

ಭದ್ರಾವತಿಯ ನಿರ್ಮಲ ಮಹಿಳಾ ಸೇವಾ ಕೇಂದ್ರದಿಂದ ಎಂ ಸಿ ಹಳ್ಳಿಯ ಭದ್ರಗಿರಿ ದೇವಸ್ಥಾನದ ಸಮುದಾಯ ಭವನದಲ್ಲಿ, ಭದ್ರಾವತಿ ಸರ್ಕಾರಿ ಶಾಲೆಯ ವಿಶೇಷ ಭೋದನಾ ವಿದ್ಯಾರ್ಥಿಗಳಿಗೆ ಮತ್ತು ಚಿಲ್ಡ್ರನ್ ಕ್ಲಬ್ ನ ಮಕ್ಕಳಿಗೆ ಮಕ್ಕಳ ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭದ್ರಗಿರಿ ಕ್ಷೇತ್ರದ ಶ್ರೀ ಶ್ರೀ ಮುರುಗೇಶ್ ಸ್ವಾಮಿಗಳು ಮಾತನಾಡಿ ಮಕ್ಕಳ ಸಮಾಜದ ಅವಿಭಾಜ್ಯ ಅಂಗ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮಕ್ಕಳ ವ್ಯಕ್ತಿತ್ವ ವಿಕಸನ ಶಿಕ್ಷಣದ ಜೊತೆಗೆ ಇತರೆ ಆಟೋಟಗಳು, ದೈಹಿಕ ಮತ್ತು ಮನಸ್ಸಿಕ ಸ್ಥಿರತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು, ಭದ್ರಗಿರಿ ಟ್ರಸ್ಟ್ ನ ಮುಖಂಡರಾದ ಶ್ರೀ ಸುಂದರ್ ಮಾತನಾಡಿ ಭದ್ರಗಿರಿಯ ಪುಣ್ಯಕ್ಷೇತ್ರದಲ್ಲಿ ನಿರ್ಮಲ ಮಹಿಳಾ ಸೇವಾ ಕೇಂದ್ರ ನಡೆಸುತ್ತಿರುವ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕ್ಷೇತ್ರದಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಕೂಡಾ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದರು , ಫಾ. ಸಂತೋಷ್ ವಿನ್ಸೆಂಟ್ ಡಿ ‘ ಅಲ್ಮೆಡಾ ರವರು ಮಕ್ಕಳಿಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂದಿಸಿದ ಕಥೆಗಳನ್ನು ಮಕ್ಕಳಿಗೆ ಭೋದಿಸಿದರು, ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ ಭದ್ರಗಿರಿ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಗೋಶನ್ ನಿರ್ಮಲ ಮಹಿಳಾ ಸೇವಾಕೇಂದ್ರದ ನಿರ್ದೇಶಕರಾದ ಸಿ. ತೆರೇಸಾ ಮಸ್ಕರೇನ್ಹಸ್ ಸಿಬ್ಬಂದಿಗಳಾದ ಸಹಾಯ ಮೇರಿ, ಜಯಂತಿ, ಸತ್ಯವತಿ, ತೆರೇಸಾ ಕೌಸಲ್ಯ, ಅಂಗನವಾಡಿ ಕಾರ್ಯಕತೆಯರ ಮಾರ್ಗದರ್ಶಕರಾದ ಶ್ರೀಮತಿ ಜ್ಯೋತಿ ಎಸ್ ಕುಂಬಾರ, ಪೌಷ್ಟಿಕ ಆಹಾರ ಸಲಹೆಗಾರರದ ಶ್ರೀ ಗುರುನಾಥ್ ಆಚಾರ್ ಮತ್ತು ಮಕ್ಕಳು ಭಾಗವಹಿಸಿದ್ದರು.


