

ಆನಗಳ್ಳಿ ಗ್ರಾಮದ ಹೇರಿಕುದ್ರು ನಿವಾಸಿಯಾಗಿದ್ದ ಗಂಗಾಧರ ಶೆಟ್ಟಿಯವರು ಸಮಾಜ ಸೇವಕರಾಗಿದ್ದು, ಆನಗಳ್ಳಿ ಮತ್ತು ಹೇರಿಕುದ್ರುವಿಗಾಗಿ ಅಮೂಲ್ಯ ಸೇವೆಯನ್ನು ನೀಡಿದ್ದರು, ಈಗ ಅವರ ಸ್ಮರ್ಣಾರ್ಥ ಹೇರಿಕುದ್ರು ಶಾಲೆಯ ರಸ್ತೆಗೆ ಗಂಗಾಧರ ಶೆಟ್ಟಿ ರಸ್ತೆ ಎಂದು ನಾಮಕರಣ ಹಾಗೂ ಅವರ ಪುತ್ಥಳಿ ನಿರ್ಮಾಣ ಮಾಡುವ ಬಗ್ಗೆ ಮನವಿ ಅವರ ಅಭಿಮಾನಿಗಳು ಆನಗಳ್ಳಿ ಗ್ರಾಮ ಪಂಚಾಯ್ತಿಗೆ ಮನವಿ ನೀಡಿದ್ದಾರೆ, ಎಂದು ಅವರ ಅಭಿಮಾನಿಗಳು ಮಾದ್ಯಮಕ್ಕೆ ತಿಳಿಸಿದ್ದಾರೆ. ಈ ಮನವಿ ಕೆಳಕಂಡಂತ್ತೆ ಇದೆ
ಆನಗಳ್ಳಿ ಗ್ರಾಮದ ಹೇರಿಕುದ್ರು ನಿವಾಸಿಯಾಗಿದ್ದ ಗಂಗಾಧರ ಶೆಟ್ಟಿಯವರು ನಮ್ಮ ಊರಿನ ಹೆಮ್ಮೆಯ ಪುತ್ರ ಹಾಗೂ ಆನಗಳ್ಳಿ ಗ್ರಾಮ ಪಂಚಾಯತಿನ ದೀರ್ಘಾವಧಿ ಸದಸ್ಯರು ಮತ್ತು ಜನರ ಪ್ರೀತಿ ಪಾತ್ರರಾಗಿದ್ದ ಶ್ರೀಯುತ ಗಂಗಾಧರ ಶೆಟ್ಟಿ ಅವರ ಅಕಾಲಿಕ ಮರಣದಿಂದ ಇಡೀ ಗ್ರಾಮದ ಜನರು ದುಃಖಿತರಾಗಿದ್ದೇವೆ. ವೈಯಕ್ತಿಕವಾಗಿ ನಮಗೆ ಹಾಗೂ ನಮ್ಮ ಕುಟುಂಬಕ್ಕೆ ಮತ್ತು ನಮ್ಮ ಊರಿಗೆ ಗಂಗಾಧರ ಶೆಟ್ಟಿ ಅವರು ಸಲ್ಲಿಸಿದ ಸೇವೆ ನಾವು ಎಂದಿಗೂ ಮರೆಯಲಾಗದು. ಗಂಗಾಧರ ಶೆಟ್ಟಿ ಅವರು ತಮ್ಮ ಜೀವಿತಾವಧಿಯುದ್ದಕ್ಕೂ ಜನರಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ನಮ್ಮ ಊರಿನ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅವರ ಕೊಡುಗೆಯನ್ನು ಎಂದಿಗೂ ಮರೆಯಲಾರರು ಸದ್ರಿ ಊರಿನ ಪ್ರತಿಯೊಬ್ಬ ವ್ಯಕ್ತಿಯು ಕೂಡ ಗಂಗಾಧರ ಶೆಟ್ಟಿ ಅವರ ಸವಿ ನೆನಪಿಗಾಗಿ ಹೇರಿಕುದ್ರಿನ ಮುಖ್ಯ ರಸ್ತೆಗೆ ಗಂಗಾಧರ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡಬೇಕು ಎಂದು ಅಪೇಕ್ಷೆ ಪಡುತ್ತಿದ್ದಾರೆ ಜೊತೆಗೆ ಹರ್ಷವರ್ಧನ ಶೆಟ್ಟಿ ಅವರ ಅಂಗಡಿ ಬಳಿ ಶ್ರೀಯುತ ಪಂಜು ಪೂಜಾರಿ ಮತ್ತು ರಾಧ ಪೂಜಾರ್ತಿ ಹಾಗೂ ಮಕ್ಕಳ ಜಾಗದಲ್ಲಿ ಪುತ್ತಳಿ ನಿರ್ಮಾಣ ಮಾಡುವ ಬಗ್ಗೆ ಊರಿನ ಪ್ರಮುಖರು ತೀರ್ಮಾನಿಸಿದ್ದು ಇದಕ್ಕೆ ನಮ್ಮ ಬೆಂಬಲ ಇರುತ್ತದೆ. ದಯವಿಟ್ಟು ತಾವು ಪಂಚಾಯತ್ ನಿರ್ಣಯ ಕೈಗೊಂಡು ಕೂಡಲೇ ರಸ್ತೆಗೆ ನಾಮಕರಣ ಮಾಡಿ ಪುತ್ತಳಿ ನಿರ್ಮಾಣ ಮಾಡಲು ಅನುಮತಿ ನೀಡಬೇಕಾಗಿ ವಿನಂತಿ.
ಮನವಿ ನೀಡುವ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಸವಿತಾ ಬಿಲ್ಲವ,ಉಪಾಧ್ಯಕ್ಷರಾದ ಉದಯ ಪೂಜಾರಿ, ಸದಸ್ಯರಾದ ಲಾರೆನ್ಸ್ ಡಿಸೋಜಾ, ಗೀತಾ ಎಸ್ , ಸುರೇಶ್ ನಾಯ್ಕ, ಪ್ರಭಾಕರ ನಾಯ್ಕ, ಅಭಿಜಿತ್ ಪೂಜಾರಿ ,ಮುಕಾಂಬು , ನಿರ್ಮಲ ಇನ್ನಿತರರು ಉಪಸ್ಥಿತರಿದ್ದರು
ಪಿಡಿಒ ಅನಿಲ್ ಬಿರಾದಾರ ರವರಿಗೆ ಮನವಿಯನ್ನು ಸಲ್ಲಿಸಲಾಗಿದೆ.
