ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ದೆಹಲಿ ಐಐಟಿಯ ಪೂರ್ವ ಪ್ರಾಧ್ಯಾಪಕರಾದ ಹಾಗೂ ಸ್ಪಿಕ್‍ಮಕೆ ಸಂಸ್ಥೆಯು ಸ್ಥಾಪಕರಾದ ಪದ್ಮಶ್ರೀ ಡಾ. ಕಿರಣ್ ಸೇತ್‍ರವರೊಂದಿಗೆ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶ್ರೀಯುತರು ಮನಸ್ಸನ್ನು ಬೇಕಾದಕಡೆ ಕೇಂದ್ರಿಕರಿಸುವುದು ಹೇಗೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ದಿಸೆಯಲ್ಲಿ ಯೋಗ ಹಾಗೂ ಶಾಸ್ತ್ರೀಯ ಸಂಗೀತದ ಮಹತ್ವವನ್ನು ಅವರು ಯಾವ ತರಬೇತಿ ಇಲ್ಲದೇ ಐಐಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯ ಉದಾಹರಣೆಯನ್ನು ನೀಡಿ ಮನದಟ್ಟು ಮಾಡಿದರು.
ಮನಸ್ಸು ಹುಚ್ಚು ಮಂಗನ ಹಾಗೆ ಅತ್ಯಂತ ಬಹಳ ಆದರೆ ಮಂಗನನ್ನು ಹತೋಟಿಗೆ ತಂದು ಹೇಗೆ ಕುಣಿಯಲು ಕಲಿಸಬಹುದೋ ಹಾಗೆಯೇ ಮನಸ್ಸನ್ನು ಹತೋಟಿಯಲ್ಲಿಟ್ಟು ಸಾಧಿಸಬೇಕಾದದನ್ನು ಸಾಧಿಸಬಹುದು, ಅದಕ್ಕೆ ನಮ್ಮ ಯೋಗ ಮತ್ತು ಶಾಸ್ತ್ರೀಯ ಸಂಗೀತ ಮುಂತಾದವುಗಳು ಅತ್ಯಂತ ಸಹಾಯಕಾರಿ ಎಂದರು. ಐನ್‍ಸ್ಟಿನ್‍ನಿಂದ ಹಿಡಿದು ಡಾ. ಅಬ್ದುಲ್‍ಕಲಾಂರವರೆಗೆ ಬಹಳಷ್ಟು ಮಹಾಸಾಧಕರು ಸಂಗೀತ ಕಲಾವಿದರೂ ಕೂಡಾ ಆಗಿದ್ದರು ಎಂದು ತಿಳಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯೋಗ, ಸಂಗೀತ ಮುಂತಾದವನ್ನು ಕಲಿತು ಸರ್ವತೋಮುಖ ಅಭಿವೃದ್ಧಿ ಪಡೆಯಲೆಂದು ಆಶಿಸಿದರು.
ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ. ಶೆಟ್ಟಿಯವರು ಡೈರೆಕ್ಟರಾದ ಪ್ರೊ. ದೋಮ ಚಂದ್ರಶೇಖರ್‍ರವರು, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಹಾಗೂ ಕಾರ್ಯಕ್ರಮ ಸಂಯೋಜಿಸಿದ ಶ್ರೀ ರಾಕೇಶ್ ಎಸ್ ಸೋನ್ಸ್‍ರವರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಡಾ. ರಾಮಕೃಷ್ಣ ಹೆಗ್ಡೆಯವರು ಸ್ವಾಗತ ಕೋರಿದರು, ಶ್ರೀ ರಾಕೇಶ್ ಎಸ್. ಸೋನ್ಸ್‍ರವರು, ಡಾ. ಕಿರಣ್ ಸೇತ್‍ರವರನ್ನು ಪರಿಚಯಿಸಿದರು. ಐಎಂಜೆಐಎಸ್‍ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್‍ರವರು ವಂದನಾರ್ಪಣೆ ಗೈದರು, ಡೀನ್ ಟಿ.ಪಿ.ಐ.ಆರ್. ಶ್ರೀಮತಿ ಅಮ್ರತಮಾಲಾರವರು ನಿರೂಪಿಸಿದರು ಹಾಗೂ ಎಂಐಟಿಕೆಯ ಉಪಪ್ರಾಂಶುಪಾಲ ಪ್ರೊ ಮೆಲ್ವಿನ್ ಡಿಸೋಜರವರು ಕಾರ್ಯಕ್ರಮ ನಿರ್ವಹಿಸಿದರು.