

ಕುಂದಾಪುರ (ಎ.7) : ಕುಂಬಾರಿಕೆ ಮಾಡುವುದು ಒಂದು ಕುಲಕಸುಬು. ಅದು ಒಂದು ದಿನದ ಕೈಚಳಕದಿಂದ ಮಾಡಲು ಸಾಧ್ಯವಿಲ್ಲ. ಒಂದು ಮಡಿಕೆಯನ್ನು ಲೀಲಾಜಾಲವಾಗಿ ಮಾಡಬೇಕಾದರೆ ಕನಿಷ್ಠ ಎರಡು ವರ್ಷಗಳ ಅನುಭವವಾದರೂ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ಮಡಿಕೆ ಮಾಡಲು ತಾಳ್ಮೆ ಅತಿ ಮುಖ್ಯ. ಶಾಂತರೂಪಿನಿಂದ ಕೆಲಸ ಮಾಡಿದರೆ ಕಾರ್ಯಸಿದ್ಧಿ ಎಂದು ಕುಂಬಾರಿಕೆಯ ಪ್ರಾತ್ಯಕ್ಷಿಕೆ ನೀಡಿದ ಆಲೂರಿನ ರಾಘವೇಂದ್ರ ಕುಲಾಲ್ ಹೇಳಿದರು.
ಅವರು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ಆಯೋಜಿಸಿದ ‘ಪ್ಯಾಟಿ ಮಕ್ಕಳ್ ಹಳ್ಳಿ ಟೂರ್’ ಬೇಸಿಗೆ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ಹೇಳಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ ಚಿಂತನ ರಾಜೇಶ್ ಕಾರ್ಯಕ್ರಮ ಆಯೋಜಿಸಿದರು. ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಆಶಾ ಎಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
