

ಕೋಲಾರ,ಅ.17: ನಗರದ ಸಾಯಿಧಾಮ್ ಹೋಟೆಲ್ನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಓರಾ ಫೈನ್ ಜ್ಯುವೆಲರಿ ಆಭರಣ ಪ್ರದರ್ಶನಕ್ಕೆ ಶ್ರೇಯಾ ಆಸ್ಪತ್ರೆಯ ಡಾ. ವಂದನಾ ಅವರು ಇಂದು ಚಾಲನೆ ನೀಡಿದರು.
ಶನಿವಾರದವರೆಗೂ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ವೀಕ್ಷಿಸಿ ಆಭರಣಗಳನ್ನು ಖರೀದಿ ಹಾಗೂ ಲೋನ್ ಮುಖಾಂತರ ಖರೀದಿ ಹಾಗೂ ಜಿರೋ ಡೌನ್ ಫೇಮಂಟ್ ಮೂಲಕವೂ ಸಹ ಖರೀದಿ ಮಾಡಬಹುದು.
ಈ ಸಂದರ್ಭದಲ್ಲಿ ಕೋಲಾರ ನರ್ಸಿಂಗ್ ಹೋಂನ ಡಾ.ಹಮಾ, ಡಾ.ಶಶಿಕಲಾ ಶಂಕರ್, ವ್ಯವಸ್ಥಾಪಕ ಲೋಕೇಶ್ರೆಡ್ಡಿ, ಸೋಮಶರ್ಮ ಉಪಸ್ಥಿತರಿದ್ದರು.

