ಗುಣಮಟ್ಟದ ಶಿಕ್ಷಣ ಪಡೆಯಲು ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ- ಶಾಸಕ ಕೆ.ಆರ್‌.ರಮೇಶ್ ಕುಮಾರ್

ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಪೋಷಕರು ಗುಣಮಟ್ಟದ ಶಿಕ್ಷಣ ಪಡೆಯಲು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ ಎಂದು ಶಾಸಕ ಕೆ.ಆರ್‌.ರಮೇಶ್ ಕುಮಾರ್ ತಿಳಿಸಿದರು . ಪಟ್ಟಣದ ತ್ಯಾಗರಾಜ ನಗರ ( ಬೈರೆಡ್ಡಿ ಶಾಲೆ ) ಗೆ ಸೋಮವಾರ ಬೇಟಿ ನೀಡಿ ಶಾಲೆಯ ಶೈಕ್ಷಣಿಕ ಪ್ರಗತಿ ಹಾಗು ಮೂಲಭೂತ ಸೌಲ ಭ್ಯಗಳನ್ನು ಪರಿಶೀಲಿಸಿ ಮಾತ ನಾಡಿದರು . ಶಾಲಾವರಣದಲ್ಲಿ ಶಿಥಿಲ ಗೊಂಡಿರುವ 6 ಕೊಠಡಿ ಗಳನ್ನು ತೆರವುಗೊಳಿಸಿ , ಪುನಃ ಆ ಸ್ಥಳ ದಲ್ಲಿ ನೂತನವಾಗಿ 6 ಕೊಠಡಿ ಗಳನ್ನು ನಿರ್ಮಿಸಲು ಮುಂದಿನ 15 ದಿನಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು . ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನಾನು ಸದಾ ಹಗಲಿರಳು ನಿಮ್ಮೊಂದಿಗೆ ಇರುತ್ತೇನೆ ಎಂದರು . ಶಿಕ್ಷಣ ಇಲಾಖೆಯು ತಾಲೂಕಿನ 12 ಸರ್ಕಾರಿ ಶಾಲೆಗ ಳಲ್ಲಿನ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿದ್ದು , ಇವುಗಳಿಗೆ ಇಂಗ್ಲೀಷ್ ಬೋಧನೆ ಮಾಡುವ ಶಿಕ್ಷಕರ ಕೊರತೆಯ ಬಗ್ಗೆ ಬಿಇಒ ರವರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಶಾಸಕರು ದೂರವಾಣಿ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರನ್ನು ಮಾತನಾಡಿ ತಾಲೂಕಿ ನಲ್ಲಿನ ಇಂಗ್ಲೀಷ್ ಬೋಧನೆ ಮಾಡುವ ಶಿಕ್ಷಕರ ಕೊರತೆ ಇದ್ದು , ಶಿಕ್ಷಕರ ಸಮಸ್ಯೆಯನ್ನು ಪರಿಹರಿ ಸುವಂತೆ ಮನವಿ ಮಾಡಿದರು . ತಾಲೂಕಿನ ಸರ್ಕಾರಿ ಶಾಲೆಗಳ ಕುಂದುಕೊರತೆಗಳ ಬಗ್ಗೆ ಬಿಇಒ ರವರಿಂದ ಮಾಹಿತಿ ಪಡೆದು ಸರ್ಕಾರಿ ಶಾಲೆಗಳ ಕುಂದು 9 ಕೊರತೆಗಳನ್ನು ಪರಿಶೀಲಿಸಿ ಸರ್ಕಾರದ ಗಮನಕ್ಕೆ ತಂದು ಅತಿ ಶೀಘ್ರವಾಗಿ ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು . ಇಒ ಎಸ್.ಆನ ೦ ದ್ , ಬಿಇಒ ಉಮಾದೇವಿ , ಪುರಸಭೆ ಮುಖ್ಯ ಅಧಿಕಾರಿ ಸತ್ಯನಾರಾಯಣ , ಪಿಎಲ್‌ಡಿ ಬ್ಯಾಂಕ್ ತಾಲೂಕು ಅಧ್ಯಕ್ಷ ದಿಂಬಾಲ್ ಅಶೋಕ್ ಜಿ.ಪ ೦ . ವಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ , ತಾ.ಪಂ.ಮಾಜಿ ಸದಸ್ಯ ಕೆ.ಕೆ.ಮಂಜು , ಮುಖಂಡರಾದ ರಾಮಾನುಜಚಾರ್ಯ , ವೇಣು , ಅಮರನಾಥರೆಡ್ಡಿ , ಜಾಮಚಟು ಶ್ರೀನಿವಾಸರೆಡ್ಡಿ , ಡಾ || ದೇವ ಕುಮಾರ್ , ಅಯ್ಯಪ್ಪ , ಇಸಿಒ ಹನುಮೇಗೌಡ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬೈರೆಡ್ಡಿ , ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುಬ್ರಮಣಿ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗೋವಿಂದರೆಡ್ಡಿ , ಮುಖ್ಯ ಶಿಕ್ಷಕ ಬೈರೇಗೌಡ ಹಾಗೂ ಸಿಬ್ಬಂದಿ ಇದ್ದರು .