ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಭಕ್ತಿ ಪೂರ್ವಕವಾಗಿ ಗರಿಗಳ ಭಾನುವಾರ ಆಚರಣೆ

ಕುಂದಾಪುರ,ಎ.2: ಜಿಲ್ಲೆಯ ಅತ್ಯಂತ ಹಿರಿಯ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು, ಗರಿಗಳ ಆಶಿರ್ವವಚನ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಚರ್ಚಿನ ಮೈದಾನದಲ್ಲಿ ಗ್ರೋಟ್ಟೊ ಮುಂದುಗಡೆ ನಡೆಸಿಕೊಟ್ಟರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಜೊತೆ ಸೇರಿ ಗರಿಗಳನ್ನು ಆಶಿರ್ವದಿಸಿದರು. ನಂತರ ಗರಿಗಳ ಮೆರವಣೆಗೆಯನ್ನು ಮಾಡಲಾಯಿತು.
ಗರಿಗಳ ಭಾನುವಾರದ ಪವಿತ್ರ ಬಲಿದಾನದ ನೇತ್ರತ್ವವನ್ನು “ಯೇಸು ಕ್ರಿಸ್ತರು ದೇವರ ಯೋಜನೆಯಂತೆ, eನರನ್ನು ಪಾಪಾದಿಂದ ಬಿಡುಗಡೆ ಗೊಳಿಸಲು, ಭೂಮಿಗೆ ಬಂದಿದ್ದು, ಸತ್ಯ ನುಡಿದಕ್ಕೆ ಅಪಾರ ಕಶ್ಟ ಯಾತನೆ ಅನುಭವಿಸಿ, ಶಿಲುಭೆಯ ಮೇಲೆ ತಮ್ಮ ಪ್ರಾಣವನ್ನು ನೀಡುತ್ತಾರೆ, ನಾವು ತಮ್ಮ ಪಾಪ ಕ್ರತ್ಯಗಳಿಗೆ ಬೆನ್ನು ಮಾಡಬೇಕೆಂದು’ ಅವರು ಸಂದೇಶ ನೀಡಿದರು. ಈ ಪ್ರಾರ್ಥನ ವಿಧಿಯಲ್ಲಿ ಅಪಾರ ಭಕ್ತಾಧಿಗಳು ನೆರೆದಿದ್ದರು. ಪ್ರಧಾನ ಧರ್ಮಗುರುಗಳು ಧನ್ಯವಾದಗಳನ್ನು ಅರ್ಪಿಸಿದರು.