ಶ್ರೀನಿವಾಸಪುರ : ಸರ್ಕಾರಿ ವೃತ್ತಿ ಜೀವನದಲ್ಲಿ ನಿವೃತ್ತಿ ಸಹಜ ಸೇವೆಯ ಅವಧಿಯಲ್ಲಿ ಮಾದರಿಯಾದ ಕೆಲಸಗಳನ್ನು ಮಾಡಿದರೆ ಜನರು ನೆನಸುತ್ತಾರೆ. ಅಂತಹವರ ಸಾಲಿನಲ್ಲಿ ಎನ್. ನಾರಾಯಣಸ್ವಾಮಿ ರವರು ನಿಲ್ಲುತ್ತಾರೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಶ್ರಾವಣಿ.ಎಸ್ ಹೇಳಿದರು.
ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪವಿಭಾಗ ಕಛೇರಿಯಲ್ಲಿ ನಿವೃತ್ತಿ ಹೊಂದಿದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎನ್. ನಾರಾಯಣಸ್ವಾಮಿ ರವರಿಗೆ ಬೀಳ್ಕೋೀಡಿಗೆ ಸನ್ಮಾನ ಮಾಡಿ ಮಾತನಾಡಿದ ಎಇ ಸರ್ಕಾರದ ಸೇವೆಯನ್ನು ಸಲ್ಲಿಸಿದ ಪ್ರತಿಯೊಬ್ಬರಿಗೂ ನಿವೃತ್ತಿ ಎಂಬುದು ಸಹಜ ಇದರ ಮಧ್ಯದಲ್ಲಿ ಯಾವ ರೀತಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂಬುದು ಜನ ನೆನಸಿಕೊಳ್ಳುತ್ತಾರೆ. ನಾನು ಈ ಕಛೇರಿಗೆ ಬಂದು 5-6 ತಿಂಗಳು ಆಯಿತು ಆಗಿನಿಂದ ನಮ್ಮ ಎಇಇ ರವರನ್ನು ನೋಡುತ್ತಿದ್ದೇವೆ. ಕೆಲಸದಲ್ಲಿ ಯಾವುದೇ ಅಡತಡೆಗಳು ಬಂದರೂ ಸಲಹೆ ಸೂಚನೆಗಳನ್ನು ನೀಡುತ್ತಿದ್ದರೂ ಅವರ ಮಾರ್ಗದರ್ಶನ ನಮಗೆ ತುಂಬಾ ಉಪಯುಕ್ತವಾಗಿದೆ ಇಂದು ನಿವೃತ್ತಿ ಹೊಂದುತ್ತಿರುವ ಇವರಿಗೆ ದೇವರು ಆಯಾರೋಗ್ಯ ಭಾಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಸಹಾಯಕ ಅಭಿಯಂತರ ಇಲಾಖೆಯ ರಸಾಯನಿಕ ತಜ್ಞ ಶುಭ ಮಾತನಾಡಿ ನಾರಾಯಣಸ್ವಾಮಿರವರು ಇಲಾಖೆಯಲ್ಲಿ ಉತ್ತಮ ರೀತಿಯ ಸೇವೆಯನ್ನು ಮಾಡಿಕೊಂಡು ಇವರು ನಿವೃತ್ತಿ ಹೊಂದುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅವರು ಸಲ್ಲಿಸಿದ ಕಾಲಾವಧಿಯಲ್ಲಿ ಒಳ್ಳೆಯ ಮಾರ್ಗದರ್ಶರಾಗಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ಕೆಲಸದಲ್ಲಿ ಯಾವುದೇ ತೊಂದರೆ ಆದರೂ ಅದನ್ನು ತಿದ್ದಿ ಈ ರೀತಿ ಕೆಲಸವನ್ನು ಮಾಡಬೇಕೆಂದು ಹೇಳುತ್ತಿದ್ದರು. ಅವರ ಸೇವಾವಧಿಯಲ್ಲಿ ನಮಗೆ ತುಂಬಾ ಸಹಕಾರವನ್ನು ನೀಡುತ್ತಿದ್ದರು ಎಂದು ಕೊಂಡಾಡಿದರು.
