

ಕುಂದಾಪುರ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್-2024) ಯಲ್ಲಿ ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಸಿಂಚನಾ ಶೆಟ್ಟಿ 568 ಅಂಕಗಳೊಂದಿಗೆ 94.89 ಪರ್ಸಂಟೈಲ್,ನಿಶಾ 542 ಅಂಕಗಳೊಂದಿಗೆ, 93.47 ಪರ್ಸಂಟೈಲ್, ಸುಹಾನಿ ಎನ್ 443 ಅಂಕಗಳೊಂದಿಗೆ 87.13 ಪರ್ಸಂಟೈಲ್, ಅಲಿಫಾ 425 ಅಂಕಗಳೊಂದಿಗೆ 85.73 ಪರ್ಸಂಟೈಲ್ ಗಳಿಸಿರುತ್ತಾರೆ. ನೀಟ್ ಪರೀಕ್ಷಾ ಸಾಧಕಿಯರಾದ ಸಿಂಚನಾ ಶೆಟ್ಟಿ, ನಿಶಾ, ಸುಹಾನಿ ಎನ್ ಹಾಗೂ ಅಲಿಫಾ ಅವರನ್ನು ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಹಾಗೂ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಯವರು ಅಭಿನಂದನೆ ಸಲ್ಲಿಸಿರುತ್ತಾರೆ.
