ಶ್ರೀನಿವಾಸಪುರ : ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ , ಆಂತಸ್ತು, ಮಾಡಿಕೊಟ್ಟರೆ ಮಾರಿಕೊಳ್ಳುತ್ತಾರೆ . ಆದರೆ ವಿದ್ಯೆ ಕೊಟ್ಟರೆ ಶಾಶ್ವತವಾಗಿ ನಿಮ್ಮ ಮಕ್ಕಳು ಸುಖ ಜೀವನ ನಡೆಸಲು ಕಾರಣರಾಗುತ್ತೀರಿ ಎಂದು ಮಕ್ಕಳ ಪೋಷಕರಿಗೆ ಶಾಸಕ ಕೆ.ಆರ್.ರಮೇಶ್‌ಕುಮಾರ್ ಕಿವಿಮಾತು ಹೇಳಿದರು.
ಗೌಡತಾತಗಡ್ಡ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಚುನಾವಣೆಯು ಐದು ವರ್ಷಗಳಿಗೊಮ್ಮೆ ನಡೆಯುವಂತಹ ಕಾರ್ಯಕ್ರಮ. ಈ ದೇಶವನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂದು ಆಲೋಚನೆ ಮಾಡಲು, ನೀವು ಎಲ್ಲರೂ ಸೇರಿ ನಮಗೆ ಇಂತಹ ಸೌಲಭ್ಯಗಳು ಬೇಕು. ಇಂತಹ ಸಮಸ್ಯೆ ಇದೆ . ಎಂದು ನೀವು ನನಗೆ ಮಾಹಿತಿ ನೀಡಬೇಕು. ಸಮಸ್ಯೆಯ ಬಗ್ಗೆ ನನ್ನಲ್ಲಿ ಮಾಹಿತಿ ಇರಬೇಕು. ಅದನ್ನ ನಾನು ವಿಧಾನಸೌದ ಚರ್ಚೆ ಮಾಡುತ್ತೇನೆ. ಆಗ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಾಗುತ್ತದೆ ಎಂದು ಭರವಸೆ ನೀಡಿದರು.
ಸಾರ್ವಜನಿಕರು ಮುಖ್ಯವಾಗಿ ನಮ್ಮ ಗಮನಕ್ಕೆ ತರುವುದು, ಗ್ರಾಮಕ್ಕೆ ಸುಸಜ್ಜಿತ ರಸ್ತೆ, ಚರಂಡಿ, ಶುದ್ದಕುಡಿಯುವ ನೀರು, ಶಾಲೆ, ಕಾಲೇಜು, ಆರೋಗ್ಯ ಕೇಂದ್ರ, ವಸತಿ ನಿಲಯ, ಉದ್ಯೋಗ ಕೇಳುತ್ತಾರೆ ಅಷ್ಟೇ.
ಗೌಡತಾತ ಗಡ್ಡ ಗ್ರಾಮದಲ್ಲಿ ಬಹುತೇಕ ಭೋವಿ ಜನಾಂಗವಿದ್ದು, ೫೦ ವರ್ಷ ಹಿಂದೆ ಯಾವ ರೀತಿಯಲ್ಲಿ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು . ಈ ಹಿಂದೆ ಗ್ರಾಮದಲ್ಲಿ ಬಹುತೇಕ ಗುಡಿಸಲು ವಾಸಿಗಳೇ ಇದಿದ್ದು, ಶಿಕ್ಷಣ ಅಷ್ಟಕ್ಕಷ್ಟೆ ಆದರೆ ಇಂದು ಗ್ರಾಮದ ಜನತೆ ಸಂವೃದ್ಧಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ ಇದು ನನ್ನ ಮನಸ್ಸಿಗೆ ಖುಷಿ ತಂದಿದೆ.
