

ಜೂನ್ 16 ರಂದು ಸಂತ ಅಂತೋನಿ ಪಡುಕೋಣೆಯಲ್ಲಿ ಕೆಥೋಲಿಕ್ ಸಭಾ ಹಾಗೂ ಐ.ಸಿ.ವೈಮ್, ಪಡುಕೋಣೆ ಸಹಭಾಗಿತ್ವದಲ್ಲಿ ಅಪ್ಪಂದಿರ ದಿನಾಚರಣೆ ಆಚರಿಸಲಾಯಿತು. ಎಲ್ಲಾ ಅಪ್ಪಂದಿರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಅಧ್ಯಕ್ಷತೆಯನ್ನು ಧರ್ಮಗುರು ವಂದನೀಯ ಫ್ರಾನ್ಸಿಸ್ ಕರ್ನೇಲಿಯೊ ವಹಿಸಿದ್ದರು. ಅವರು ತಂದೆಯು ತಮ್ಮ ಕುಟುಂಬಕ್ಕಾಗಿ ಎಷ್ಟೆಲ್ಲಾ ತ್ಯಾಗ ಮಾಡುತ್ತಾರೆ, ಮಕ್ಕಳ ಏಳಿಗೆಯಲ್ಲಿ ತನ್ನ ಯಶಸ್ಸನ್ನು ಬಯಸುತ್ತಾರೆ ಎಂದು ಹೇಳಿದರು. ಆರ್ಥಿಕವಾಗಿ ಹಿಂದುಳಿದ ಕೆಲವು ತಂದೆಯರ ಪರಿಶ್ರಮ ಮತ್ತು ಅವರ ಮಕ್ಕಳ ಸಾಧನೆಯನ್ನು ಗುರುತಿಸಿ ಅಭಿನಂದಿಸಿದರು. ಮುಖ್ಯ ಅತಿಥಿ ಶಾಂತಿ ಪಾಯಸ್ ಅಪ್ಪಂದಿರ ದಿನಾಚರಣೆ ಚರಿತ್ರೆ ಹಾಗೂ ಅವರ ಪಾತ್ರವನ್ನು ಕೊಂಡಾಡಿದರು.
ಸಭೆಯಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಕೆನಡಿ ಪಿರೇರಾ, ಕಾರ್ಯದರ್ಶಿ ಅಲೆಕ್ಸ್ ಆಂಟನಿ ಡಿಸೋಜ, ಆಯೋಗದ ಸಂಚಾಲಕ ವಿನ್ಸೆಂಟ್ ಡಿಸೋಜ, ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಮರ್ಸಿ, ಕೆಥೋಲಿಕ್ ಸಭೆಯ ಅಧ್ಯಕ್ಷ ವಿನಯ್ ಡಿಆಲ್ಮೇಡ ವೇದಿಕೆಯಲ್ಲಿ ಉಪಸ್ಥಿತರಿದ್ದರು _ ಕಾರ್ಯಕ್ರಮದ ಬಳಿಕ ಆಟಗಳನ್ನು ಆಡಿಸಿ ಬಹುಮಾನ ವಿತರಿಸಲಾಯಿತು ,