ ಸ್ವಾಗತಿಸಿದರು. ಕಥೊಲಿಕ್ ಸಭಾದ ಅಧ್ಯಕ್ಷರಾದ ಅಲೆಕ್ಸಾಂಡರ್ ಲೂವಿಸ್ ಲೂವಿಸ್ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮವನ್ನು ನ್ಯಾನ್ಸಿ ವಾಜ್ ನಿರೂಪಿಸಿದರು.