೬೦ ವರ್ಷಗಳ ಹಿಂದೆ ಇಂದಿರಗಾAದಿ ರವರು ಎಲ್ಲರೂ ಶಿಕ್ಷಣವನ್ನು ಪಡೆಯಲು ಆದೇಶಿದ್ದರು. ಈ ಒಂದು ದೃಷ್ಟಿಯಿಂದ ಇಂದು ಬಹುತೇಕರು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಂದಿರಾಗಾAದಿಯವರ ಆಶಯವನ್ನು ನಾನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಶಾಲೆ ೧೦ ಕೋಟಿ ವೆಚ್ಚದಲ್ಲಿ ವಸತಿ ಶಾಲೆಯನ್ನು ನಿರ್ಮಿಸಿ ಗ್ರಾಮದ ಎಲ್ಲಾ ಮಕ್ಕಳು ಇಲ್ಲಿಯೇ ಓದಿ ಬುದ್ದಿವಂತರಾಗುವ ನಿಟ್ಟಿನಲ್ಲಿ ಆಂತರರಾಷ್ಟೀಯ ಮಟ್ಟದಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಿಸುವ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಬೆಂಗಳೂರು ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಈ ಶಾಲೆಯಲ್ಲಿ ಪಾಠಪ್ರವಚನಗಳನ್ನು ಹಮ್ಮಿಕೊಳ್ಳಲಾಗುವುದು.
ದೇಶಕ್ಕೆ ಅನ್ನ ನೀಡುವವರೆಲ್ಲರೂ ರೈತರೆ. ಅನ್ನವನ್ನು ನೀಡುವ ರೈತರಿಗೆ ಜಾತಿ ಮತ ಬೇದವಿಲ್ಲ. ರೈತರನ್ನು ಕಾಪಾಡಿ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮಳೆ ಬರಲಿ, ಇರಲಿ ಇಂದು ಕೆಸಿ ವ್ಯಾಲಿ ನೀರಿನಿಂದ ತಾಲೂಕಿನ ಕೆರೆಗಳು ಬಹುತೇಕ ಭರ್ತಿಯಾಗಿದೆ. ರಾಯಲ್ಪಾಡು , ನೆಲವಂಕಿ ಹೋಬಳಿಗಳಲ್ಲಿ ಚೆಕ್ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮದಲ್ಲಿ ಅರ್ಧ ಎಕರೆ, ಒಂದು ಎಕರೆ ಜಮೀನು ಇರುವ ರೈತರಿಗೆ ಸರ್ಕಾರದಿಂದ ಉಚಿತವಾಗಿ ಕೊಳವೆಬಾವಿಗಳನ್ನು ಪಕ್ಷಾತೀತವಾಗಿ ಹಾಕಿಸಲಾಗುತ್ತದೆ ಎಂದು ಭರವಸೆ ನೀಡಿದರು.
ರಾಜಕೀಯಕ್ಕೆ ಅರ್ಥ ಬರಬೇಕಾದರೆ, ಗೌರವ ಸಿಗಬೇಕಾದರೆ ನೀವು ಕೊಡುವ ಗೌರವ, ಆಪ್ಯಾಯತೆ ನಾವು ಉಳಿಸಿಕೊಳ್ಳಬೇಕು. ಅದರಂತೆ ಮುಂದಿನ ದಿನಗಳಲ್ಲಿ ಗೌಡತಾತಗಡ್ಡ ಗ್ರಾಮಕ್ಕೆ ಬೇಟಿ ನೀಡಿದರೆ ಬೆಂಗಳೂರಿಗೆ ಬೇಟಿ ನೀಡಿದಂತೆ ಇರಬೇಕು ಎಂದರು. ಈ ಒಂದು ನಿಟ್ಟಿನಲ್ಲಿ ತಾವೆಲ್ಲರೂ ಮುಂದಿನ ಚುನಾವಣೆಯಲ್ಲಿ ನನ್ನ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ೩೫ ಕುಟುಂಬಗಳು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಲಕ್ಷಿಪುರ ಗ್ರಾ.ಪಂ.ಅಧ್ಯಕ್ಷೆ ಮಂಗಮ್ಮ ನಡುಪನ್ನ ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸAದ್ರ ಶಿವಾರೆಡ್ಡಿ, ರಾಯಲ್ಪಾಡು ಗ್ರಾ.ಪಂ.ಸದಸ್ಯ. ಆರ್.ಗಂಗಾದರ್, ಮುಖಂಡರಾದ ಕೆ.ಕೆ.ಮಂಜು, ಬೋರ್‌ವೆಲ್ ಕೃಷ್ಣಾರೆಡ್ಡಿ, ಎಸ್ . ಎನ್.ವೆಂಕಟೇಶ್, ರೋಣುರು ಸಂತೋಷ, ಸೀತಾರಾಮರೆಡ್ಡಿ, ಪೇಪರ್ ವೆಂಕಟೇಶ್, ಮುನಿಪ್ಪ , ಭಾಸ್ಕರ ಇದ್ದರು.