ರಾಜ್ಯದಲ್ಲಿ ಪೆಟ್ರೋಲ್ ಸೆಂಚುರಿ ಬಾರಿಸಿತು..!!! ಇಂಧನ ಬೆಲೆ ನಿಯಂತ್ರಣ ಮಾಡಲಾಗದ ಸರಕಾರ : ಒಟ್ಟಾರೆ ಬಡವ ಜನಸಾಮನ್ಯರ ಗೋಳು

JANANUDI.COM NETWORK

ಎಲ್ಲಾ ರೀತಿಯಲ್ಲಿ ಬೆಲೆ ಉಬ್ಬರಿಕೆಗೆ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಕಾರಣ, ಎಲ್ಲಾ ರೀತಿಯ ಸರಕುಗಳನ್ನು ಅಲ್ಲಿಂದ ಇಲ್ಲಿಗೆ ಸಾಗಿಸಲು, ಪೆಟ್ರೋಲ್ ಮತ್ತು ಡೀಸೆಲ್ ಆಧಾರಿತ ವಾಹನಗಳೇ ಬೇಕು, ಇಂಧನದ ಬೆಲೆ ಹೆಚ್ಚಳವಾದರೆ, ಸ್ವಯಂ ಚಾಲಿತವಾಗಿ ಎಲ್ಲಾ ಥರಹದ ದಿನನಿತ್ಯ ಬಳಕೆಯ ಸಾಮಾನು ಪದಾರ್ಥತಗಳಿಗೆ ಬೆಲೆ ಹೆಚ್ಚುತ್ತದೆ. ಇದರ ಪರಿಣಾಮ ನೇರವಾಗಿ ಬಡವರು,ಜನ ಸಾಮನ್ಯರ ಮೇಲೆ ಬೀರುತ್ತದೆ.ಬಡತನ ಜಾಸ್ತಿಯಾಗುತ್ತದೆ,ಇದರಿಂದಾಗಿ ಕೆಲವರ ಜೀವನ ಕಶ್ಟದಾಯಕವಾಗಿ,ಕೆಲವರು ಅಡ್ಡ ದಾರಿ ಹಿಡಿಯುತ್ತಾರೆ, ಕೆಲವರಿಗೆ ಆತ್ಮಹತ್ಯೆಗೆ ಒಳಗಾಗುವ ಪರಿಸ್ಥಿತಿಗೆ ಬಂದು ಬಿಡುತ್ತಾರೆ.

ಶಿರಸಿ .ಜೂ.6:  ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪೆಟ್ರೋಲ್ 100.22 ಆಗಿದ್ದರೆ ಡೀಸೆಲ್ ಡೀಸೆಲ್ 92.95 ಆಗಿದ್ದು, ತೀವ್ರ ಕಳವಳಕಾರಿ ಸಂಗತಿಯಾಗಿದೆ. ಸರಕಾರಕ್ಕೆ ಈ ಬಗ್ಗೆ ನಿಯಂತ್ರಣವೇ ಇಲ್ಲವೆಂದು ಹೇಳ ಬೇಕಾಗುತ್ತದೆ. ಈಗಂತು ಅತ್ಯಂತ ಕೆಟ್ಟ ಕಾಲ,  ಕೊರೋನಾ ಕಾರಣದಿಂದ ಉದ್ಯೋಗವೂ ಇಲ್ಲದೇ ಗಳಿಕೆಯೂ ಇಲ್ಲದೇ ದಿನನಿತ್ಯದ ಜೀವನ ನಡೆಸಲು ಕಷ್ಟ ಪಡುತ್ತಿರುವ ವೇಳೆ ಮೊದಲಿನ ಸರಕಾರಗಳಿರುವಾಗ ಪೆಟ್ರೋಲ್ ಬೆಲೆಯಲ್ಲಿ ಮತ್ತು ಡೀಸೆಲ್ ಬೆಲೆಯಲ್ಲಿ ಬಹಳ ಅಂತರವಿದ್ದು ಡೀಸೆಲ್ ಬೆಲೆ ಕಡಿಮೆ ಇರುತಿತ್ತು, ಆದರೆ ಈಗ ಪೆಟ್ರೋಲ್ ಮತ್ತು ಡೀಸೆಲ್ ಸಾಧರಣ ಒಂದೇ ಬೆಲೆಯಂತ್ತೆ ಕಂಡು ಬರುತ್ತದೆ.

    ಈ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ  ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದೆ,  ವರ್ಷದ ಹಿಂದೆ 90 ರೂ ಇದ್ದ ಅಡುಗೆ ಎಣ್ಣೆ ಬೆಲೆ 185 ರೂಪಾಯಿಗಳಿಗೆ ಬಂದು‌ ತಲುಪಿ ಎಲ್ಲಾ ರೀತಿಯ ಪದಾಥಗಳಿಗೆ ಬೆಲೆ ದುಬಾರಿಯಾಗಿರುವುದು ಜನತೆಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

       ದೇಶದಲ್ಲಿ ಪೆಲ್ಟ್ರೋಲ್ ಏರಿದೆಯೆಂದು ಈಗಿನ ಸರಕಾರ ಅಂದಿನ ಸರಕಾರಕ್ಕೆ ಹೀಯಾಳಿಸಿದ್ದೆ ಹೀಯಾಳಿಸಿದ್ದು,  ಆದರೆ ಇವತ್ತಿನ ಸ್ಥಿತಿ ಪೆಟ್ರೋಲ್ ಬೆಲೆ ಏರಿ ದೇಶದ ಸ್ಥಿತಿ ಚಿಂತಾಜನಕವಾಗಿದೆ.

     ಈ ರೀತಿ ಲಂಗೂ ಲಗಾಮಿಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿಯಂತ್ರಣ ಇಲ್ಲದಂತ್ತೆ ಏರುತ್ತೀರುವಾಗ, ಈ ಸಮಸ್ಯೆ ನಿಯಂತ್ರ ಮಾಡಲು ಸಾಧ್ಯವಿಲ್ಲದಂತ್ತ ಸರಕಾರ ಇದಾಗೀದೆಯೆಂದು ಒತ್ತಿ ಒತ್ತಿ ಹೇಳಲೆ ಬೇಕಾಗುತ್ತದೆ. ಸರಕಾರ ನಡೆಸಲು,ದೇಶ ಆಳಲು ಇವರಿಂದ ಅಸಾಧ್ಯವೆಂಬ ಗುಮಾನಿ ಬರುವುದರಲ್ಲಿ ಸಂಶಯವಿಲ್ಲ.