
ಭಾರತದಲ್ಲಿ ಕೊರೊನಾ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಸೇರಿದಂತೆ ಭಾರತಕ್ಕೆ ಅಗತ್ಯ ನೆರವು ನೀಡಲು ಪಾಕಿಸ್ತಾನ ಮುಂದಾಗಿದೆ. ‘ಈ ಬಿಕ್ಕಟ್ಟಿನ ಸಂರ‍್ಭದಲ್ಲಿ ಭಾರತೀಯರೊಂದಿಗೆ ಪಾಕಿಸ್ತಾನ ನಿಂತಿದೆ. ಎಂದು ಸುದ್ದಿ ಪ್ರಕಟವಾಗಿದೆ.
ಭಾರತಕ್ಕೆ ವೆಂಟಿಲೇಟರ್, ಬಿಐ ಪಿಎಪಿ, ಡಿಜಿಟಲ್ ಎಕ್ಸ್-ರೇ ಉಪಕರಣಗಳು, ಪಿಪಿಇ ಕಿಟ್ ಗಳು ನೀಡಲು ಪಾಕಿಸ್ತಾನ ಸಿದ್ಧ’ ಭಾರತಕ್ಕೆ ವೆಂಟಿಲೇಟರ್, ಬಿಐ ಪಿಎಪಿ, ಡಿಜಿಟಲ್ ಎಕ್ಸ್-ರೇ ಉಪಕರಣಗಳು, ಪಿಪಿಇ ಕಿಟ್ ಗಳು ನೀಡಲು ಪಾಕಿಸ್ತಾನ ಸಿದ್ಧ’ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ. ‘ಅತಿ ಶೀಘ್ರದಲ್ಲಿ ಪರಿಹಾರ ವಸ್ತುಗಳನ್ನು ವಿತರಿಸಲು ವಿಧಾನವನ್ನು ಪತ್ತೆಹಚ್ಚಲಾಗುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು,’ ನೆರೆರಾಷ್ಟ್ರ ಮತ್ತು ವಿಶ್ವದಲ್ಲಿ ಸಾಂಕ್ರಾಮಿಕದಿಂದ ಬಳಲುತ್ತಿರುವ ಎಲ್ಲರೂ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ಪ್ರರ‍್ಥಿಸುತ್ತೇನೆ. ಕೋವಿಡ್ ವಿರುದ್ಧ ಹೋರಾಡುತ್ತಿರುವ ಭಾರತದ ಜತೆಗೆ ನಾವು ಇದ್ದೇವೆ. ನಾವು ಮಾನವೀಯತೆಯಿಂದ ಈ ಜಾಗತಿಕ ಸವಾಲನ್ನು ಒಟ್ಟಾಗಿ ಎದುರಿಸಬೇಕು’ ಎಂದು ಅವರು ಹೇಳಿದರು.
‘ಈ ಸಂರ‍್ಭದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸಬೇಕು’ ಎಂದು ಮಾಜಿ ಕ್ರಿಕೆಟ್ ಆಟಗಾರ ಶೋಯೆಬ್ ಅಖ್ತರ್ ಟ್ವೀಟ್ ಮಾಡಿದ್ದಾರೆ.ಪಾಕಿಸ್ತಾನದ ಹಲವು ರಾಜಕೀಯ ನಾಯಕರು, ಕ್ರೀಡಾ ತಾರೆಯರು ಟ್ವಿಟರ್ ನಲ್ಲಿ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ
ಈಗ ಸವಾಲು ಭಾರತ ಜಗತ್ ಗುರು ಆಗುತ್ತದೆ ಎಂದು ನಂಬಿದ್ದ ಕೆಲವರು ಯೋಚನೆ ಮಾಡಬೇಕಾಗಿದೆ, ಇದೇನಾ ಭಾರತದ ಆಚ್ಚೇ ದೀನ್ ನಾವು ನಮ್ಮನ್ನೆ ಕೇಳ ಬೇಕಾದುದು ಅನಿವರ‍್ಯಾ ಸ್ಥಿತಿ ಬಂದೊಗಿದೆ. ಈ ಸ್ಥಿತಿ ಬರಲು ಇವರನ್ನು ನಂಬಿದ್ದ ಅಂತಾ, ತಲೆ ಚಚ್ಚಿ ಕೊಳ್ಳುವ ಪರಿಸ್ಥಿತಿ ಎದುರಾದದ್ದು ಸುಳ್ಳಲ್ಲಾ.