
PHOTOS: JAISON FERNANDES, GANOLLI

ಕುಂದಾಪುರ,ಜೂ.3: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕ ಹಾಗೂ ಗಂಗೊಳ್ಳಿ ಕೊಸೆಸಾಂವ್ ಮಾತಾ ಚರ್ಚಿನ ಶಿಕ್ಷಣ ಆಯೋಗದ ಸಹಯೋಗದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ವ್ರತ್ತಿ ಮಾರ್ಗದರ್ಶನ ಶಿಬಿರವು ಜೂನ್ 2 ರಂದು ಗಂಗೊಳ್ಳಿಯ ಸಂತ ಜೋಸೆಫ್ ವಾಜ್ ಸಭಾ ಭವನದಲ್ಲಿ ಜರುಗಿತು.
ಕಲ್ಯಾಣಪುರ ಸಂತ ಮಿಲಾಗ್ರಿಸ್ ಕಾಲೇಜಿ ಪ್ರಾಂಶುಪಲರಾದ ಡಾ.ವಿನ್ಸೆಂಟ್ ಆಳ್ವಾ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ‘ಇಂದಿನ ಯುವ ಜನಾಂಗವು ಸಾಮಾಜಿಕವಾಗಿರು ಕೆಲವು ಸಂಗತಿಗಳನ್ನು ಹೇಗೆ ಪ್ರಭಾವಿತವಾಗಿ, ತಮ್ಮ ವ್ಯಕ್ತಿತ್ವವನ್ನು ರೂಪಿಸಲು ಅಡಚಣೆಳಾಗಿವೆ ಎಂದು ಉದಾಹರಣೆ ಸಮೇತ ವಿವರಿಸಿದರು ಅಂತರ್ಜಾಲವು ಇಂದಿನ ಪೀಳಿಗೆಯ ವಿಕಸನಕ್ಕೆ ಬಳಕೆಯಾಗದೆ, ಇಂದಿನ ಪೀಳಿಗೆಯು ಅಂತರ್ಜಾಲವನ್ನು ಅತಿಯಾದ ಬಳಕೆಯಿಂದ ವಿನಾಶದತ್ತ ಸಾಗುತ್ತೀದೆ. ಅಂತರ್ಜಾಲ ವ ಇನ್ನಿತರೆ ಅವಿಷ್ಕಾರದ ಬಳಕೆಯನ್ನು ನಮ್ಮನ್ನು ನಾವೇ ಕಡಿವಾಣ ಹಾಕಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ನಮ್ಮ ಭವಿಷ್ಯವನ್ನು ರೂಪಿಸಲು ಹಾಗೂ ಈ ದಿಶೆಯಲ್ಲಿ ಪೋಷಕರು ಸೂಕ್ತ ಹಾಗೂ ನಿರ್ಭಿತಿಯ ಮಾರ್ಗದರ್ಶನ ನೀಡಬೇಕಾಗಿದೆ’ ಎಂದು ತಿಳಿಸಿದರು.
ಗಂಗೊಳ್ಳಿ ಕೊಸೆಸಾಂವ್ ಮಾತಾ ಚರ್ಚಿನ ಧರ್ಮಗುರುಗಳಾದ ವಂ| ತೋಮಸ್ ರೋಶನ್ ಡಿಸೋಜಾರವರು ‘ಮಕ್ಕಳು ತಮ್ಮ ವ್ಯಕ್ತಿತ್ವ ವಿಕಸನ ರೂಪಿಸಲು ಒಳ್ಳೆಯ ಆಚಾರ ವಿಚಾರಗಳು ಸಂಪನ್ಮೂಲ ವ್ಯಕ್ತಿಗಳು ಬೆಳಕು ಚೆಲ್ಲಿದ್ದಾರೆ, ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೆಲೇಯೆ ಇದೆ’ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ 10 ನೇ ಹಾಗೂ ಪಿಯುಸಿ ಫೈನಲ್ ನಲ್ಲಿ ಹೆಚ್ಚು ಅಂಕ ಗಳಿಸಿದ ಸಿಂಡ್ರೆಲ್ಲಾ ರೇಬೆರೊ, ಕ್ರಾರಲ್ ರೇಬೆರೊ, ವೆಲಿಟಾ ಲೋಬೊ, ಬ್ರಿನೆಲ್ ಬಾರ್ನಸ್, ಮಿಗೊರಾ ಡಾಯಸ್, ಹಾಗೂ ಶರಲ್ ಫೆರ್ನಾಂಡಿಸ್ ಅವರನ್ನು ಗೌರವಿಸಲಾಯಿತು. ಹಾಗೂ ಇಂಡಿಯಾ ಫೆಡೆರೇಶನ್ ಇದರ ರಾಜ್ಯಧ್ಯಕ್ಷರಾಗಿ ಆಯ್ಕೆಯಾದ ಎಲ್ರೊಯ್ ಕಿರಣ್ ಕ್ರಾಸ್ಟೊರವರನ್ನು ಸನ್ಮಾನಿಸಲಾಯಿತು.
ಕಥೊಲಿಕ್ ಸಭಾ ಗಂ¥sóÉÇಳ್ಳಿ ಘಟಕದ ಅಧ್ಯಕ್ಷ ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿದರು. ಶಿಕ್ಷಣ ಆಯೋಗದ ಸಂಚಾಲಕಿ ಆನ್ನಿ ಕ್ರಾಸ್ಟೊ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು, ಫೆಲ್ಸಿ ಡಿಸಿಲ್ವಾ, ಸೆಲಿನ್ ಲೋಬೊ, ವಿಲ್ಸನ್ ರೇಬೆರೊ, ಜೈಸನ್ ಫೆರ್ನಾಂಡಿಸ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಸರ್ವ ಆಯೋಗಳ ಸಂಯೋಜಕಿ ಹಾಗೂ ಕಾರ್ಯಕ್ರಮದ ಸಂಚಾಲಕಿ ರೆನಿಟಾ ಬಾರ್ನೆಸ್ ಧನ್ಯವಾದಗಳನ್ನು ಅರ್ಪಿಸಿದರು. ಒವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.










