

ಕುಂದಾಪುರ, ಫೆ.12: ಫೆಬ್ರವರಿ 11 ರಂದು ಲೂರ್ದ ಮಾತೆಯ ಹಬ್ಬವನ್ನು ಬಲಿದಾನ ಮತ್ತು ಜಪಮಾಲೆಯ ಪ್ರಾರ್ಥನೆಯ ಮೂಲಕ ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ|ವಂ|ಪೌಲ್ ರೇಗೊ ಇವರು ಪವಿತ್ರ ಬಲಿದಾನವನ್ನು ಅರ್ಪಿಸಿ ‘ಇಂದು ಪ್ರಪಂಚಾದ್ಯಂತ ಲೂರ್ದ್ ಮಾತೆಯ ಹಬ್ಬವನ್ನು ಆಚರಿಸುತ್ತಾರೆ. ಅಂತೆಯೆ ಯೇಸು ಕ್ರಿಸ್ತರ 2025 ನೇ ವರ್ಷದ ಜಯಂತಿ ಪ್ರಯುಕ್ತ ಪ್ರಪಂಚಾದ್ಯಂತಹ ಅನಾರೋಗ್ಯರ ಜಜಯಂತಿಯನ್ನು ಆಚರಿಸುತ್ತಾರೆ, ಫ್ರಾನ್ಸ್ ದೇಶದ ಲೌರ್ಡೆಸ್ ಎಂಬಲ್ಲಿ“ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, ಮೇರಿ ಮಾತೆ 18 ಭಾರಿ ದರ್ಶನ ನೀಡಿದಳು, ನಾನು ರೋಜರಿ ಮಾತೆ ಎಂದು ತಿಳಿಸಿ, ಆ ಬಾಲಕಿಗೆ ನೀನು ನಿಂತ ಜಾಗದಲ್ಲಿ ನಿನ್ನ ಬೆರಳುಗಳಿಂದ ಮಣ್ಣನ್ನು ಕೆದುಕು ಎಂದು ಹೇಳುತ್ತಾಳೆ, ಅದರಂತೆ ಬರ್ನಾಡೇಟ್ ಮಣ್ಣು ಕೆದಕಿದಾಗ, ಅಲ್ಲಿನ ಬೆಟ್ಟದ ಭೂಮಿಯಲ್ಲಿ ನೀರು ಪುಟಿದೇಳುತ್ತದೆ, ನಂತರ ಅಲ್ಲಿ ದೊಡ್ಡ ಕೆರೆಯಾಗುತ್ತೆ, ನಂತರ ಆ ಕೆರೆಯಲ್ಲಿ ಮಿಂದು ಎದ್ದ ರೋಗಿಗಳು ಗುಣವಾಗ ತೊಡಗಿದರು. ನಂತರ ಆ ಪುಣ್ಯಕ್ಷೇತ್ರ ಲೂರ್ದ ಮಾತೆ ಎಂದು ಪ್ರಸಿದ್ದಿಪಡೆಯುತ್ತದೆ. ಈಗ ಅದು ವಿಶ್ವದ ಅತೀ ಹೆಸರುವಾಸಿಯಾದ ಪವಾಡದ ಪುಣ್ಯಕ್ಷೇತ್ರವೆಂದು ಖ್ಯಾತಗೊಂಡಿದೆ, ಅಲ್ಲಿ ಇಂದು ನಿತ್ಯವು ಸಾವಿರಾರು ಅನಾರೋಗ್ಯರು ಗುಣವಾಗುತ್ತಾರೆ, ಅಲ್ಲಿ ಅನಾರೋಗ್ಯರನ್ನು ಹೊತ್ತು ತರುತ್ತಾರೆ, ಗಾಲಿ ಕುರ್ಚಿಯಲ್ಲಿ ಕರೆದುಕೊಂಡು