

ಪಡುಕೋಣೆ, ದಿನಾಂಕ 15 9 2018 ರಂದು ಪಡುಕೋಣೆ ಸೈಂಟ್ ಆಂಟನಿ ಚರ್ಚಿನಲ್ಲಿ ಹಿರಿಯ ನಾಗರಿಕ ಸಂಘವನ್ನು ಧರ್ಮಗುರು ವಂ। ಫ್ರಾನ್ಸಿಸ್ ಕರ್ನೆಲಿಯೊರವರು ಉದ್ಘಾಟಿಸಿದರು.
25 ಮಂದಿ ಹಿರಿಯ ನಾಗರಿಕರೆಲ್ಲರೂ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಧರ್ಮಗುರು ವಂ। ಪ್ರವೀಣ್ ಪಿಂಟೊ ಅವರು ಹಿರಿಯರಾದ ನಾವು ಕುಟುಂಬದಲ್ಲಿ ಈಗಿನ ಕಾಲದಲ್ಲಿ ಯಾವ ರೀತಿ ನಮ್ಮ ಕೌಟುಂಬಿಕ ಜೀವನವನ್ನು ನಡಿಸಬೇಕೆಂದು ಎನ್ನುವ ಬಗ್ಗೆ ಮಾಹಿತಿ ನೀಡಿದ್ದರು.
ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಚೀನಾ ಮತಾಯಸ್ ಕ್ರಾಸ್ತಾ, ಉಪಾಧ್ಯಕ್ಷರಾಗಿ ಡಾಲ್ಫಿ ಡಿಸಿಲ್ವಾ ಮತ್ತು ಕಾರ್ಯದರ್ಶಿಯಾಗಿ ಶ್ರೀಮತಿ ಡೇರಿ ರೆಬೆಲ್ಲೋ ಆಯ್ಕೆಗೊಂಡರು. ಕಾರ್ಯಕ್ರಮಕ್ಕೆ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಕೆನಡಿ ಪಿರೇರಾ ಶುಭ ಹಾರೈಸಿದರು ವೇದಿಕೆಯಲ್ಲಿ ಮಾನವೀಯ ಕಾರ್ಯದರ್ಶಿ 22 ಆಯೋಗದ ಮುಖ್ಯಸ್ಥರು ಹಿರಿಯ ನಾಗರಿಕರಾದ ಶ್ರೀ ಪಿಲಿಫ್ ಡಿಸಿಲ್ವಾರವರು ಹಾಗೂ ಕಾನ್ವೆಂಟಿನ ಸಿ ಸುಪಿರಿಯರ್ ಹಾಜರಿದ್ದರು ಈ ಕಾರ್ಯಕ್ರಮಕ್ಕೆ ಸಿಲ್ವೆಸ್ಟರ್ ಬುತ್ತೆತ್ಲೊರವರು ಪ್ರಯೋಜಕರಾಗಿದ್ದರು.

