

ಕೋಲಾರ: “ಮಣ್ಣಿನ ಆರೋಗ್ಯ ಹಾಗೂ ಸುಸ್ಥಿರ ಹಿಪ್ಪುನೇರಳೆ ಸೊಪ್ಪು ಮತ್ತು ರೇಷ್ಮೆಗೂಡಿನ ಇಳುವರಿಗೆ ಸಾವಯವ ಆಧಾರಿತ ಬೇಸಾಯ ಕ್ರಮಗಳು ” ಸಾಮಥ್ರ್ಯ ವೃದ್ಧಿ ತರಬೇತಿ ಕಾರ್ಯಕ್ರಮ ವನ್ನು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ ರೇಷ್ಮೆ ಇಲಾಖೆ, ಜಿ.ಪಂ., ಕೋಲಾರ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಮಡಿವಾಳ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 28.06.2023 ರಂದು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ಆಯೋಜಿಸಲಾಗಿತ್ತು.
ಕೋಲಾರ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕರಾದ ಶ್ರೀ. ಮಂಜುನಾಥ್, ಎಂ. ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಇತ್ತೀಚಿಗೆ ಕೀಟನಾಶಕಗಳು, ಕಳೆನಾಶಕಗಳು ಮತ್ತು ಎಲೆ ಸಿಂಪರಕಗಳ ವಿವೇಚನಾರಹಿತ ಬಳಕೆಯಿಂದ, ಹಿಪ್ಪುನೇರಳೆ ತೋಟದ ಮಣ್ಣು ಅಥವಾ ಸೊಪ್ಪು ಕಲುಷಿತಗೊಳ್ಳುತ್ತಿದ್ದು, ಕೀಟದ ಜಾತಿಗೆ ಸೇರಿದ ಸೂಕ್ಷ್ಮ ಪ್ರಾಣಿಯಾದ ರೇಷ್ಮೆಹುಳು ಈ ರೀತಿಯ ಮಲಿನ ವಸ್ತುಗಳಿಂದಾಗಿ ವಿವಿಧ ವಿಚಿತ್ರ ಲಕ್ಷಣಗಳನ್ನು ತೋರ್ಪಡಿಸುತ್ತಾ ಸಾವನ್ನಪ್ಪುತ್ತಿದ್ದು ರೇಷ್ಮೆ ಬೆಳೆಗಾರರು ಹುಳುಗಳ ರೋಗಕ್ಕಿಂತಲೂ ಈ ತರಹದ ಸಮಸ್ಯೆಯಿಂದ ಹೆಚ್ಚಾಗಿ ಬೆಳೆ ಕಳೆದುಕೊಳ್ಳುತ್ತಿದ್ದಾರೆ, ಈ ನೀಟ್ಟಿನಲ್ಲಿ ರೇಷ್ಮೆ ಬೆಳೆಗಾರರು ಹಿಪ್ಪುನೇರಳೆಗೆ ಸಾವಯವ ಪದ್ಧತಿಯಲ್ಲಿ ತೋಟ ನಿರ್ವಹಣೆ ಹಾಗೂ ವೈಜ್ಞಾನಿಕವಾಗಿ ಶಿಪಾರಸು ಮಾಡಿರುವ ಸುರಕ್ಷೀತ ಕೀಟನಾಶಕಗಳನ್ನು ಮಾತ್ರ ಹಿಪ್ಪುನೇರಳೆ ತೋಟಗಳಿಗೆ ಆದ್ಯತೆ ಮೆರೆಗೆ ಬಳಸಬೇಕೆಂದು ತಿಳಿಸಿದರು.
