

ಕುಂದಾಪುರ (ಎ. 9 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಇಂದು ಶಿಬಿರಾರ್ಥಿಗಳು ಉಪ್ಪುಂದದ ಶ್ರೀಯುತ ಬಿ ಎಸ್ ಸುರೇಶ್ ಶೆಟ್ಟಿಯವರ ಮಾಲೀಕತ್ವದ ಸುಮುಖ ಸರ್ಜಿಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಭೇಟಿ ನೀಡಿ, ಆಸ್ಪತ್ರೆಗಳಲ್ಲಿ ಉಪಯೋಗಿಸಲ್ಪಡುವ ಸರ್ಜಿಕಲ್ ವಸ್ತುಗಳ ಬಗ್ಗೆ ಅಲ್ಲಿನ ಸಿಬ್ಬಂದಿಯಾಗಿರುವ ಜಯಶೇಖರ್ ಮಡಪ್ಪಾಡಿಯವರಿಂದ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡರು. ಸುರೇಶ್ ಶೆಟ್ಟಿಯವರು ಮಕ್ಕಳಿಗೆ ರುಚಿ -ಶುಚಿಯಾದ ಊಟದ ವ್ಯವಸ್ಥೆಯನ್ನು ಮಾಡಿದರು. ಹಾಗೆಯೇ ಕ್ಯಾಂಪ್ ನ ವಿದ್ಯಾರ್ಥಿಗಳು ಬೈಂದೂರಿನ ಬೋಳಂಬಳ್ಳಿಯಲ್ಲಿರುವ ಪದ್ಮಾವತಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿನ ಹಳೆಯ ವಸ್ತುಗಳ ಸಂಗ್ರಹಾಲಯವನ್ನು ವೀಕ್ಷಿಸಿದರು. ಆಡಳಿತ ಧರ್ಮದರ್ಶಿಗಳಾದ ಶ್ರೀಯುತ ಧರ್ಮರಾಜ ಜೈನ್ ರವರು ದೇವಸ್ಥಾನದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ನಂತರ ನಾಗೂರಿನಲ್ಲಿರುವ ಅಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು.


