ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಯುವ ಜನರು ಹೆಚ್‍ಐವಿ ಇಂದ ದೂರ ಇರುವುದು ಸೂಕ್ತ, ಉತ್ತಮ ಆರೋಗ್ಯದಿಂದ ಇರುವುದು ಅತ್ಯಂತ ಅವಶ್ಯಕತೆಯಿದೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಸಂಯೋಜಕರಾದ ಡಾ.ಗುಂಡಪ್ಪ ದೇವಿಕೇರಿ ರವರು ಯುವ ಜನರಿಗೆ ಅರಿವು ಮೂಡಿಸಿದರು.
ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಸಮಾಜಕಾರ್ಯ ವಿಭಾಗ ಸ್ನಾತಕೋತ್ತರ ಕೇಂದ್ರ ಮಂಗಸಂದ್ರ ಹಾಗೂ ಶ್ರೀ ಮಂಜುನಾಥ ಐಟಿಐ ಕಾಲೇಜು ಕೋಲಾರ ರವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಯುವಜನರ ಹಕ್ಕುಗಳು, ಉದ್ಯೋಗ ಅವಕಾಶಗಳು ಮತ್ತು ಸಮಸ್ಯೆಗಳು ಹಾಗೂ ಹೆಚ್‍ಐವಿ/ಏಡ್ಸ್ ಕುರಿತಾದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನತೆಗೆ ಆಪ್ತ ಸಮಾಲೋಚನೆ ಅಗತ್ಯವಾಗಿದ್ದು ಅವರಿಗೆ ಆರೋಗ್ಯದ ಬಗ್ಗೆ ಅರಿವು ನೀಡಿ ಹೆಚ್‍ಐವಿ ಸೋಂಕಿನ ಪ್ರಮಾಣವನ್ನು ಶೂನ್ಯ ಕ್ಕೆ ತರಲು ಶ್ರಮಿಸೋಣ ಎಂದರು.
ಸಂವಾದ ಯುವ ಸಂಪನ್ಮೂಲ ಕೇಂದ್ರ ಸಂಚಾಲಕರಾದ ಸುನೀತಾ ಕೆ.ಪಿ. ಅವರು ಮಾತನಾಡಿ, ಯುವಜನರಿಗೆ ಉದ್ಯೋಗದ ಹಕ್ಕು, ಉನ್ನತ ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕು, ಆಪ್ತಸಮಾಲೋಚನಾ ಹಕ್ಕುಗಳು ಅಗತ್ಯವಾಗಿದ್ದು, ಯುವಜನ ಹಕ್ಕುಗಳು ಘೋಷಣೆ ಯಾಗಲಿ ಯುವಜನ ಆಯೋಗ ರಚನೆಯಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಂಜುನಾಥ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಗೋಟ್ಯಾಲ ರವರು ವಹಿಸಿಕೊಂಡಿದ್ದರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದÀ ಡಾ.ಶಿಲ್ಪಾ .ಆರ್ ಮತ್ತು ಸಂಪನ್ಮೂಲ ವ್ಯಕ್ತಿ, ಎಸ್‍ಎನ್‍ಆರ್ ಆಸ್ಪತ್ರೆ ಆಪ್ತಸಮಾಲೋಚಕ ಜೈಶಂಕರ್.ಕೆ ರವರು ಮಾತನಾಡಿದರು.
ಸಮಾಜಕಾರ್ಯ ವಿಭಾಗದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ವೆಂಕಟರಾಮ್.ಎಂ. ವೆನ್ನೆಲ ಎಲ್.ವಿ ಮತ್ತು ಪ್ರೀತಿ ವೈ.ಎಂ. ಇವರುಗಳು ಕಾರ್ಯಕ್ರಮವನ್ನು ಆಯೋಜಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮಂಗಸಂದ್ರ ಸಮಾಜಕಾರ್ಯ ವಿಭಾಗದ ಸಂಯೋಜಕರು ಮತ್ತು ಉಪನ್ಯಾಸಕರು ಹಾಗೂ ಶ್ರೀ ಮಂಜುನಾಥ ಐಟಿಐ ಕಾಲೇಜು ಮಂಗಸಂದ್ರ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.