ದೇವರ ಆರಾಧನೆಯಲ್ಲಿರುವಾಗ ಮ್ರತ ಪಟ್ಟ ಫಾ|ವಲೇರಿಯನ್ ದೇವರೆ ತಮ್ಮ ಬಳಿ ಸ್ವರ್ಗಲೋಕಕ್ಕೆ ಕರೆದುಕೊಂಡಿದ್ದಾರೆಂದು ಜನರ ಚಿಂತನೆ

JANANUDI.COM NETWORK


ಮಂಗಳೂರು: ಮಂಗಳುರು ಧರ್ಮಪ್ರಾಂತ್ಯದ ಕಾಟಿಪಳ್ಳ ನ್ಫೆಂಟ್ ಮೇರಿ ಚರ್ಚಿನ ಧರ್ಮಗುರು ವಂ. ವಲೇರಿಯನ್ ಲೂವಿಸ್ ಹ್ರದಯಘಾತದಿಂದ ಮ್ರತ ಪಟ್ಟ ಅಘಾತಕಾರಿ ಘಟೆನೆ ನಡೆದಿದೆ.
ಅವರು ಕಾಟಿಪಳ್ಳ ಚರ್ಚಿನಲ್ಲಿ ಭಾನುವಾರ ದಿವ್ಯ ಬಲಿಪೂಜೆ ಅರ್ಪಿಸಿ ಪರಮ ಪ್ರಸಾದದ ಆರಾಧನೆ ಮಾಡುತ್ತಿರುವಾಗ ಕುಸಿದು ಬಿದ್ದಿದ್ದರು. ಫಾ.ವಲೇರಿಯನ್ ಲೂವಿಸ್ ಅವರನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಹಿ ಹಿಂದೆ ಕೂಡ ಅವರಿಗೆ ಹ್ರದಯಘಾತವಾಗಿತ್ತು ಎಂದು ತಿಳಿದು ಬಂದಿದೆ.
ಫಾ.ಲೂವಿಸ್ ಅವರು ಪುತ್ತುರಿನವರಾಗಿದ್ದು, ಅವರ ಜನನ ೧೯೬೬ ರಲ್ಲಿ ಆಗಿದ್ದು ಅವರು ಅಂಟನಿ ಲೂವಿಸ್ ಮತ್ತು ಕ್ಯಾಥರಿನ್ ಬ್ರಿಜಿತ್ ಲೋಬೊ ಇವರ ಪುತ್ರರಾಗಿದ್ದರು.
ಫಾ|ಲೂವಿಸ್ ಅವರಿಗೆ ೧೯೯೫ರಲ್ಲಿ ಮಂಗಳೂರು ಧರ್ಮಪ್ರಾಂತ್ಯದಿAದ ಧರ್ಮದೀಕ್ಷೆ ಲಭಿಸಿದ್ದು, ಧರ್ಮಗುರುಗಳಾಗಿ ನೇಮಕ ಗೊಂಡು ವಾಮಂಜೂರು, ಬಾರ್ಕೂರು ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಅವರು, ಜೆಪ್ಪುವಿನಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ನಂತರ ಕೊಕ್ಕಡ, ಸುಳ್ಯ ಮತ್ತು ಮಂಜೆಶ್ವರ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದು, ೨೦೧೯ ರಿಂದ ಕಾಟಿಪಳ್ಳ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸಲ್ಲಿಸುತಿದ್ದರು. ಆರಾಧನೆ ವೇಳೆ ಧರ್ಮಗುರುಗಳು ಮ್ರತ ಪಟ್ಟಿದ್ದು, ಇದೊಂದು ಬಹು ಅಪರೂಪದ ಘಟನೆಯಾಗಿದೆ, ದೇವರ ಪ್ರಾರ್ಥನೆಯಲ್ಲಿರುವಾಗಲೇ ಅವರು ಇಹಲೋಕ ತ್ಯಜಿಸಿದ್ದ ಅವರು ದೇವರು ಅವರಿಗೆ ಸ್ವರ್ಗ ಪ್ರಾಪ್ತಿ ಮಾಡಿದ್ದಾರೆಂದು ಜನರ ಮಾತಾನಾಡಿಕೊಳ್ಳುತಿದ್ದಾರೆ.