ರೇಷ್ಮೆ ಉಪನಿರ್ದೇಶಕರಾದ ಶ್ರೀ. ಟಿ. ಎಂ. ಕಾಳಪ್ಪರವರು ಉದ್ಘಾಟನೆಯನ್ನು ನೆರವೇರಿಸಿ ಕೋಲಾರ ಜಿಲ್ಲೆ ಮಾತ್ರವಲ್ಲದೆ ರೇಷ್ಮೆ ಬೆಳೆಯುವ ಇತರ ಜಿಲ್ಲೆಗಳಲ್ಲೂ ಸಹ ಇತ್ತೀಚಿನ ದಿನಗಳಲ್ಲಿ ರೇಷ್ಮೆ ಬೆಳೆಗಾರರು ರೇಷ್ಮೆಹುಳು ಗೂಡು ಕಟ್ಟದೆ ಬೆಳೆ ನಷ್ಟವನ್ನು ಅನುಭವಿಸುತ್ತಿರುವುದು ವರದಿಯಾಗುತ್ತಿದ್ದು ಇದಕ್ಕೆ ಮುಖ್ಯಕಾರಣ ಅರಿವಿಲ್ಲದೆ ಇತರ ಬೆಳೆಗಳಿಗೆ ಕೀಟನಾಶಕಗಳು ಬಳಸಿದಾಗ ಕೀಟನಾಶಕದ ವಿಷಕಾರಿ ಅಂಶದ ಪ್ರಬಾವವು ಗಾಳಿ ಹಾಗೂ ಮಣ್ಣಿನ ಮುಖಾಂತರ ಸೊಪ್ಪಿಗೆ ಸೇರುವುದರಿಂದ ರೇಷ್ಮೆಹುಳುಗಳು ತಿಂದಾಗ ಸರಿಯಾಗಿ ಗೂಡು ಕಟ್ಟದೆ ಇರುವುದು ಕಂಡುಬಂದಿದೆ ಹಾಗೆಯೇ ಖಾಸಗಿ ಕಂಪನಿಗಳಿಂದ ತಯಾರಾಗುವ ಜೈವಿಕ ಕೀಟನಾಶಕಗಳು ಹಿಪ್ಪುನೇರಳೆಗೆ ಬಳಸಿದಾಗ 2 ರಿಂದ 3 ಬೆಳೆಗಳ ನಂತರ ನಿಧನವಾಗಿ ಅವುಗಳ ಪರಿಣಾಮ ಕಂಡುಬಂದಿರುವುದಾಗಿ ವಿಜ್ಞಾನಿಗಳು ತಿಳಿಸುತ್ತಿದ್ದು ರೇಷ್ಮೆಬೆಳೆಗಾರರು ಮುಂಜಾಗ್ರತ ಕ್ರಮಗಳನ್ನು ಅಳವಡಿಸಿಕೊಂಡು ಸಾವಯವ ಪದ್ಧತಿಯಲ್ಲಿ ಪೀಡೆನಿರ್ವಹಣೆ ಕೈಗೊಳ್ಳಬೇಕೆಂದು ಬಳಸಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶ್ರೀ. ಎಸ್. ಎನ್. ಶ್ರೀನಿವಾಸ್, ರೇಷ್ಮೆ ಉಪನಿರ್ದೇಶಕರು, ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ, ಕೋಲಾರರವರು ಮಾತನಾಡಿ, ಹಿಪ್ಪುನೇರಳೆ ತೋಟದ ಪಕ್ಕದ ಬೆಳೆಗಳಿಗೆ ಬೂಮರ್ / ಪ್ರೆಷರ್ ಪಂಪ್‍ಗಳಿಂದ ಸಿಂಪಡಿಸಿದ ಕೀಟನಾಶಕ / ಕಳೆನಾಶಕದ ತುಂತುರು ಕಣಗಳು ಗಾಳಿಯ ಮೂಲಕ ಪಸರಿಸಿ, ಸೊಪ್ಪಿನ ಮೇಲೆ ನೆಲೆ ನಿಂತಾಗ ಅಂತಹ ಸೊಪ್ಪನ್ನು ತಿಂದ ಹುಳುಗಳು 5ನೇ ಹಂತದವರೆಗೂ ಆರೋಗ್ಯವಾಗಿದ್ದು, ಹಣ್ಣಾದ ಹುಳುಗಳು ಹಸಿರು ಬಣ್ಣದ ರಸವನ್ನು ವಾಂತಿ ಮಾಡಿಕೊಂಡು ಮೋಟಾಗಿ ನಂತರ ಸಾವನ್ನಪ್ಪುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ರೇಷ್ಮೆಬೆಳೆಗಾರರು ಹಿಪ್ಪುನೇರಳೆ ತೋಟಗಳಿಗೆ ಸಾವಯವ ಪದ್ದತಿಯ ಮೂಲಕ ಮಳೆಗಾಲದಲ್ಲಿ ಹಸಿರೆಲೆ ಗೊಬ್ಬರಗಳನ್ನು ಬೆಳೆದು ಮಣ್ಣಿಗೆ ಸೇರಿಸುವುದು ಹಾಗೂ ಶಿಫಾರಿತ ಕೊಟ್ಟಿಗೆ ಗೊಬ್ಬರವನ್ನು ಮುಂಗಾರು ಹಾಗೂ ಹಿಂಗಾರಿನಲ್ಲಿ ಎರಡು ಸಮ ಕಂತುಗಳಲ್ಲಿ ನೀಡುವುದು, ಟ್ರೇಂಚಿಂಗ್ ಮತ್ತು ಮಲ್ಚಿಂಗ್ ತಾಂತ್ರಿಕತೆ ಅಳವಡಿಸುವ ಮೂಲಕ ಸಾವಯವ ಅಂಶವನ್ನು ವೃದ್ಧಿಗೊಳಿಸಿ ಮಣ್ಣಿನ ಪಲವತ್ತತೆಯನ್ನು ಕಾಪಾಡಬೇಕೆಂದು ಹಾಗೂ ಕಡ್ಡಾಯವಾಗಿ 7 ದಿನಗಳ ನಂತರ ಚಂದ್ರಿಕೆಯಿಂದ ಗೂಡು ಬಿಡಿಸಿ ಕಳಪೆ ಗೂಡುಗಳನ್ನು ವಿಂಗಡಿಸಿ ಉತ್ತಮ ಗೂಡುಗಳನ್ನು ಮಾತ್ರ ಮಾರುಕಟ್ಟೆಗೆ ತರುವುದರಿಂದ ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಪಡೆಯಬಹುದೆಂದು ತಿಳಿಸಿದರು.
ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿಗಳಾದ ಡಾ. ಜೆ.ಬಿ. ನರೇಂದ್ರಕುಮಾರ್ ರವರು ಪ್ರಸ್ತುತ ಮುಂಗಾರು ಮಳೆ ನೀರಿಕ್ಷಿತ ಮಟ್ಟದಲ್ಲಿ ಬಿಳದೆ, ಒಣಹವೆ ಮುಂದುವರೆದಿದ್ದು ಹಾಗೂ ಆಸಾಢ ಮಾಸದ ಗಾಳಿಯಿಂದಾಗಿ ಹಿಪ್ಪುನೇರಳೆಯಲ್ಲಿ ಮೈಟ್ಸ್ ನುಸಿಯ ಹಾವಳಿ ಅಧಿಕವಾಗಿದ್ದು ರೇಷ್ಮೆ ಬೆಳೆಗಾರರು ಕಡ್ಡಾಯವಾಗಿ ತೋಟ ಕಟವಾದ 15 ದಿನಗಳಲ್ಲಿ ನುಶಿನಾಶಕವಾದ ಪೆನಜಾಕ್ವೀನ್ 30% ಇ.ಸಿ. 1.50 ಎಂ.ಎಲ್ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಿಸುವುದು ಇದಾದ 10 ದಿನಗಳ ನಂತರ ವೆಟ್ಟಬಲ್ ಸಲ್ಪರ್ 3 ಗ್ರಾಂನಂತೆ ಕಾಂಡದ ಮತ್ತು ಎಲೆಯ ಮೇಲೆ ಸಿಂಪಡಿಸುವುದರಿಂದ ಪೀಡೆನಿರ್ವಹಣೆ ಮಾಡಬಹುದೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಸಸ್ಯರೋಗಶಾಸ್ತ್ರದ ವಿಜ್ಞಾನಿಯಾದ ಡಾ. ಸದಾನಂದ ಮುಶ್ರೀಪ್ ಹಾಗೂ ಡಾ. ಶಶಿಧರ್ ಕೆ.ಆರ್‍ರವರು ಮರಳು ಮಿಶ್ರಿತ ಮಣ್ಣು, ನೀರಾವರಿ ಸೌಲಭ್ಯವಿರುವ ಹಾಗು ಸಾವಯವ ಅಂಶ ಕಡಿಮೆ ಇರುವ ನೆಲದಲ್ಲಿ ಜಂತುಹುಳುವಿನ ಬಾದೆ ಅತೀ ಹೆಚ್ಚಾಗಿ ಕಂಡುಬರುತ್ತಿದ್ದು ಹಿಪ್ಪುನೇರಳೆ ಸಸ್ಯದ ಬೇರಿಗೆ ಹಾನಿಯನ್ನುಂಟು ಮಾಡಿ ಮಣ್ಣಿನ ಮುಖಾಂತರ ಹರಡುವ ಬೇರಿನ ಕಪ್ಪುಕೊಳೆ ಹಾಗು ಕಾಂಡದ ಕ್ಯಾಂಕರ್‍ನಂತಹ ರೋಗಗÀಳಿಗೆ ತುತ್ತಾಗುವಂತೆ ಮಾಡುತ್ತದೆ. ಇದರ ನಿರ್ವಹಣೆಗೆ ಜಂತುನಾಶಕ ಶಿಲೀಂದ್ರ, ವರ್ಟಿಸಿಲಿಯಮ್ ಕ್ಲಮೈಡೋಸ್ಪೋರಿಯಂ (1 ಕೆ.ಜಿ. + 200 ಕೆ.ಜಿ. ಕೊಟ್ಟಿಗೆ ಗೊಬ್ಬರ + 24 ಕೆ.ಜಿ. ಬೇವಿನ ಹಿಂಡಿ, ಒಂದು ವಾರದ ನಂತರ ಗಿಡವೊಂದಕ್ಕೆ 200 ಗ್ರಾಂ. ಮಿಶ್ರಣ ಪ್ರತಿ 4 ತಿಂಗಳಿಗೊಮ್ಮೆ 2 ವರ್ಷಗಳವರೆಗೆ) ಬಳಕೆ ಮಾಡುವುದು ಹಾಗೂ ಪ್ಯಾಸಿಲೋಮೈಸಿಸ್ ಲಿಲಾನಸ್ 5 ಕೆ.