JANANUDI.COM NETWORK
ನವದೆಹಲಿ: ಪೆಟ್ರೋಲ್, ಡಿಸೇಲ್, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಕಂಗೆಟ್ಟಿದ್ದ ಜನರಿಗೆ
ಈಗ ಟೆಲಿಕಾಂ ಕಂಪನಿಗಳು ಕೂಡ ಶಾಕ್ ನೀಡಲು ಮುಂದಾಗಿವೆ. ಏ.1 ರಿಂದ ಮೊಬೈಲ್ ಕರೆ ಮತ್ತು ಇಂಟರ್ನೆಟ್ ದರಗಳು ಹೆಚ್ಚಾಗುವ ಸಾಧ್ಯತೆ ಇದೆಯೆಂದು ತಿಳಿದುಬಂದಿದೆ
ಹೂಡಿಕೆ ಮಾಹಿತಿ ಮತ್ತು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಪ್ರಕಾರ, ಏಪ್ರಿಲ್ 1 ರಿಂದ ಟೆಲಿಕಾಂ ಕಂಪನಿಗಳು ದರಗಳನ್ನು ಹೆಚ್ಚಳವನ್ನು ಮಾಡಲಿದೆ. 2021 – 22 ರ ಏಪ್ರಿಲ್ 1 ರಿಂದ ಇಂಟರ್ನೆಟ್ ದುಬಾರಿಯಾಗಲಿದೆ.ಫೋನ್ ಕರೆ ಮತ್ತು ಇಂಟರ್ ನೆಟ್ ನಲ್ಲಿ ಎಷ್ಟು ದರ ಹೆಚ್ಚಳವಾಗಲಿದೆ ಎಂಬ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಟೆಲಿಕಾಂ ಕಂಪೆನಿಗಳು ದರ ಹೆಚ್ಚಳವನ್ನು ಮಾಡಲಿದೆ.
4 ಜಿ ಬಳಕೆದಾರರ ಶುಲ್ಕ ಕೂಡ ಹೆಚ್ಚಾಗಲಿದೆ.ಈ ಮೂಲಕ ಮುಂದಿನ ಹಣಕಾಸು ವರ್ಷದಲ್ಲಿ ಆದಾಯವನ್ನು ಹೆಚ್ಚಿಸಲು ಟೆಲಿಕಾಂ ಕಂಪೆನಿಗಳು ಮುಂದಾಗಿವೆ.ಫೋನು ಮತ್ತು ಇಂಟರ್ ನೆಟ್ ಬಳಕೆಯನ್ನು ೠಡಿ ಮಾಡಿಕೊಂಡವರಿಗೆ ಇದರ ಬಿಸಿ ತಟ್ಟುವುದಂತು ಖಂಡಿತ