

ಕುಂದಾಪುರ (ಎ. 15 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ 2025 ಸೀಸನ್ 3 ಸಮ್ಮರ ಕ್ಯಾಂಪ್ನ 8ನೇ ದಿನವಾದ ಇಂದು ತಲ್ಲೂರಿನ ರಾಜಾಡಿಯಲ್ಲಿ ಕರಾವಳಿಯ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ “ಕೆಸರುಗದ್ದೆಯಲ್ಲೊಂದಿನ” ಕಾರ್ಯಕ್ರಮ ನೆರವೇರಿತು.
ಬೆಳಗ್ಗಿನ ಸಭಾ ಕಾರ್ಯಕ್ರಮವನ್ನು ರಾಜಾಡಿ ಶ್ರೀ ರಕ್ತೇಶ್ವರಿ ಮತ್ತು ನಂದಿಕೇಶ್ವರ ಪರಿವಾರ ದೇವಸ್ಥಾನದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಮೊಕ್ತೇಸರರಾದ ಸುಬ್ಬಣ್ಣ ಶೆಟ್ಟಿ ಹಾಗೂ ಕುಂದಾಪುರದ ಪ್ರಸಿದ್ಧ ವಕೀಲರಾದ ಟಿ. ಬಾಲಚಂದ್ರ ಶೆಟ್ಟಿಯವರು, ತಲ್ಲೂರು ಗ್ರಾಮ್ ಪಂಚಾಯತ್ ಉಪಾಧ್ಯಕ್ಷೆ ಚಂದ್ರಮತಿ, ಆಜ್ರಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಉದ್ಯಮಿ ಕೊಡ್ಲಾಡಿ ಪ್ರವೀಣ್ ಶೆಟ್ಟಿ, ಸುಂದರ್ ಶೆಟ್ಟಿ ಕಂಟ್ರ್ಯಾಕ್ಟರ್ ತಲ್ಲೂರು ಮತ್ತು ಸಂಸ್ಥೆಯ ಪ್ರಾಂಶುಪಾಲೆ ಡಾ.ಚಿಂತನಾ ರಾಜೇಶ್ ಇವರುಗಳು ಉಪಸ್ಥಿತರಿದ್ದು ಶುಭಹಾರೈಸಿದರು. ನಂತರ ಶಿಬಿರಾರ್ಥಿಗಳು ಕೆಸರು ಗದ್ದೆಯಲ್ಲಿ ದೇಸಿ ಆಟಗಳಾದ ಉಪ್ಪು ಮೂಟೆ, ಓಟ, ಗೋರಿ ಆಟ, ಹಗ್ಗ- ಜಗ್ಗಾಟ, ನಿಧಿ ಶೋಧನೆ ಮುಂತಾದ ಆಟಗಳನ್ನು ಆಡಿ ಗ್ರಾಮೀಣ ಕ್ರೀಡೆಗಳಿಗೆ ಜೀವಕಳೆ ತುಂಬುತ್ತಾ ದಿನವನ್ನು ಸಂಭ್ರಮಿಸಿದರು.

