ಶ್ರೀನಿವಾಸಪುರ : ಪ್ರತಿಯೊಂದು ಇಲಾಖೆಯು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು , ಸಂವಿಧಾನವನ್ನು ಉಳಿಸಿಬೆಳಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಡಿಒ ಮಂಗಳಾಂಬ ಕರೆ ನೀಡಿದರು.
ತಾಲೂಕಿನ ಆರಿಕುಂಟೆ ಪ್ರೌಡಶಾಲೆಯ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತ್, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನದಲ್ಲಿ ಮೂರು ಅಂಗಗಳು ಸಂವಿಧಾನದ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಕ್ಷೇತ್ರಗಳು ಮುನ್ನಡೆಯಲು ಸಂವಿಧಾನ ಮಹಾಗ್ರಂಥ ಕಾರಣವಾಗಿದೆ. ಸಂವಿಧಾನವು ದೇಶದ ಪ್ರಜಾಪ್ರಭುತ್ವ ಮುನ್ನಡೆಯಲು ಮಹತ್ವವನ್ನು ಪಡದಿದೆ. ನಮ್ಮ ದೇಶಕ್ಕೆ ಸಂವಿದಾನವನ್ನು ರಚನೆ ಮಾಡಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ರವರಿಗೆ ಶತಕೋಟಿ ನಮನಗಳು ಎಂದರು.
ಗ್ರಾಮದ ಮಹಿಳೆಯರು ಪೂರ್ಣ ಕುಂಭ ಕಳಶಗಳೊಂದಿಗೆ ಸಂವಿಧಾನ ಜಾಗೃತಿ ರಥವನ್ನು ಅದ್ದೂರಿಯಾಗಿ ಬರಮಾಡಿಕಂಡರು.ಶಿಕ್ಷಣ ಇಲಾಖೆ, ಗ್ರಾಮಪಂಚಾಯಿತಿ , ಸಮಾಜಕಲ್ಯಾಣ ಇಲಾಖೆ ಈ ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು.
ಗ್ರಾ.ಪಂ . ಅದ್ಯಕ್ಷೆ ಮುನಿವೆಂಕಟಮ್ಮ, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಕಾರ್ಯದರ್ಶಿ ಚಂದ್ರಶೇಖರ್, ಮಾಜಿ ಅಧ್ಯಕ್ಷೆ ಸರಸ್ವತಮ್ಮ, ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ತಾ.ಪಂ ಮಾಜಿ ಲಕ್ಷ್ಮಣರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಂಡಪಲ್ಲಿ ಚಂದ್ರಾರಡ್ಡಿ, ಗ್ರಾ.ಪಂ.ಸದಸ್ಯ ಡಿಎಸ್ಆರ್ .ಶ್ರೀನಾಥರೆಡ್ಡಿ, ಮುಖಂಡ ಆರಿಕುಂಟೆ ಅಂಬರೀಶ್, ಮುಖ್ಯ ಶಿಕ್ಷಕ ಮುರಳಿಬಾಬು ನೇತೃತ್ವದಲ್ಲಿ ನಡೆಯಿತು.
ಎಸ್ವಿಪುರ್ : ಆರಿಕುಂಟೆ ಗ್ರಾಮದ ಪ್ರೌಡಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತ್, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಮಂಗಳಾಂಬ ಚಾಲನೆ ನೀಡಿದರು.
ನೆಲವಂಕಿ ಗ್ರಾ.ಪಂ ಕಛೇರಿ ಬಳಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ಗ್ರಾ.ಪಂ. ಅಧ್ಯಕ್ಷ ರಾಮಚಂದ್ರಾರೆಡ್ಡಿ, ಉಪಾಧ್ಯಕ್ಷೆ ಬಿ.ಆರ್.ಶೋಭ, ಪಿಡಿಒ ವಿಜಯಲಕ್ಷ್ಮಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ರೋಣೂರು ಗ್ರಾಮದ ಪ್ರಾಥಮಿಕ ಶಾಲಾವರಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ವೆಂಕಟರಮಣಾರೆಡ್ಡಿ, ಪಿಡಿಒ ಮಹೇಶ್, ಕಾರ್ಯದರ್ಶಿ ಮುರಳಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ತಾಡಿಗೋಳ್ ಗ್ರಾಮದ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷ್ಮಯ್ಯ, ತಾಡಿಗೋಳ್ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುರೇಶ್, ಉಪಾಧ್ಯಕ್ಷೆ ಪಲ್ಲವಿ ನಾರಾಯಣಸ್ವಾಮಿ, ಪಿಡಿಒ ಚಲಪತಿ, ಸದಸ್ಯರಾದ ಸವಿತ, ಪಾರ್ವತಮ್ಮ, ಜ್ಯೋತಿ, ಪ್ರೌಡಶಾಲೆಯ ಮುಖ್ಯ ಶಿಕ್ಷಕ ನಾಗರಾಜು, ಪ್ರಾಥಮಿಕ ಶಾಲೆಯ ಶಿಕ್ಷಕಿ ಸುನಂದಮ್ಮ, ಶಿಕ್ಷಕ ಗೋಪಾಲಕೃಷ್ಣ, ಸಿಆರ್ಪಿ ಶ್ರೀನಿವಾಸರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಾದ ಡಿ.ಎನ್.ಮಂಜುನಾಥರೆಡ್ಡಿ , ಬೈರೇಗೌಡ, ಮೂರುಕಣ್ಣಪ್ಪ, ಗಣೇಶ್, ಶ್ರೀನಿವಾಸ್, ಕೆ.ಕೆ.ವೆಂಕಟರಮಣ, ವಿದ್ಯಾರ್ಥಿಗಳು, ಸಾರ್ವಜನಿಕರ ನೇತೃತ್ವದಲ್ಲಿ ನಡೆಯಿತು.
ಜೆ.ತಿಮ್ಮಸಂದ್ರ ಗ್ರಾಮದಲ್ಲಿ ಗ್ರಾ.ಪಂ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ಗ್ರಾ.ಪಂ ಅಧ್ಯಕ್ಷ ನಾಗೇಶ್ರೆಡ್ಡಿ, ಉಪಾಧ್ಯಕ್ಷೆ ಭಾರತಮ್ಮ, ಪಿಡಿಒ ವಿನೋಧರೆಡ್ಡಿ, ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ, ಸದಸ್ಯರಾದ ಕೃಷ್ಣಮ್ಮ, ಶಿಲ್ಪ, ಆರ್ಐಗಳಾದ ಮುನಿರೆಡ್ಡಿ, ಗುರುರಾಜರಾವ್, ವಿಎ. ಸ್ವಾತಿ ಬಂಡಾರಿ, ಸಿಬ್ಬಂದಿ ಜೆ.ಎ.ಮಂಜುನಾಥ್, ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ನಾಗದೇನಹಳ್ಳಿ ದಲಿತ ಮುಖಂಡ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯಿತು.