

ಕೋಲಾರ,ಜು.11: ವಿಮಾ ರಂಗದಲ್ಲಿ ಜಿ.ಎಸ್.ಟಿ ಹಿಂಪಡೆಯುವಂತೆ ಒತ್ತಾಯಿಸಿ ಸಂಸದ ಎಂ.ಮಲ್ಲೇಶ್ ಬಾಬುರನ್ನು ಅವರ ನಿವಾಸದಲ್ಲಿ ಬೇಟಿ ಮಾಡಿ ವಿಮಾ ನೌಕರರ ಸಂಘ ಕೋಲಾರ ಜಿಲ್ಲಾ ಶಾಖೆ ವತಿಯಿಂದ ಮನವಿ ಸಲ್ಲಿಸಿಲಾಯಿತು.
ನಿಯೋಗದಲ್ಲಿ ವಿಮಾ ನೌಕರರ ಸಂಘ ಕೋಲಾರ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ಮುರಳಿ, ಕಾರ್ಯದರ್ಶಿ ಎಸ್.ರಮೇಶ್, ಖಜಾಂಚಿ ಜಿ.ಆರ್.ಶ್ರೀಧರ್, ಸಿ.ನಾಗರಾಜು, ತುಷಾರ್ ಹೆಬ್ಬಳ್ಳಿ, ಕೆ.ಎಸ್.ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
