

ಕುಂದಾಪುರ (ಎ. 17 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ 2025 ಸೀಸನ್ 3 ಸಮ್ಮರ ಕ್ಯಾಂಪ್ನ 10ನೇ ದಿನವಾದ ಇಂದು ಶಿಬಿರಾರ್ಥಿಗಳು ಶಾಲಾವರಣದಲ್ಲಿ ದಿನವನ್ನು ಆನಂದಿಸಿದರು.
ಬೆಂಗಳೂರಿನ ಸರಕಾರಿ ಆಸ್ಪತ್ರೆಯ ಪಶುವೈದ್ಯೆಯಾಗಿರುವ ಡಾ. ಸ್ಮಿತಾ ಸಂತೋಷರವರು ಸಾಕುಪ್ರಾಣಿಗಳ ಆರೈಕೆ ಹಾಗೂ ರಕ್ಷಣೆಯ ಬಗೆಗೆ ಮಾಹಿತಿ ನೀಡಿದರು.ನಂತರ ʼಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳುʼ ವತಿಯಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ ನೀಡಲಾಯಿತು. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಆಗಿರುವ ಖಾಜಾ ಹುಸೇನ್, ಶ್ರೀ ಕೇಶವ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೇಶವರವರು ಶಿಬಿರಾರ್ಥಿಗಳಿಗೆ ಅಗ್ನಿಶಾಮಕದ ವಿವಿಧ ಸೇವೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಮಧ್ಯಾಹ್ನದ ಅವಧಿಯಲ್ಲಿ ಶಿಕ್ಷಕರಾಗಿರುವ ಶ್ರೀ ಮುರಳೀಧರ ಪಿ. ಬಾಳಿಕೆರೆ ಮತ್ತು ಶ್ರೀ ಗುರುಪ್ರಸಾದ್ ಮಾರಣಕಟ್ಟೆ ಇವರಿಂದ ಶಿಬಿರಾರ್ಥಿಗಳಿಗೆ ವಿವಿಧ ರೀತಿಯ ಅಭಿನಯ ಗೀತೆ ಹಾಗೂ ಮೋಜಿನ ಆಟಗಳನ್ನು ಆಡಿಸಿ,ಮಳೆ ನೃತ್ಯದೊಂದಿಗೆ ಶಿಬಿರಾರ್ಥಿಗಳು ದಿನವನ್ನು ಸಂಭ್ರಮಿಸಿದರು. ಶಿಕ್ಷಕ ರವಿಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು.