ಬರುತ್ತಾರೆ, ಎಂದು ಹೇಳುತ್ತಾ ದೇವರು ನಾವು ಕಷ್ಟದಲ್ಲಿರುವಾಗ ನಮಗೆ ತಿಳಿಯದಂತೆ ಭೇಟಿ ಮಾಡುತ್ತಾರೆ. ದೇವರು ಆನಾರೋಗ್ಯರ ಜೊತೆ ಇದ್ದು ಧೈರ್ಯ, ಸಾಂತ್ವಾನ, ಬಲ ನೀಡುತ್ತಾರೆ. ನಾವೆಲ್ಲ ದೇವರ ದೂತರು, ಅದರಂತೆ ನಾವು ಅನಾರೋಗ್ಯರನ್ನು ದೇವರ ದೂತರಂತೆ ಭೇಟಿ ಮಾಡಿ ಅವರ ಕಶ್ಟ ದುಖ್ಖಗಳನ್ನು ಹಂಚಿಕೊಳ್ಳಬೇಕು ಎಂದು ಯೇಸು ಕ್ರಿಸ್ತರ 2025 ನೇ ವರ್ಷದ ಜಯಂತಿ ವರ್ಷದಲ್ಲಿ ಪೋಪ್ ಫ್ರಾನ್ಸಿಸ್ ಕರೆಕೊಟ್ಟಿದ್ದಾರೆ. ಅದರಂತೆ ನಾವು ನಡೆದುಕೊಳ್ಳೋಣ’ ಎಂದು ಸಂದೇಶ ನೀಡಿ ಆನಾರೋಗ್ಯರ ತಲೆ ಮೇಲೆ ಕೈಯಿಟ್ಟು ಪ್ರಾರ್ಥನೆ ಮಾಡಿ ಎಲ್ಲರನ್ನು ಪವಿತ್ರ ಜಲದಿಂದ ಪ್ರೋಕ್ಷಿಸಿದರು.
ಬಲಿಪೂಜೆಯ ಮುನ್ನ ಲೂರ್ದ್ಸ್ ವಾಳೆಯವರಿಂದ, ಲೂರ್ದ ಮಾತೆಗಾಗಿ ನಿರ್ಮಿಸಿದ ಪಲ್ಲಕ್ಕಿಯಲ್ಲಿ ಇಟ್ಟು ಲೂರ್ದ್ಸ್ ಮಾತೆಯ ಪ್ರತಿಮೆಯನ್ನು ಆಶಿರ್ವದಿಸಿದರು, ಬಲಿದಾನದ ಬಳಿಕ ಲೂರ್ದ ಮಾತೆಯನ್ನು ಪಲ್ಲಕ್ಕಿಯಲ್ಲಿ ಬಣ್ಣದ ದೀಪಗಳ ಜೊತೆ ಮೆರವಣಿಗೆ ಮಾಡಿ ಲೂರ್ದ್ ಮಾತೆಯ ಗ್ರೋಟ್ಟೊದ ಎದುರುಗಡೆ ಭಕ್ತಿಭಾವದ ಜಪಮಾಲ ಭಕ್ತಿಯನ್ನು ಆಚರಿಸಲಾಯಿತು.
ಬಲಿದಾನದ ಪ್ರಾರ್ಥನ ವಿಧಿ ಮತ್ತು ಜಪಮಾಲ ಭಕ್ತಿಯನ್ನು ಲೂರ್ದ ವಾಳೆಯವರು ನೇರವೆರಿಸಿದರು. ಶಾಂತಿ ಬರೆಟ್ಟೊ ನಿರೂಪಣೆ ಮಾಡಿದರು, ವಾಳೆಯ ಪ್ರತಿನಿಧಿ ಫಾತಿಮಾ ವಾಜ್ ಉಪಸ್ಥಿತರಿದ್ದು, ವಾಳೆಯ ಗುರಿಕಾರ ವಾಲ್ಟರ್ ಡಿಸೋಜ ವಂದಿಸಿದರು.

















































































