ಶ್ರೀನಿವಾಸಪುರ : ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದವತಿಯಿಂದ ಸೋಮವಾರ ವಿವಿಧ ಬೇಡಿಕೆಗಳನ್ನು ಸರ್ಕಾರವು ಈಡೇರಿಸುವ ಸಲುವಾಗಿ ಸರ್ಕಾರಕ್ಕೆ ಬಿಇಒ ಹಾಗೂ ತಹಶೀಲ್ದಾರ್ ರವರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬ್ಯಯಾರೆಡ್ಡಿ ಮಾತನಾಡಿ
ಕರ್ನಾಟಕ ರಾಜ್ಯವು ಶಾಲಾ ಶಿಕ್ಷಣದಲ್ಲಿ ಅನೇಕ ಹೊಸ ಉಪಕ್ರಮಗಳನ್ನು ತರುವುದರ ಮೂಲಕ ದೇಶದಲ್ಲಿ ಮಾದರಿಗಳನ್ನು ನಿರ್ಮಿಸಿದೆ, ಕಾಲಕಾಲಕ್ಕೆ ಆಗುವ ಶೈಕ್ಷಣಿಕ ಬದಲಾವಣೆಗಳನ್ನು ನಮ್ಮ ರಾಜ್ಯದಲ್ಲೂ ಶಾಲಾ ಶಿಕ್ಷಣ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿರುವುದು ಶ್ಲಾಘನೀಯ.
ಪ್ರಾಥಮಿಕ ಶಾಲೆಗಳಲ್ಲಿ 2017ರ ಹೊಸ ವೃಂದಬಲ ನಿಗದಿಯಿಂದಾಗಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವಾಗ ಗೊಂದಲಗಳು ಉಂಟಾದುದ್ದನ್ನು ನಮ್ಮ ಸಂಘಟನೆಯು ಬಲವಾಗಿ ತಿಳಿಸುತ್ತಾ ಬಂದಿದ್ದರೂ, ಅದನ್ನು ಪರಿಹರಿಸದೇ, ಮುಂದೂಡುತ್ತಾ ಬರಲಾಗಿದೆ. ಸುಮಾರು 80000ಕ್ಕೂ ಅಧಿಕ ಶಿಕ್ಷಕರು ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿದ್ದರೂ ಇವರನ್ನು 6 ರಿಂದ 8ಕ್ಕೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸದೇ ಇರುವುದು ದುರಾದೃಷ್ಟಕರ .
ಸಾಮಾಜಿಕ ನ್ಯಾಯದ ಪರ ಧ್ವನಿಯಾಗಿರುವ ತಾವುಗಳು ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಬಹುದೊಡ್ಡ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಒಂದು ಕಾರ್ಯಕಾರಿ ಆದೇಶವನ್ನು ಹೊರಡಿಸಲು ಸರಕಾರವನ್ನು ಒತ್ತಾಯಿಸಬೇಕು ಎಂದು ತಹಶೀಲ್ದಾರ್ ಹಾಗು ಬಿಇಒ ರವರಿಗೆ ಮನವಿ ಮಾಡುತ್ತಾ, ಈ ಮೂಲಕ ಉಲ್ಲಂಘನೆಯಾಗಿರುವ ನಿಯಮಗಳನ್ನು ಸರಿಪಡಿಸುವುದರ ಜೊತೆಗೆ ನಿರಂತರ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿಯ ತಾರತಮ್ಯ ಹಾಗೂ ಅನ್ಯಾಯವಾಗದಂತೆ ನಿಯಮ ರೂಪಿಸಬೇಕು ಒತ್ತಾಯಿಸಿದರು ಹಾಗೂ ವಿವಿಧ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿ ಮನವಿ ಪತ್ರ ಸಲ್ಲಿಸಿದರು.
ಈ ಸಮಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಜಿಲ್ಲಾ ಖಾಜಾಂಚಿ ರೋಣುರು ರೆಡ್ಡಪ್ಪ,ತಾಲೂಕು ಉಪಾಧ್ಯಕ್ಷ ಆನಂದ್,ಸಂಘಟನಾ ಕಾರ್ಯದರ್ಶಿ ವೆಂಕಟರಾಮರೆಡ್ಡಿ, ಗ್ರಾಮೀಣ ಕಾರ್ಯದರ್ಶಿ ನಾಗೇಂದ್ರ, ನಿದೇರ್ಶಕ ಕೆ.ರಘನಾಥರೆಡ್ಡಿ, ಬಿರ್ಪಿ ಎಸ್.ಎನ್.ಪದ್ಮ, ಸಿಆರ್ಪಿ ಪೆದ್ದಪ್ಪಯ್ಯ, ಶಿಕ್ಷಕರಾದ ಅನಿತಾ, ವೆಂಕಟಲಕ್ಷ್ಮಮ್ಮ, ರಮೇಶ್, ಶಿವಣ್ಣ, ಶಿವಾರೆಡ್ಡಿ ಇದ್ದರು.