

ಕುಂದಾಪುರ,ಎ.9; ಕುಂದಾಪುರ ಚಿಕ್ಕನಸಾಲು ರಸ್ತೆಯ, ರೋಯಲ್ ಸಭಾಭವನಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ರುವ ‘ಪರಾಶಕ್ತಿ’ ಕಿರಾಣಿ ಅಂಗಡಿ ಎಪ್ರಿಲ್ 9 ರಂದು ಬೆಂಕಿ ಗೆತುತ್ತಾಗಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಂಗಡಿಯ ಮಾಲೀಕ ಇಂದು ಎ.9 ಕ್ಕೆ ಬೆಳಿಗ್ಗೆಯೇ ಅಂಗಡಿಯ ಬಾಗಿಲು ತೆರರೆದಿದ್ದು, ಸ್ವಲ್ಪ ಸಮಯ ಅಂಗಡಿಯಲ್ಲಿದ್ದು, ಬಳಿಕ 8 ಗಂಟೆಗೆ ತನ್ನ ವಾಹನಕ್ಕೆ ಪೆಟ್ರೋಲ್ ಹಾಕಿಸಲಿಕ್ಕೆ ಕುಂದಾಪುರ ಪೇಟೆಗೆ ತೆರಳಿದು ಅರ್ಧ ಗಂಟೆ ನಂತರ ವಾಪಸು ಬರುವಾಗ, ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ, ಅಂಗಡಿಯಲ್ಲಿದ್ದ ಎಲ್ಲಾ ಸಾಮಾನು ಸರಾಂಜಾಮು ಬೆಂಕಿಯಲ್ಲಿ ಕರಟಿ ಹೋಗಿವೆ. ಎರಡು ಫ್ರಿಜ್ ಗಳು, ಒಂದು ಡೀಪ್ ಫ್ರಿಜ್, ಮತ್ತೊಂದು ಕೂಲಿಂಗ್ ಫ್ರಿಜ್ ಪೂರ್ಣವಾಗಿ ಸುಟ್ಟು ಹೋಗಿವೆ. ಫ್ಯಾನು, ಲೈಟ್, ಸಲಕರಣೆ, ತರಕಾರಿ,ಅಕ್ಕಿ ದವಸ ದಾನ್ಯ ಮತ್ತು ನಾನಾ ತರಹದ ತಿನಿಸು ಪ್ಯಾಕೇಟಗಳೆಳು, ಸುಟ್ಟು ಕರಟಿ ಹೋಗಿವೆ.

‘ಪರಾಶಕ್ತಿ’ ಕಿರಾಣಿ ಅಂಗಡಿಯ ಮಾಲೀಕರು ಚಂದ್ರು ಎಂಬವರು, ತುಂಬಾ ಸರಳ, ಸಹಾಯಹಸ್ತ ನೀಡುವರಾಗಿದ್ದರೆಂದು ನೆರೆದಿದ್ದ ಜನರು ಮಾತಾನಾಡಿ ಕೊಳ್ಳುತಿದ್ದರು. ಒಮ್ಮೇಲೆ ಅಂಗಡಿ ಸುಟ್ಟು ಬೂದಿಯಾಗಿದ್ದರಿಂದ, ಮುಂದಿನ ಜೀವನಕ್ಕೆ ದಾರಿ ತೋಚದಂತೆ ಆಗಿರುವ ಅವರು ಸುಮಾರು ನಾಲ್ಕು ಲಕ್ಷ ನಶ್ಟ ಉಂಟಾಗಿದೆ ಎಂದು ತಿಳಿಸಿದರು. ಅವರು ಕಾರ್ಕಳದವರಾಗಿದ್ದು, ಹಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬೆಂಕಿ ಹತ್ತಲು ಕಾರಣ ತಿಳಿದು ಬಂದಿಲ್ಲ. ದೇವರಿಗೆ ದೀಪ ಹಚ್ಚಿ ಹೋರ ಹೋಗಿದರೆಂದು ಜನ ಮಾತಾನಾಡಿಕೊಳ್ಳುತ್ತಾರೆ
ಕಟ್ಟಡಕ್ಕೆ ಅಷ್ಟೊಂದು ಹಾನಿಯಾಗಲಿಲ್ಲ, ಆದರೆ ಅಂಗಡಿಯಲ್ಲಿರು ಸೊತ್ತು ಸಂಪೂರ್ಣ ಸುಟ್ಟು ಹೋಗಿದೆ. ಪಕ್ಕದಲ್ಲಿ ಟೈಲರಿಂಗ್, ಎಂಬ್ರಯ್ಡಿಂಗ್ ಅಂಗಡಿ ಇದ್ದು ಅದಕ್ಕೆ ಬೆಂಕಿ ತಗಲಿದ್ದರೆ ಇನ್ನಷ್ಟು ಅನಾಹುತವಾಗುತಿತ್ತು.








