ಶ್ರೀನಿವಾಸಪುರ : ಚುನಾವಣೆಯ ಸಮಯದಲ್ಲಿ ಮುಖಂಡರು ಓಟು ಕೇಳುವುದಕ್ಕೆ ಮುನ್ನ ಮತದಾರರ ಕಷ್ಟಗಳಿಗೆ ಸ್ಪಂದಿಸುವಂತೆ ಮುಖಂಡರಿಗೆ ಎಂದು ಸಂಸದ ಎಸ್.ಮುನಿಸ್ವಾಮಿ ಸಲಹೆ ನೀಡಿದರು.
ತಾಲೂಕಿನ ದಳಸನೂರು ಗ್ರಾಮದ ಗ್ರಾಮಪಂಚಾಯಿತಿ ಆವರಣದಲ್ಲಿ ಶನಿವಾರ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿವುದರ ಮೂಲಕ ಉದ್ಗಾಟಿಸಿ ಮಾತನಾಡಿದರು.
ಕೌಶಲ ಇರುವಂತಹವರಿಗೆ ಕೇಂದ್ರ ಸರ್ಕಾರದ ನೇತೃತ್ವದಲ್ಲಿ ತರಬೇತಿಯನ್ನು ನೀಡಿ 10 ರಿಂದ 15 ದಿನಗಳು ತರಬೇತಿ ನೀಡಿ ಒಂದು ದಿನಕ್ಕೆ 500 ಸ್ಟೈಫಂಡ್ನ್ನು ಸಹ ನೀಡಲಾಗುತ್ತದೆ ಎಂದರು. ಅವರ ತರಬೇತಿಗೆ ತಕ್ಕಂತೆ ಮುಗಿದ ನಂತರ 15 ಸಾವಿರ ರೂಗಳ ಕಿಟ್ನ್ನು ನೀಡುತ್ತಾರೆ.
ಕೇಂದ್ರ ಸರ್ಕಾರದಿಂದ ಗ್ರಾಮದಲ್ಲಿ ಚರಂಡಿ ಸ್ವಚ್ಚತೆ, ಹೈಮಾಸ್ಕ್ ಲೈಟ್ ಹಾಗೂ ತಾಯಿ ಹಾಗು ಹೊಟ್ಟೆಯಲ್ಲಿರುವ ಮಗು ಆರೋಗ್ಯವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಪೋಷನ್ ಅಭಿಯಾನದಡಿ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಹಾಗೂ ಹರಿಗೆಯ ನಂತರ 6 ಸಾವಿರ ರೂಗಳನ್ನು ಸಹ ನೀಡಲಾಗುತ್ತಿದೆ.
ಎಲ್ಲರಿಗೂ ಸರ್ಕಾರ ಕೆಲಸ ಸಿಗಲು ಸಾಧ್ಯವಾಗುವುದಿಲ್ಲವೆಂಬದನ್ನ ಮನಗಂಡ ನರೇಂದ್ರ ಮೋದಿರವರು ಅವರವರ ಕೌಶಲಕ್ಕೆ ತಕ್ಕಂತೆ ಕೆಲಸ ಕಾರ್ಯಗಳನ್ನು ಮಾಡಲಿ ಎನ್ನುವ ಉದ್ದೇಶದಿಂದ ಲೀಡ್ ಬ್ಯಾಂಕ್ಗಳಿಂದ ಸಾಲವನ್ನು ನೀಡುವಂತೆ ಬ್ಯಾಂಕ್ಗಳಿಗೆ ಆದೇಶ ನೀಡಿ ಬಡಕುಟುಂಬಗಳ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಇದೇ ಸಮಯದಲ್ಲಿ ಮಾಸ್ತೇನಹಳ್ಳಿ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವು ನಡೆಯಿತು. ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಡಿಎಫ್ಎಸ್ ಅಧಿಕಾರಿ ಸಮೀರ್ ಶುಕ್ಲ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುದೀರ್, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್, ಗ್ರಾ..ಪಂ ಅಧ್ಯಕ್ಷ ಶ್ರೀನಿವಾಸ್ ಉಪಾಧ್ಯಕ್ಷೆ ಉಮಾದೇವಿ, ದಳಸನೂರು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ರಾಮಚಂದ್ರ, ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕರಾದ ಜಿ.ವೆಂಕಟೇಶ್, ಪಿ.ರಾಮಚಂದ್ರರ, ಮುಖಂಡರಾದ ವಿ.ಹನುಮಪ್ಪ, ಲಕ್ಷ್ಮಣಗೌಡ , ರೋಣೂರು ಚಂದ್ರಶೇಖರ್ ಪಾಳ್ಯ ಗೋಪಾಲರೆಡ್ಡಿ , ಪಿಡಿಒ ಚಿನ್ನಪ್ಪ ಹಾಗು ಇತರರು ಉಪಸ್ಥಿತರಿದ್ದರು.