


ಉಡುಪಿ : ಪ್ರತಿಷ್ಠಿತ ಎಂಬಿ ಗ್ರೂಪ್ ಇವರು ಬೆಂಗಳೂರಿನ ಹೋಟೆಲ್ ಫೊಕ್ಸ್ ಗ್ಲೋವ್ ಇಂಟರ್ನ್ಯಾಷನಲ್ ವೈಟ್ ಫೀಲ್ಡ್ ಇಲ್ಲಿ ಸೆ.24 ರಂದು ಆಯೋಜಿಸಿದ್ದ ‘ಮಿಸ್ಟರ್ & ಮಿಸ್ ಟೀನ್ ಕರ್ನಾಟಕ’ ಇದರ ಸೀಸನ್ 4 ರ ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಪೆರಂಪಳ್ಳಿಯ ಶರೀನಾ ಮತಾಯಸ್ ರವರಿಗೆ ‘ಕರ್ನಾಟಕ ನೆಕ್ಸ್ಟ್ ಟಾಪ್ ಮಾಡೆಲ್’ ಟೈಟಲ್ ಪ್ರಶಸ್ತಿ ದೊರಕಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 14 ಸ್ಪರ್ಧಿಗಳಲ್ಲಿ, ಪೆರಂಪಳ್ಳಿಯ ಶರೀನಾರವರಿಗೆ ಪ್ರತಿಷ್ಠಿತ ಟೈಟಲ್ ಪ್ರಶಸ್ತಿ ದೊರಕಿದ್ದು, ಫ್ಯಾಶನ್ ಮಾಡೆಲಿಂಗ್ ನ ಪ್ರಥಮ ಹೆಜ್ಜೆಯಲ್ಲಿಯೇ ಯಶಸ್ವಿಯ ಮೈಲುಗಲ್ಲು ಇಟ್ಟಿದ್ದಾರೆ.
ಪೆರಂಪಳ್ಳಿಯ ಸುನಿಲ್ ಮತ್ತು ಅನಿತಾ ಮತಾಯಸ್ ದಂಪತಿಗಳ ಮಗಳಾಗಿರುವ ಶರೀನಾ ಮತಾಯಸ್ ಪ್ರತಿಭಾವಂತೆಯಾಗಿದ್ದು, ಪ್ರಸ್ತುತ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಪೆರಂಪಳ್ಳಿಯ ಫಾತಿಮಾ ಮಾತೆ ದೇವಾಲಯದ ಐಸಿವೈಎಂ ಯುವ ಸಂಘಟನೆಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.


