ಕುಂದಾಪುರ, ಸೆ. 13: ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಸ್ಕರ್ ಫೆರ್ನಾಂಡೀಸ್ ಮೂರನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ ಶೆಟ್ಟಿಯವರು ಮಾತನಾಡಿ , ಆಸ್ಕರ್ ಫೆರ್ನಾಂಡೀಸ್ ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿದ್ದರು ,ತಮ್ಮ ಸರಳ ವ್ಯಕ್ತಿತ್ವದಿಂದ ಜನಸಾಮಾನ್ಯರ ಅಗತ್ಯಗಳನ್ನು ಸ್ಪಂದಿಸುತ್ತಿದ್ದರು. ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದಲ್ಲಿ ಪ್ರಾರಂಭಿಸುವಾಗ ಕೇಂದ್ರ ಸರ್ಕಾರದಿಂದ ಅನುದಾನವನ್ನು ನೀಡಿ ಪ್ರೋತ್ಸಾಹಿಸಿದ್ದು ಸ್ಮರಣೀಯವೆಂದರು.
ಅನೇಕ ಬಾರಿ ಮುಖ್ಯಮಂತ್ರಿ ಸ್ಥಾನ ದೊರಕುವ ಅವಕಾಶವಿದ್ದರೂ ನಿರಾಕರಿಸಿದ ಆಸ್ಕರಣ್ಣ, ಕರಾವಳಿ ಭಾಗದ ಅಭಿವೃದ್ಧಿಗೆ ಶ್ರಮಿಸಿದರು ಎಂದು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಕೆದೂರು ಸದಾನಂದ ಶೆಟ್ಟಿ ಹೇಳಿದರು.
ನಾಯಕರಾದ ದಿನೇಶ್ ಹೆಗ್ಡೆಯವರು, ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ , ವಿಕಾಸ್ ಹೆಗ್ಡೆ ಆಸ್ಕರ್ ಫೆರ್ನಾಂಡೀಸ್ ಅವರ ರಾಜಕೀಯ ಜೀವನ ನಮಗೆಲ್ಲ ಮಾರ್ಗದರ್ಶಿ ಎಂದು ನೆನಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಪುರಸಭೆ ಸದಸ್ಯರಾದ ಶ್ರೀಧರ ಶೇರಿಗಾರ್ ,ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ, ವಿಜಯದರ್ ಕೆ ವಿ , ಗಣಪತಿ ಶೆಟ್, ರೋಷನ್ ಬರೆಟ್ಟೊ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ ,ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್, ಗ್ಯಾರೆಂಟಿ ಅನುಷ್ಠಾನ ತಾಲೂಕು ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ , ಆಶಾ ಕರ್ವಾಲ್ಲೊ, ಮಾಜಿ ಜಿಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ, ರಾಜ್ಯ ಐಟಿ ಸೆಲ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಸದಾನಂದ ಖಾರ್ವಿ, ಅಶೋಕ್ ಸುವರ್ಣ, ಕೇಶವ್ ಭಟ್, ರಕ್ಷಿತ್ ಶೆಟ್ಟಿ ,ಶೋಭಾ ಸಚ್ಚಿದಾನಂದ, ರಿಯಾಜ್ ಕೋಡಿ, ದಿನೇಶ್ ಬೆಟ್ಟ, ಲಕ್ಷ್ಮಣ ಬರೆಕಟ್ಟು ,ಜೋಸೆಫ್ ರೆಬೆಲ್ಲೊ, ವೇಣುಗೋಪಾಲ, ಮೇಬಲ್ ಡಿಸೋಜಾ, ಶಶಿಧರ, ಕೆಎಸ್ ವಿಜಯ, ಪ್ರೀತಮ್ ಕರ್ವಾಲ್ಲೊ , ದಿನೇಶ್ ಮೊಗವೀರ, ಜೂಲಿಯೆಟ್ ಪಾಯ್ಸ್ ,ಸಂಗೀತ ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ನಿರೂಪಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೆರೀಗಾರ್ ವಂದಿಸಿದರು.