ಕುಂದಾಪುರ, ಎ.27: ಮಂಗಳೂರು ಧರ್ಮಪ್ರಾಂತ್ಯದ ಪುತ್ತೂರು ಮರಿಲ್ ಸೆಕ್ರೇಟ್ ಹಾರ್ಟ್ ಚರ್ಚಿನ ಯಾತ್ರಿಕರು ಇಂದು ಎಪ್ರಿಲ್ 27 ರಂದು ಬೆಳಿಗೆ 7.30 ಕ್ಕೆ ಕುಂದಾಪುರದ ಆಗಮಿಸಿ, 454 ವರ್ಷಗಳ ಚರಿತ್ರೆ ಇರುವ ಐತಿಹಾಸಿಕ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ದರ್ಶನ ಪಡೆದರು.
ಅವರನ್ನು ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿದರು.ಎರಡು ದೊಡ್ಡ ಬಸ್ ಗಳಲ್ಲಿ ಆಗಮಿಸಿದ ಯಾತ್ರಿಕರು ಸುಮಾರು 100 ಜನರಿದ್ದು, ಯಾತ್ರೆಯ ಮೊದಲ ಭಾಗವಾಗಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಗೆ ಭೇಟಿ ನೀಡಿ, ಇಗರ್ಜಿಯನ್ನು ವಿಕ್ಷೀಸಿ, ಭಕ್ತಿಯಿಂದ ಪ್ರಾರ್ಥನೆಯನ್ನು ಸಲ್ಲಿಸಿದರು. ಅವರಿಗೆ ಫಲಹಾರವನ್ನು ಎರ್ಪಾಡು ಮಾಡಲಾಗಿತ್ತು. ಯಾತ್ರಿಕರಲ್ಲಿ, ಮರಿಲ್ ಸೆಕ್ರೇಟ್ ಹಾರ್ಟ್ ಚರ್ಚಿನ ಧರಮಗುರು ವಂ|ನಿಲೇಶ್ ಕ್ರಾಸ್ತಾ, ಚರ್ಚಿನ ಉಪಾಧ್ಯಕ್ಷರು, ಕಾರ್ಯದರ್ಶಿ, ಸರ್ವ ಆಯೋಗಗಳ ಸಂಯೋಜಕಿ, ಚರ್ಚಿನ ಹಿರಿಯವರು, ಕಿರಿಯವರು ತರುಣ ತರುಣಿಯರೂ ಕೂಡ ಇದ್ದರು
ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಯಾತ್ರಿಕರಲ್ಲಿ ಕುಶಲೋಪಚಾರ ಮಾಡಿ ಅವರನ್ನು ಹರಸಿದರು.