

ಪಡುಕೋಣೆ: ಪಡುಕೋಣೆ ಕಥೋಲಿಕ್ ಸಭಾ, ಸ್ತ್ರೀ ಸಂಘಟನೆ ಘಟಕಗಳಿಂದ ಹಾಗೂ ಪರಿಸರ ಆಯೋಗ ಇವರು ಜಂಟಿಯಾಗಿ ದಿನಾಂಕ 9/7/ 2023 ರ ಭಾನುವಾರದಂದು ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ವನಮಹೊತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚರ್ಚಿನ ಧರ್ಮಗುರು ವಂ| ಫಾ ಫ್ರಾನ್ಸಿಸ್ ಕರ್ನೆಲಿಯೊ ’ಪರಿಸರ ರಕ್ಷಣೆಯಲ್ಲಿ ಸಸ್ಯಗಳ ಪ್ರಮುಕ ಪಾತ್ರ ಮಾಡುತ್ತದೆ ಗಿಡ ಮರಗಳು ಎಲ್ಲಾ ಜೀವಿಗಳಿಗೆ ಹೇಗೆ ಆಧಾರ ಅವುಗಳನ್ನು ರಕ್ಷಣೆ ಯಾಕೆ ಮಾಡಬೇಕು ಎಂದು ಹೇಳಿ, ಚರ್ಚಿನ ಪ್ರತಿ ಸದಸ್ಯರು ಒಂದೊಂದು ಗಿಡನೆಟ್ಟು ಪೋಷಿಸಿರಿ’ ಎಂದು ಕರೆನೀಡಿದರು.
200 ಸಸಿಗಳನ್ನು ವಿತರಿಸಲಾಯಿತು.ಹಿಂದಿನ ಸಾಲಿನಲ್ಲಿ ನಡೆಲಾದ ಗಿಡಗಳಿಗೆ ಮಣ್ಣು ಗೊಬ್ಬರ ಹಾಕುವುದರೊಂದಿಗೆ ಹೊಸ ಸಸಿಗಳನ್ನು ನೆಟ್ಟು ಅರ್ಥಪೂರ್ಣ ವನಮಹೊತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲನ ಮಂಡಳಿ ಅಧ್ಯಕ್ಷರಾದ ಕೆನೆಡಿ ಪಿರೇರಾ, ಕಾರ್ಯದರ್ಶಿ ಆಲೆಕ್ಸ್ ಅಂತೋನಿ ಡಿಸೋಜಾ , ಪರೀಸರ ಆಯೋಗದ ಸಂಚಾಲಕ ಸ್ಟೀವನ್ ಡಿಸೋಜಾ ,ಸ್ತ್ರೀ ಸಂಘಟನೆ ಅಧ್ಯಕ್ಷೆ ಕವಿತಾ ಡಿ ಸಿಲ್ವಾ, YCS ಅಧ್ಯಕ್ಷ, ಸನೊರ ಗೊನ್ಸಾಲ್ವಿಸ್ ಹಾಗೂ ವಿವಿಧ ಸಂಘಟನೆಗಳ ಅಧ್ಯಕ್ಷರು ಸದಸ್ಯರು, ಧರ್ಮಸಭೆಯ ಸದಸ್ಯರು ಹಾಜರಿದ್ದರು. ಕ್ಯಾಥೋಲಿಕ್ ಸಭಾ ಅಧ್ಯಕ್ಷ ವಿನಯ ಅಲ್ಮೆಡಾ ಸ್ವಾಗತಿಸಿದರು. ಸoಯೋಜಕ ವಿನ್ಸೆಂಟ್ ಡಿಸೋಜ ನಿರೂಪಿಸಿ, ಧನ್ಯವಾದ ನೀಡಿದರು.