ಜಿ.ಯನ್ನು 200 ಕೆ.ಜಿ. ಬೇವಿನ ಹಿಂಡಿಯೊಂದಿಗೆ 15 ದಿನಗಳವರೆಗೆ ಪುಷ್ಠಿಕರಿಸಿ ಗಿಡದ ಬೇರಿನ ಸುತ್ತ 250ಗ್ರಾಂ ನಂತೆ ನೀಡುವುದರಿಂದ ಜೈವಿಕ ಪದ್ಧತಿಯಲ್ಲಿ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಮಣ್ಣು ವಿಜ್ಞಾನಿಯಾದ ಡಾ. ಎಸ್. ಅನಿಲ್ ಕುಮಾರ್ ಹಾಗೂ ಸಾವಯವ ರೇಷ್ಮೆಕೃಷಿಕರಾದ ಸಿ.ಎಲ್.ನಾಗರಾಜು ಚಿಟÀ್ನಹಳ್ಳಿರವರು ಸಾವಯವ ಪದ್ದತಿಯಲ್ಲಿ ಹಿಪ್ಪುನೇರಳೆ ಬೇಸಾಯ ಕ್ರಮಗಳ ಬಗ್ಗೆ ತಿಳಿಸುತ್ತ ಪ್ರತಿಯೊಬ್ಬ ರೇಷ್ಮೆ ಬೆಳೆಗಾರರು ಮನೆಯಲ್ಲಿ ನಾಟಿಹಸು ಸಾಕಾಣಿಕೆ ಮಾಡುವುದರಿಂದ ಹಸುವಿನ ಗಂಜಲ, ಸಗಣಿಯನ್ನು ಬಳಕೆ ಮಾಡಿಕೊಂಡು ಜೀವಾಮೃತ ತಯಾರಿಸಿ ಬಳಸುವುದು, ದ್ರವರೂಪದ ನೀಮಾಸ್ತ್ರ ಹಾಗೂ ಧಶಪರ್ಣಿ ತಯಾರಿಸಿ ಹಿಪ್ಪುನೇರಳೆಗೆ ಬರುವ ರಸಹೀರುವ ಕೀಟಗಳು, ಕುಡಿತಿನ್ನುವ ಕೀಟ ಹಾಗೂ ಶೀಲೀಂದ್ರ ರೋಗಗಳನ್ನು ನಿಯಂತ್ರಿಸುವುದರ ಜೋತೆಗೆ ಮಣ್ಣಿನ ಪಲವತ್ತತೆ ಕಾಪಾಡಬಹುದು ಎಂದು ತಿಳಿಸಿದರು.
ಕೊನೆಯಲ್ಲಿ ಕೋಲಾರ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕರಾದ ಶ್ರೀ. ಮಂಜುನಾಥ್, ಎಂ. ರವರು ಜೂನ್ 30 ರಂದು ವಯೋನಿವೃತ್ತಿ ಹೊಂದುತ್ತಿದ್ದು ಸದರಿಯವರು ರೇಷ್ಮೆಕೃಷಿ ವಿಸ್ತರಣೆಗೆ ಮತ್ತು ಅಬಿವೃದ್ಧಿಗೆ ಸಲ್ಲಿಸಿರುವ ಕಾರ್ಯಗಳನ್ನು ಸ್ಮರಿಸುತ್ತ ಕೃಷಿ ವಿಜ್ಞಾನ ಕೇಂದ್ರದಿಂದ ಗೌರವಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಕೋಲಾರ ತಾಲ್ಲೂಕಿನ ಸುಮಾರು 75 ರೇಷ್ಮೆ ಬೆಳೆಗಾರರು ಹಾಗೂ ಕೋಲಾರ ವಿಭಾಗದ ರೇಷ್ಮೆ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.


