

ಶ್ರೀನಿವಾಸಪುರ-ಏ-12, ಪ್ರಭಾವಿ ಮುಖಂಡರಿಂದ ಒತ್ತುವರಿಯಾಗಿರುವ ಪಣಸಮಾಕನಹಳ್ಳಿ ಕೆರೆಯನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಿ ಅಭಿವೃದ್ದಿಗೊಳಿಸಬೇಕೆಂದು ರೈತ ಸಂಘದಿಂದ ಉಪ ತಹಸೀಲ್ದಾರ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಪೂರ್ವಜರು ಬೆವರು ಸುರಿಸಿ ಒಗ್ಗಟ್ಟಾಗಿ ಮಳೆನೀರು ಸಂಗ್ರಹಣೆಗೆ ಕಟ್ಟಿ ಅಭಿವೃದ್ದಿ ಪಡಿಸಿರುವಂತಹ ಕೆರೆಗಳು ಇಂದು ಭೂ ಮಾಪಿಯ ಹಾಗೂ ಕೆಲವು ಪ್ರಭಾವಿ ವ್ಯಕ್ತಿಗಳ ಪಾಲಾಗುತ್ತಿದೆ. ಕೆರೆಯ ಸುತ್ತಮುತ್ತಲಿರುವ ಹತ್ತಾರು ಹಳ್ಳಿಗಳ ರೈತಾಪಿವರ್ಗ ಒತ್ತುವರಿದಾರರ ವಿರುದ್ದ ದ್ವನಿಎತ್ತಲಾರದೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗದೆ ಕಣ್ಣುಮುಂದೆಯೇ ಕೆರೆ ನಾಶವಾಗುತ್ತಿದ್ದರೆ. ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಆ ಹಳ್ಳಿಯ ಜನರಿದ್ದಾರೆ. ಅಷ್ಟರ ಮಟ್ಟಿಗೆ ಪ್ರಭಾವಿ ವ್ಯಕ್ತಿಗಳ ಒತ್ತಡ ಜನ ಸಾಮಾನ್ಯರ ಮೇಲೆ ಹಾಕುತ್ತಿದ್ದಾರೆಂದು ಹದಗೆಟ್ಟಿರುವ ಅವ್ಯವಸ್ಥೆ ವಿರುದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಷ ವ್ಯಕ್ತಪಡಿಸಿದರು.
