ಪಡುಕೋಣೆ: ಸ್ಥಳೀಯ ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ನ.14 ರಂದು ಮಕ್ಕಳ ದಿನಾಚರಣೆ ಮತ್ತು ಪ್ರತಿಭಾ ಸಿಂಚನ ಕಾರ್ಯಕ್ರಮ ಆಚರಿಸಲಾಯಿತು. ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ನಿವ್ರತ್ತ ಶಿಕ್ಷಕಿ ಶ್ರೀಮತಿ ಡೇರಿ ಸುವಾರಿಸ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಸಂಚಾಲಕರಾದ ವಂದನೀಯ ಫ್ರಾನ್ಸಿಸ್ ಕರ್ನೇಲಿಯೊ ಅಧ್ಯಕ್ಷತೆ ವಹಿಸಿದ್ದರು. ಶಾಲಾ ನಾಯಕಿ ಜಿಸ್ಸಿಕಾ ಡಿ’ಆಲ್ಮೇಡಾ ದೀಪ ಬೆಳಗಿಸಿ. ಕಾರ್ಯಕ್ರಮ ಉದ್ರಾಟಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಸಹಕರಿಸಿದರು .
ಶ್ರೀ ಕೆನಡಿ ಪಿರೇರಾ, ಶ್ರೀ ಫಿಲಿಪ್ ಡಿಸಿಲ್ವ ಶ್ರೀ ಜೋಸೆಫ್ ಡಿಸಿಲ್ವ ಶ್ರೀ ಜೀನಾ ಕ್ರಾಸ್ತಾ, ಶ್ರೀ ವಿನ್ಸೆಂಟ್ ಡಿಸೋಜ, ಶ್ರೀ ಸ್ಟ್ಯಾನಿ ಡಿಆಲ್ಮೇಡ , ಶ್ರೀ ಸ್ಟ್ಯಾನಿ ಲುವಿಸ್, ಶ್ರೀ ಸ್ಟೀವನ್ ಡಿಸೋಜ, ಸಿ.ಆರ್.ಪಿ ರಾಮನಾಥ ಮೇಸ್ತ ಹಾಗೂ ಸಿಸ್ಟರ್ ಮರ್ಸಿ ವೇದಿಕೆಯಲ್ಲಿ ಹಾಜರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು, ವಿದ್ಯಾರ್ಥಿಗಳಿಂದ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದೆವು. ವಿದ್ಯಾರ್ಥಿಳು, ವಿದ್ಯಾರ್ಥಿಗಳ ಪೋಷಕರು, ಊರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಶಾಂತಿ ಪಾಯ್ಸ್ ಸ್ವಾಗತಿಸಿದರು. ಶಿಕ್ಷಕಿ ನಿರ್ಮಲ ಫೆರ್ನಾಂಡಿಸ್ ಧನ್ಯವಾದ ಅರ್ಪಿಸಿದರು. ಕುಮಾರಿ ವಿನುತ ಕಾರ್ಯಕ್ರಮ ನಿರೂಪಿಸಿದರು.