ಎ.ವಿ ಸಂತೋಷ್ ಕುಮಾರ್ ಮಾತನಾಡಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬಾವಿಸಿ ಕರ್ತವ್ಯದಲ್ಲಿ ಪ್ರಾಮಾಣಿಕತೆಯೊಂದಿಗೆ ಇಲಾಖೆಯ ಬಳಗದ ಜೊತೆಗೆ ಹೊಂದಾಣಿಕೆ ಪ್ರೀತಿ ವಿಶ್ವಾಸ ಉತ್ತಮ ಕರ್ತವ್ಯದೊಂದಿಗೆ ಸೇವೆ ಸಲ್ಲಿಸಿದ ಅವರ ಇತರರಿಗೆ ಮಾದರಿಯಾಗಿದ್ದಾರೆ ಪರಿಪೂರ್ಣ ಕರ್ತವ್ಯ ನಿರ್ವಹಿಸಿದ ಅವರ ಸತತ ಪರಿಶ್ರಮದ ಸೇವೆ ಶ್ಲಾಘನೀಯವಾಗಿದೆ ಅಲ್ಲದೆ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಎನ್. ನಾರಾಯಣಸ್ವಾಮಿ ಇಲಾಖೆಯಲ್ಲಿ ಕೆಲಸದ ಒತ್ತಡದಲ್ಲಿ ನಾನು ಏನಾದರೂ ದುಬಾರಿಯಿಂದ ಮಾತನಾಡಿ ನಿಮ್ಮ ಮನಸ್ಸುಗಳಿಗೆ ನೋವಾಗಿದ್ದರೆ ಕ್ಷಮಿಸಿ ನಾನು ಸರ್ಕಾರಿ ಸೇವೆಯಲ್ಲ 30 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದೇನೆ. ನನ್ನ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸವನ್ನು ಮಾಡಿಕೊಂಡು ಹೋಗಿದ್ದೇನೆ. ಎಲ್ಲಾ ಗುತ್ತಿಗೆದಾರರ ಮತ್ತು ನಮ್ಮ ಸಿಬ್ಬಂದಿ ಸಹಕಾರದಿಂದ ನಾನು ಉತ್ಸಾಹದಿಂದ ಕೆಲಸ ಮಾಡಲು ಸಹಕಾರಿಯಾಗಿದೆ. ನನ್ನ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆಂಬ ಆತ್ಮ ಸಾಕ್ಷಿ ನನಗಿದೆ ಎಲ್ಲರೂ ಸಹಕಾರ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ತಿಳಿಸಿದರು.
ಈ ಸಮಯದಲ್ಲಿ ಎ ಇ ಟಿ.ಎಂ. ನವೀನ್ ಕುಮಾರ್, ಜೆಜೆಎಂ ಅಧಿಕಾರಿ ಶಿವಕುಮಾರ್, ಡಿಇಓ ಕೆ.ಎನ್. ಶ್ರೀನಾಥ್, ಗಣೇಶ್, ಶಶಿ, ಕಛೇರಿಯ ಸಹಾಯಕ ರೆಡ್ಡೆಪ್ಪ, ಗುತ್ತಿಗೆದಾರರಾದ ಅಂಕಿರೆಡ್ಡಿ, ಬಿ.ವಿ. ಕೃಷ್ಣಾರೆಡ್ಡಿ, ಡಿ.ಆರ್.ಮಂಜುನಾಥರೆಡ್ಡಿ, ಅರಮಾಕಲಹಳ್ಳಿ ಎನ್.ವಿ. ವೆಂಕಟರಾಮರೆಡ್ಡಿ, ಶೀಗಹಳ್ಳಿ ಗೋವಿಂದರೆಡ್ಡಿ, ನಿವೃತ್ತ ಅಧಿಕಾರಿಗಳಾದ ಕೆ.ಎಸ್ ರಾಮಲಿಂಗಾರೆಡ್ಡಿ, ಬಿ. ಸುಬ್ಬರೆಡ್ಡಿ, ಅಪ್ಪಿರೆಡ್ಡಿ, ಚಿಂತಾಮಣಿ ಕೋನಪ್ಪರೆಡ್ಡಿ, ಇನ್ನೀತರರು ಉಪಸ್ಥಿತರಿದ್ದರು.