ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 20392 ವಿದ್ಯಾರ್ಥಿಗಳು ಐಚ್ಚಿಕ ವಿಷಯಗಳಿಗೆ ಕೇವಲ 70 ಮಂದಿ ಗೈರು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆಯ 117 ಪರೀಕ್ಷಾ ಕೇಂದ್ರಗಳಲ್ಲಿ ಇಂದು ನಡೆದ ಎಸ್ಸೆಸ್ಸೆಲ್ಸಿ ಗಣಿತ,ವಿಜ್ಞಾನ,ಸಮಾಜವಿಜ್ಞಾನ ಪರೀಕ್ಷೆಗೆ ನೋಂದಾಯಿಸಿದ್ದ ಒಟ್ಟು 20472 ವಿದ್ಯಾರ್ಥಿಗಳ ಪೈಕಿ ಕೇವಲ 70 ಮಂದಿ ಗೈರಾಗಿದ್ದಾರೆ ಮತ್ತು ಅನಾರೋಗ್ಯದ ಕಾರಣದಿಂದ 3 ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.
ಇಂದು ಪರೀಕ್ಷೆಗೆ ನೊಂದಾಯಿಸಿದ್ದ ಒಟ್ಟು 20472 ಮಂದಿ ಪೈಕಿ 20402 ಮಂದಿ ಹಾಜರಾಗಿದ್ದು, ಹಿಂದಿನ ಎಲ್ಲಾ ಪರೀಕ್ಷೆಗಳಿಗಿಂತ ಗೈರು ಹಾಜರಿ ಪ್ರಮಾಣ ಅತ್ಯಂತ ಕಡಿಮೆಯೆಂದು ದಾಖಲಾಗಿದೆ.
ತಾಲ್ಲೂಕುವಾರು
ಹಾಜರಿ ವಿವರ
ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಹಾಜರಾಗಿ ಅಂಕಿ ಅಂಶ ನೀಡಿದ್ದು, ಬಂಗಾರಪೇಟೆ 3251 ಮಂದಿ ನೊಂದಾಯಿಸಿದ್ದು, 3243 ಮಂದಿ ಹಾಜರಾಗಿ 8 ಮಂದಿ ಗೈರಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನಲ್ಲಿ 2517 ಮಂದಿ ನೋಂದಾಯಿಸಿದ್ದು, 2513 ಮಂದಿ ಹಾಜರಾಗಿ ಕೇವಲ 4 ಮಂದಿ ಗೈರಾಗಿದ್ದಾರೆ.
ಕೋಲಾರ ತಾಲ್ಲೂಕಿನಲ್ಲಿ 5801 ಮಂದಿ ನೋಂದಾಯಿಸಿದ್ದು, 5776 ಮಂದಿ ಹಾಜರಾಗಿ 25 ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನಲ್ಲಿ 2960 ಮಂದಿ ನೋಂದಾಯಿಸಿದ್ದು, 2945 ಮಂದಿ ಹಾಜರಾಗಿ 15 ಮಂದಿ ಗೈರಾಗಿದ್ದಾರೆ.
ಉಳಿದಂತೆ ಮುಳಬಾಗಿಲು ತಾಲ್ಲೂಕಿನಲ್ಲಿ 3165 ಮಂದಿ ನೋಂದಾಯಿಸಿದ್ದು, 3153 ಮಂದಿ ಹಾಜರಾಗಿದ್ದು, 12 ಮಂದಿ ಗೈರಾಗಿದ್ದಾರೆ. ಹಾಗೆಯೇ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 2778 ಮಂದಿ ನೋಂದಾಯಿಸಿದ್ದು, 2772 ಮಂದಿ ಹಾಜರಾಗಿ 6 ಮಂದಿ ಗೈರಾಗಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಇತಿಹಾಸದಲ್ಲೇ ಅತಿ ಕಡಿಮೆ ವಿದ್ಯಾರ್ಥಿಗಳು ಗೈರಾಗಿರುವುದು ದಾಖಲೆಯಾಗಿದ್ದು, ಇದರಲ್ಲಿ ಖಾಸಗಿ ಅಭ್ಯರ್ಥಿಗಳು, ಪುನರಾವರ್ತಿತ ಅಭ್ಯರ್ಥಿಗಳೂ ಇದ್ದಾರೆ.
ಪ್ರಥಮಭಾಷೆ,ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆ ಒಟ್ಟು 120 ಅಂಕಗಳಿಗೆ ಜು.22 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.