

ಕುಂದಾಪುರ (ಎ.10): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಶಾಲೆಗಳಲ್ಲಿ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ – 3 ಸಮ್ಮರ್ ಕ್ಯಾಂಪ್ನ ಮೂರನೇ ದಿನವಾದ ಎಪ್ರಿಲ್ 10 ರಂದು ಶಿಬಿರಾರ್ಥಿಗಳು ʼಭಾರತ್ ಸಿನಿಮಾʼ ಮಂದಿರದಲ್ಲಿ Snow White ಸಿನಿಮಾವನ್ನು ವೀಕ್ಷಿಸಿದರು.
ಹಾಗೆಯೇ ಮಧ್ಯಾಹ್ನದ ಅವಧಿಯಲ್ಲಿ ಶಿಬಿರಾರ್ಥಿಗಳು ಕುಂದಾಪುರದ ಹುಣ್ಸೆಮಕ್ಕಿಯಲ್ಲಿರುವ ಶ್ರೀಮತಿ ವಸಂತಿ ಮಂಜಯ್ಯ ಶೆಟ್ಟಿಯವರ ಮನೆಗೆ ಭೇಟಿ ನೀಡಿ, ಫಾರ್ಮ ಹೌಸ್ನಲ್ಲಿನ ವಿವಿಧ ತಳಿಯ ಹಸುಗಳ ಸಾಕಾಣಿಕೆ ಮತ್ತು ದುರ್ಗಾ ಹೋಮ್ ಇಂಡಸ್ಟ್ರೀಸ್ ನ ಉತ್ಪಾದನಾ ವಸ್ತುಗಳ ಕಾರ್ಯಾವೈಖರಿಗಳ ಬಗ್ಗೆ ಮಾಹಿತಿ ಪಡೆದರು. ನಂತರ ಶ್ರೀಮತಿ ವಸಂತಿ ಶೆಟ್ಟಿಯವರು ಮಕ್ಕಳಿಗೆ ರುಚಿ- ಶುಚಿಯಾದ ಊಟದ ವ್ಯವಸ್ಥೆಯನ್ನು ಮಾಡಿದರು. ಮಂಜಯ್ಯ ಶೆಟ್ಟಿ ಅವರು ಮಾತನಾಡಿ ಮಕ್ಕಳಿಗೆ ಮತ್ತು ಬೇಸಿಗೆ ಶಿಬಿರಕ್ಕೆ ಶುಭ ಹಾರೈಸಿದರು.
