

ಕುಂದಾಪುರ (ಎ. 11 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಇಂದು ಶಿಬಿರಾರ್ಥಿಗಳಿಗೆ ಕುಂದಾಪುರದ ವಿಸ್ಮಯ ಜಾದು ಇದರ ಪ್ರಸಿದ್ಧ ಜಾದುಗಾರ ಸುಕೇಶ್ ಆಚಾರ ಆಗಮಿಸಿ ಮಕ್ಕಳಿಗೆ ವಿಭಿನ್ನ ಮಾದರಿಯ ಜಾದು ಪ್ರದರ್ಶನದ ಮೂಲಕ ಮಕ್ಕಳನ್ನು ಮನರಂಜಿಸಿದರು. ಹಾಗೆಯೇ ಕೆಂಚನೂರು ಕ್ರಾಫ್ಟ್ ಶಿಕ್ಷಕಿ ಶ್ರೀಮತಿ ವಿಮಲಾ ಆದರ್ಶರವರು ಕ್ಯಾಂಪ್ ನ ವಿದ್ಯಾರ್ಥಿಗಳಿಗೆ ತೆಂಗಿನ ಗರಿ ಹಾಗು ಮಾವಿನ ಎಲೆಗಳಿಂದ ವಿಭಿನ್ನ ಮಾದರಿಯ ಕರಕುಶಲತೆಗಳನ್ನು ಪರಿಚಯಿಸಿದರು. ಮಧ್ಯಾಹ್ನ ಊಟದ ನಂತರ ರಾಜಶೇಖರ್ ಎಂ ತಾಳಿಕೋಟೆ ಕಲಾ ಶಿಕ್ಷಕ ಆಲೂರು ಇವರು ಮುಖವಾಡ ಮತ್ತು ಇನ್ನಿತರ ಕರಕುಶಲ ವಸ್ತು ತಯಾರಿಕೆಯ ಕುರಿತು ಮಾಹಿತಿ ನೀಡಿದರು.

