ಮಕ್ಕಳು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸಬೇಕು; ಟಿ.ಎಸ್.ಮಾಯಾ ಬಾಲಚಂದ್ರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಕ್ಕಳು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ನೇರವಾಗಿ ಭಾಗವಹಿಸಬೇಕು. ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಬೇಕು ಎಂದು ತಾಲ್ಲೂಕು ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ಟಿ.ಎಸ್.ಮಾಯಾ ಬಾಲಚಂದ್ರ ಹೇಳಿದರು.
ಪಟ್ಟಣದ ರಾಮ ಮಂದಿರದ ಆವರಣದಲ್ಲಿ ತಾಲ್ಲೂಕು ವಿಪ್ರ ಮಹಿಳಾ ಮಂಡಳಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಾಂಸ್ಕøತಿಕ ಸೌರಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆದರೆ ಪ್ರದರ್ಶನಕ್ಕೆ ಅಗತ್ಯವಾದ ವೇದಿಕೆಗಲ ಕೊರತೆ ಎದ್ದು ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಕೊರತೆ ನೀಗುವ ಸಲುವಾಗಿ ಪ್ರತಿಭಾ ಸೌರಭ ಕಾರ್ಯಕ್ರ ಏರ್ಪಡಿಸಲಾಗಿದೆ. ಇಲ್ಲಿ ವಿವಿಧ ರಂಗಗಳಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ವೇದಿಕೆ ನೀಡಲಾಗಿದೆ. ಅವರು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಾಗಿದೆ. ಈ ಹಿಂದೆಯೂ ಇಂಥ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭಲ್ಲಿ ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ.ದಿವಾಕರ್, ವೈದ್ಯಾಧಿಕಾರಿ ಡಾ. ರಂಗರಾವ್, ಸಮಾಜ ಸೇವಕ ಗೋಪಿನಾಥರಾವ್ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳನ್ನು ಪುರಸ್ಕರಿಸಲಾಯಿತು.
ವಿಪ್ರ ಮಹಿಳಾ ಮಂಡಳಿ ಸದಸ್ಯರಾದ ಇಂದ್ರ, ಮಮತಾ ರಾಣಿ, ನಾಗವೇಣಿ, ವಿಜಯಲಕ್ಷ್ಮಿ, ಶ್ರಾವಣಿ, ಪಲ್ಲವಿ, ಹರಿಪ್ರಿಯ, ಶಾರದಾ ಕೃಷ್ಣಮೂರ್ತಿ, ರಕ್ಷಾ ಅರುಣ್ ಕುಮಾರ್, ಮುಖಂಡರಾದ ಸುಬ್ರಮಣಿ, ಗುಂಡಣ್ಣ, ಗಿರೀಶ್ ಇದ್ದರು
.