ಕುಂದಾಪುರ, ದಿನಾಂಕ 21-06-2024 ರಂದು ನಗರದ ಸೈoಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸೈoಟ್ ಮೇರಿಸ್ ವಿದ್ಯಾಸಂಸ್ಥೆಗಳ ಜೊತೆ ಕಾರ್ಯದರ್ಶಿ ಹಾಗೂ ಚರ್ಚಿನ ಧರ್ಮಗುರುಗಳಾಗಿರುವ ಅತೀ ವಂದನೀಯ ಫಾದರ್ ಪಾವ್ಲ್ ರೇಗೊರವರು ಅಧ್ಯಕ್ಷತೆಯನ್ನು ವಹಿಸಿ, ಪ್ರತಿಯೊಬ್ಬರಲ್ಲಿ ಕನಸುಗಳಿರುತ್ತವೆ. ಗುರಿ ಇಲ್ಲದೇ ಜೀವನವಿಲ್ಲಾ. ನಿಮ್ಮ ಗುರಿ ಸಾಧಿಸುವಲ್ಲಿ ಪ್ರಯತ್ನವಿರಲಿ ಎನ್ನುತ್ತಾ, ಈ ತರಬೇತಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ, ಅತ್ತ್ಯುತ್ತಮ ಸಂಪನ್ಮೂಲ ವ್ಯಕ್ತಿ, ತರಬೇತುದಾರರಾದ, ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕಾರ್ಕಳದ ಇನ್ನಾ ಗ್ರಾಮದ ಎಂ. ವಿ ಶಾಸ್ತ್ರೀ ಪ್ರೌಢಶಾಲೆಯಲ್ಲಿ ವಿಜ್ಞಾನ ಗಣಿತ ಅಧ್ಯಾಪಕರಾದ ಶ್ರೀ ರಾಜೇಂದ್ರ ಭಟ್. ಕೆ ರವರು ಆಗಮಿಸಿ ಸನ್ಮಾನ ಸ್ವೀಕರಿಸಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟರು. ವಿದ್ಯಾರ್ಥಿ ಜೀವನ ಅತೀ ಮೌಲ್ಯವುಳ್ಳದ್ದು ಎನ್ನುತ್ತಾ ಹಲವಾರು ಉದಾಹರಣೆಗಳನ್ನು ನೀಡುತ್ತಾ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೆರ್ನಾಂಡಿಸ್ ರವರು, ಕಾಲೇಜಿನ ವಿದ್ಯಾರ್ಥಿ ನಾಯಕನಾದ ಅಫ್ರಾನ್ ಹಾಗೂ ಕಾರ್ಯದರ್ಶಿ ಜೋನಿಟಾ ಮೆಂಡೋನ್ಸ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಉಪನ್ಯಾಸಕ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಮಲ್ಲಿಕಾ ರವರ ಧನ್ಯವಾದದೊಂದಿಗೆ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಬ್ಸಿರಾ ಕಾರ್ಯಕ್ರಮ ನಿರೂಪಿಸಿದರು.