

ಕುಂದಾಪುರ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಗಿಡವನ್ನು ನೆಡುವ ಮೂಲಕ ವನಮೋತ್ಸವವನ್ನು ಆಚರಿಸಲಾಯಿತು. ಕುಂದಾಪುರ ಪುರಸಭೆಯ ಸದಸ್ಯೆಯಾಗಿರುವ ಶ್ವೇತಾ ಇವರು ಮಾತನಾಡಿ ಗಿಡ ಮರಗಳನ್ನು ಬೆಳೆಸುವುದರಿಂದ ಆರೋಗ್ಯಕರ ವಾತಾವರಣ ಸೃಷ್ಟಿಸಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಗಿಡ ಬೆಳೆಸುವ ಉತ್ತಮ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. ಕಾನ್ವೆಂಟಿನಾ ಸುಪಿರಿಯರ್ ಆಗಿರುವ ಸಿಸ್ಟರ್ ಸಂಗೀತ ಮಾತನಾಡಿ ಗಿಡಗಳನ್ನು ನೆಟ್ಟರೆ ಸಾಲದು ಗಿಡಗಳನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಶಿಕ್ಷಕ ಅಶೋಕ್ ದೇವಾಡಿಗ ಇವರು ಸ್ವಾಗತಿಸಿದರು. ಶಿಕ್ಷಕಿ ಸೆಲಿನ್ ವಂದಿಸಿದರು. ಶಿಕ್ಷಕಿಯರಾದ ಸರಸ್ವತಿ್ ಮತ್ತು ಸ್ವಾತಿ ಕಾರ್ಯಕ್ರಮಕ್ಕೆ ಸಹಕರಿಸಿದರು.






